ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಸುಳ್ಳು ಹೇಳಿ ಸಿಕ್ಕಿ ಬೀಳಲಿಲ್ಲವಲ್ಲ ಅಂತ ಸಮಾಧಾನ ಪಟ್ಟುಕೊಳ್ಳಬೇಡಿ. ಮುಂದೆ ತೊಂದರೆಯಾಗಬಹುದು. ಮತ್ತೆ, ನಿಮ್ಮ ಬಳಿಗೆ ಬರಬೇಕಿರುವ ಕೀರ್ತಿ ನಿಮ್ಮ ಬಿಟ್ಟು ಎತ್ತಲೂ ಹೋಗುವುದಿಲ್ಲ.ವೃಷಭ : ಇವತ್ತೆಲ್ಲಾ ಆಫೀಸು ಕೆಲಸದಲ್ಲಿ ವ್ಯಸ್ತರಾಗಿರುತ್ತೀರಿ. ಸಂಜೆ ಪಾರ್ಕು, ಸಿನೆಮಾ ಅಂತ ಸುತ್ತಾಡಲಾಗದು ಅಲ್ಲವೇ ? ಆದ್ದರಿಂದ ಕಷ್ಟಪಟ್ಟು ಇವತ್ತು ಕೂಲ್ ಆಗಿರಿ. ದುಡಿತಕ್ಕೆ ತಕ್ಕ ಪ್ರತಿಫಲ ಸದ್ಯದಲ್ಲೇ ಸಿಗಲಿದೆ.
ಮಿಥುನ : ಯಾರಿಗೋ ಚೆನ್ನಾಗಿ ದಬಾಯಿಸಬೇಕು ಅಂದುಕೊಂಡಿದ್ದೀರಿ. ಆದರೆ ಹಾಗೆಲ್ಲಾ ನಿಮ್ಮ ಎಲ್ಲ ಸ್ನೇಹಿತರು ಒಂದೇ ರೀತಿ ಇರುತ್ತಾರೆ ಎಂದು ಯೋಚಿಸಿದರೆ ತಪ್ಪಾಗುವುದಿಲ್ಲವೇ ? ಓದಿಗೆ ಬರುವ ಅಡೆತಡೆಯನ್ನು ನಿಭಾಯಿಸಿಕೊಳ್ಳಬೇಕು.
ಕಟಕ : ಆಧ್ಯಾತ್ಮದತ್ತ ಒಲವು ಇದೆ ಅಲ್ಲವಾ ? ನಿಮಗಿತ್ತು ಖುಷಿಯ ಸಂಜೆ ಕಾದಿದೆ. ಮನೆಯವರು ಇದರಿಂದ ಬೇಸರ ಮಾಡಿಕೊಂಡರೆ ಸಮಾಧಾನಪಡಿಸುವ ಜವಾಬ್ದಾರಿಯನ್ನು ಮಾತ್ರ ಯಶಸ್ವಿಯಾಗಿ ನಿಭಾಯಿಸಬೇಕು.
ಸಿಂಹ : ಆಫೀಸಿನಲ್ಲಿ ಸಿಕ್ಕ ಗೆಲುವಿನಿಂದ ಮನಸ್ಸು ಉಲ್ಲಾಸವಾಗಿರುತ್ತದೆ. ಯೋಚನೆಗಳು, ಕನಸುಗಳು ನಿಮ್ಮನ್ನು ಗಗನಕ್ಕೇರಿಸುತ್ತವೆ. ಖುಷಿಯಾಗಿರಲು ಬೇರೆ ಕಾರಣ ಬೇಕೆ ?
ಕನ್ಯಾ : ಉನ್ನತ ವ್ಯಾಸಂಗದಲ್ಲಿನ ಆಸಕ್ತಿ ನಿಮಗೆ ಏಕಾಗ್ರತೆ ತಂದುಕೊಡುತ್ತದೆ. ಇತರ ಹಾಳು ಮೂಳು ಯೋಚನೆಗಳಿಂದ ಮನಸ್ಸು ಕೆಡಿಸಿಕೊಂಡು ದಿನ ಹಾಳು ಮಾಡಿಕೊಳ್ಳಬೇಡಿ.
