Get Updates
Get notified of breaking news, exclusive insights, and must-see stories!

ಎನ್‌ಆರ್‌ಐಗಳೇ - ಇಲ್ಲಿದೆ ನಿಮ್ಮನೆ, ಬಂದು ಬಿಡಿ ಸುಮ್ಮನೆ

* ಸಂಜಯ್‌ ಸೂರಿ

ಲಂಡನ್‌ : ಅನಿವಾಸಿ ಭಾರತೀಯರನ್ನು ತಾಯ್ನಾಡಿನೊಂದಿಗೆ ಬೆಸೆಯುವ ಮಹತ್ವದ ಕಾರ್ಯತಂತ್ರವೊಂದರ ರಚನೆಯಲ್ಲಿ ಭಾರತ ಸರ್ಕಾರ ತೊಡಗಿದ್ದು , ಈ ನಿಟ್ಟಿನಲ್ಲಿ ಎನ್‌ಆರ್‌ಐಗಳಿಗಾಗಿ ಹೊಸತೊಂದು ವಿಶ್ವ ವಿದ್ಯಾನಿಲಯ ಹಾಗೂ ಭಾರತೀಯ ಸಂಸ್ಕೃತಿ ಕೇಂದ್ರಗಳನ್ನು ವಿಶ್ವದ ವಿವಿಧೆಡೆ ಸ್ಥಾಪಿಸಲಾಗುವುದು ಎಂದು ಉನ್ನತ ಸಮಿತಿಯಾಂದರ ಅಧ್ಯಕ್ಷ ಎಲ್‌.ಎಂ. ಸಿಂಘ್ವಿ ಹೇಳಿದ್ದಾರೆ.

ಎನ್‌ಆರ್‌ಐಗಳು ಭಾರತದ ರಾಷ್ಟ್ರೀಯ ಸಂಪತ್ತು ಎನ್ನುವುದು ಸಿಂಘ್ವಿ ಅವರ ಸ್ಪಷ್ಟ ಅಭಿಪ್ರಾಯ. ಆರ್ಥಿಕತೆ ಅವರನ್ನು ದೇಶದಿಂದ ಬೇರ್ಪಡಿಸಿದೆ. ಅವರನ್ನು ಮತ್ತೆ ತಾಯ್ನಾಡಿನೊಂದಿಗೆ ಬೆಸೆಯುವುದು ಅಗತ್ಯ ಎನ್ನುತ್ತಾರೆ ಸಿಂಘ್ವಿ . ಅಂದಹಾಗೆ, ಅವರು ಬ್ರಿಟನ್ನಿನಲ್ಲಿ ಭಾರತೀಯ ರಾಯಭಾರಿ ಹುದ್ದೆ ನಿರ್ವಹಿಸಿದವರು, ಸದ್ಯಕ್ಕೆ ನಿವೃತ್ತರು.

ಸಿಂಗ್‌- ಸಮರ್ಥ ನ್ಯಾಯಮೂರ್ತಿ ಹಾಗೂ ಸಂಸದ, ಇವರು ಸದ್ಯದಲ್ಲಿಯೇ ಮಧ್ಯ ಪ್ರಾಚ್ಯ, ಯುರೋಪ್‌ ಹಾಗೂ ಆಫ್ರಿಕಾಗಳಿಗೆ ತಮ್ಮ ನೇತೃತ್ವದ ತಂಡ ಭೇಟಿ ಕೊಟ್ಟ ಬಗೆಗಿನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದ್ದಾರೆ. ಅವರ ತಂಡ ಶೀಘ್ರದಲ್ಲಿಯೇ ಅಮೆರಿಕ ಹಾಗೂ ಕೆರೆಬಿಯನ್‌ಗಳಿಗೆ ಭೇಟಿ ಕೊಡಲಿದೆ. ಸಿಂಘ್ವಿ ಅವರ ಪ್ರಕಾರ, ಪ್ರಧಾನಿ ವಾಜಪೇಯಿ ಅವರು, ರೆಕಮಂಡೇಶನ್‌ಗಳ ಪೈಕಿ ತುರ್ತು ಆದ್ಯತೆಗಳನ್ನು ಮೊದಲಿಗೆ ಪೂರೈಸುವರು. ಹೊಸ ಪ್ರಸ್ತಾವನೆಗಳಲ್ಲಿ ಎನ್‌ಆರ್‌ಐಗಳಿಗೆ ವಿಶ್ವವಿದ್ಯಾಲಯ ನಿರ್ಮಿಸುವುದು ಹಾಗೂ ಭಾರತೀಯ ಸಂಸ್ಕೃತಿ ಕೇಂದ್ರಗಳನ್ನು ವಿಶ್ವಾದ್ಯಂತ ಸ್ಥಾಪಿಸುವುದು ಸೇರಿದೆ.

ವಲಸೆ ಇತಿಹಾಸ ಕಾಲದಿಂದಲೂ ಇತ್ತು : ಅನಿವಾಸಿ ಭಾರತೀಯರಲ್ಲಿ ದೇಶಪ್ರೇಮವನ್ನು ಮೂಡಿಸುವುದು ಅತ್ಯಂತ ಮುಖ್ಯ. ಜನರು ವಿವಿಧ ಕಾರಣಗಳಿಗಾಗಿ ವಲಸೆ ಹೋಗಿದ್ದಾರೆ. ಇದನ್ನು ಇತಿಹಾಸದಲ್ಲೂ ಕಾಣಬಹುದು. ಬೌದ್ಧರ ವಲಸೆಯನ್ನೂ ಉದಾಹರಿಸಬಹುದು. ಆದರೆ, ಆಧುನಿಕ ಯುಗದಲ್ಲಿ ವಲಸೆಯ ದಾರಿಗಳನ್ನು ತೆರೆದದ್ದು ಬ್ರಿಟೀಷ್‌ ಸಾಮ್ರಾಜ್ಯ ಎನ್ನುತ್ತಾರೆ ಸಿಂಘ್ವಿ .

ಪಶ್ಚಿಮ ಏಷ್ಯಾದ ವಿವಿಧ ಭಾಗಗಳಲ್ಲಿರುವ ಭಾರತೀಯರ ಮನ ಮನೆಗಳೆಲ್ಲಾ ಭಾರತದಲ್ಲೇ ಇವೆ. ಈ ಪರಿಸ್ಥಿತಿಯೇ ಬಹುತೇಕ ಅನಿವಾಸಿ ಭಾರತೀಯರದ್ದು . ಅವರೆಲ್ಲಿದ್ದರೂ ಅವರ ಬೇರುಗಳಿರುವುದು ತಾಯ್ನಾಡಿನಲ್ಲೇ. ಈ ಕಾರಣದಿಂದಾಗಿಯೇ ದಕ್ಷಿಣ ಆಫ್ರಿಕಾದಲ್ಲಿ ನ ಎನ್‌ಆರ್‌ಐಗಳು ದ್ವಿರಾಷ್ಟ್ರೀಯತೆಯನ್ನು ಇಷ್ಟಪಡುವುದಿಲ್ಲ .

ಅನಧಿಕೃತ ವಲಸೆಯಲ್ಲಿ ಹೃದಯ ವಿದ್ರಾವರ ಘಟನೆಗಳು : ತಮ್ಮ ಸಮಿತಿ, ಅನಧಿಕೃತ ವಲಸೆಗಳ ಪ್ರಕರಣಗಳ ಬಗ್ಗೆ ವಿಶೇಷ ಮುತುವರ್ಜಿ ವಹಿಸುತ್ತದೆ ಎನ್ನುತ್ತಾರೆ ಸಿಂಘ್ವಿ. ಶೀತ ಕೊಠಡಿಗಳಲ್ಲಿ ಸತ್ತವರನ್ನು ಹಾಗೂ ಸಮುದ್ರದಲ್ಲಿ ಮುಳುಗಿ ಸತ್ತವರನ್ನು ಅನಧಿಕೃತ ವಲಸೆ ಸಂದರ್ಭಗಳಲ್ಲಿ ಸಾಕಷ್ಟು ಕಾಣಬಹುದು. ಇಂಥಾ ಹೃದಯ ವಿದ್ರಾವಕ ಘಟನೆಗಳನ್ನು ಕೊನೆಗೊಳಿಸಬೇಕಾದರೆ, ಮೊದಲು ಕನಸುಗಳನ್ನು ಮಾರುವ ಏಜಂಟರನ್ನು ನಿಯಂತ್ರಿಸಬೇಕು. ವಿದೇಶಗಳಿಗೆ ಹೋಗುವವರಿಗಾಗಿ ಕ್ರಮಬದ್ಧ ಪದ್ಧತಿ ಜಾರಿಗೂ ಸಮಿತಿ ಶ್ರಮಿಸುವುದು- ಸಿಂಘ್ವಿ ಅವರ ಮುಂದಿರುವ ಯೋಜನೆಗಳು ನೂರು.

ಈ ಎಲ್ಲಾ ವಿಷಯಗಳಲ್ಲಿ ಆರ್ಥಿಕತೆ ಬಹಳ ಮುಖ್ಯವಾದುದು. ಆರ್ಥಿಕತೆಯೇ ಜನರನ್ನು ದೇಶದಿಂದ ದೂರ ಮಾಡುತ್ತದೆ. ಅ ದೇ ಆರ್ಥಿಕತೆ ಭವಿಷ್ಯದಲ್ಲಿ ಅವರನ್ನು ದೇಶದೊಂದಿಗೆ ಬೆಸೆಯಬೇಕು ಎನ್ನುವಾಗ ಸಿಂಘ್ವಿ ಕಣ್ಣುಗಳಲ್ಲಿ ಎನ್‌ಆರ್‌ಐಗಳನ್ನು ಭಾರತದೊಂದಿಗೆ ಬೆಸೆಯುವ ದೊಡ್ಡ ಕನಸು ಮಿಂಚುತ್ತದೆ.

(ಐಎಎನ್‌ಎಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+