ತುಲಾ : ಮನೆ ಮಠ ಎಂದು ಇಷ್ಟು ದಿನ ದುಡಿದಿರುವುದಕ್ಕೆ ನಷ್ಟ ಕಾಣಲಿಲ್ಲವಲ್ಲ ಎಂಬ ಸಮಾಧಾನದ ನಿಟ್ಟುಸಿರು ಬಿಡುತ್ತೀರಿ. ಇವತ್ತು ಸಂಜೆಯ ಶುಭ ಸುದ್ದಿ ನಿಮ್ಮನ್ನು ವಾರವಿಡೀ ಖುಷಿ ಪಡುವಂತೆ ಮಾಡುತ್ತದೆ.
ವೃಶ್ಚಿಕ : ದೂರದ ಪ್ರಯಾಣ ಸದ್ಯದಲ್ಲಿಯೇ ಕೈಗೂಡಲಿದೆ. ಹಿರಿಯರು ಹೇಳುವ ವಿಚಾರಗಳು ಕಿರಿಕಿರಿ ಎನಿಸಿದರೂ ಅವು ನಿಮ್ಮ ಒಳ್ಳೆಯದಕ್ಕೇ ತಾನೇ ? ನೀವು ಮನಸ್ಸು ಮಾಡಿದರೆ ಶುಭ ಕಾರ್ಯ ದೂರವಿಲ್ಲ.
ಧನಸ್ಸು : ಧನವಿಯೋಗ . ಸಾಲ ಮಾಡುವ ಉಸಾಬರಿ ಇವತ್ತು ಬೇಡ. ಇವತ್ತು ಸ್ವಲ್ಪ ಕೂಲ್ ಆಗಿದ್ದರೆ ನಂತರ ಚಿಂತೆ ನಿಮ್ಮ ಬಳಿ ಸುಳಿಯದು. ಮನೆ ಮಂದಿಯ ಸಹಕಾರದಿಂದ ಉದ್ಧಾರವಾಗುತ್ತೀರಿ.
ಮಕರ : ನಿಮ್ಮ ಮುಂದಿರುವ ಕೆಲಸಗಳನ್ನು ಮೆಲುಕು ಹಾಕಿಕೊಂಡು ಸಮಯ ಹಾಳು ಮಾಡಿಕೊಂಡರೆ ಹೇಗೆ ? ಓದಿನ ಕಡೆಗಿನ ಗಮನ ಬೇರೆಡೆಗೆ ಹರಿಸಿದರೆ ಕೆಟ್ಟಿರಿ.
ಕುಂಭ : ಇವತ್ತೆಲ್ಲಾ ಖುಷಿಯಿಂದ ಇರುವ ನಿಮ್ಮ ಮನಸ್ಸಿನಲ್ಲಿ ಮುಂದಿನ ದಿನಗಳ ಬಗ್ಗೆ ಯೋಚನೆ ತುಂಬಿರುತ್ತದೆ. ಆಫೀಸಿನಲ್ಲಿ ಕೈ ತುಂಬಾ ಕೆಲಸ. ಸಂಜೆ ಹೊತ್ತಿಗೆ ಧನಲಾಭದ ಸುದ್ದಿ ಬರಬಹುದು. ಬಾಸ್‌ನಿಂದ ಒಂದು ಕಾಂಪ್ಲಿಮೆಂಟ್ ಕೂಡಜ ಸಿಗಲಿದೆ.
ಮೀನ : ಗೃಹ ಕೃತ್ಯಗಳಲ್ಲಿ ಉಲ್ಲಾಸವಿರುತ್ತದೆ. ಯಶಸ್ಸೂ ಇದೆ ಎಂದು ಬೇರೆ ಹೇಳಬೇಕೇ ? ಹೊಸ ಯೋಜನೆಗಳನ್ನು, ಕನಸುಗಳನ್ನು ನೇಯುತ್ತಿರುತ್ತೀರಿ. ಖರ್ಚಾಗುತ್ತಿರುವ ಹಣದ ಬಗ್ಗೆ ಅಷ್ಟೊಂದು ಚಿಂತಿಸುವ ಅಗತ್ಯವಿಲ್ಲ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications