ಭ್ರಷ್ಟ ಕಟ್ಟಡ ನಿರ್ಮಾಣಕಾರರ ವಿರುದ್ಧ ಉಗ್ರಕ್ರಮ ಅಗತ್ಯ- ರಾಷ್ಟ್ರಪತಿ
ನವದೆಹಲಿ : ಗುಜರಾತ್ ಭೂಕಂಪದ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣ ನಿಯಂತ್ರಣಗಳನ್ನು ಮತ್ತಷ್ಟು ಕಠಿಣಗೊಳಿಸಲು ಹಾಗೂ ಭ್ರಷ್ಟ ಕಟ್ಟಡ ನಿರ್ಮಾಣಕಾರರು ಮತ್ತು ಯೋಜಕರ ವಿರುದ್ಧ ಕಠಿಣಕ್ರಮ ಕೈಗೊಳ್ಳುವ ಅಗತ್ಯವನ್ನು ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಪ್ರತಿಪಾದಿಸಿದ್ದಾರೆ.
ಜನವರಿ 26 ರ ಭೂಕಂಪದಲ್ಲಿ ಸಾವಿಗೀಡಾದ ಸಾವಿರಾರು ಜೀವಗಳ ಸಂಖ್ಯೆಯನ್ನು ಗಮನಿಸಿದರೆ, ಕಟ್ಟಡ ನಿರ್ಮಾಣದ ನೀತಿ ನಿಯಮಗಳು ಹಾಗೂ ನಗರ ಯೋಜನೆಯಲ್ಲಿ ಅತ್ಯಂತ ತುರ್ತಾಗಿ ಬದಲಾವಣೆ ತರುವ ಅಗತ್ಯವಿದೆ ಎಂದು ನಾರಾಯಣನ್ ಒತ್ತಿ ಹೇಳಿದ್ದಾರೆ. ಅವರು, ಸೋಮವಾರ ಶುರುವಾದ ಸಂಸತ್ತನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಸ್ಪಂದಿಸಬೇಕಾದ ನಿರ್ವಹಣಾ ಆಡಳಿತ ವ್ಯವಸ್ಥೆಯಲ್ಲೂ ಮತ್ತಷ್ಟು ಪರಿಷ್ಕರಣದ ಅವಶ್ಯಕತೆಯಿದೆ. ಭೂಕಂಪದಲ್ಲಿನ ಸಾವಿರಾರು ಸಾವುಗಳಿಗೆ ಭ್ರಷ್ಟ ತಂತ್ರಜ್ಞರು, ಕಟ್ಟಡ ನಿರ್ಮಾಣಕಾರರು, ಯೋಜಕರು ನಾಚಿಕೆ ಪಡಬೇಕು ಎಂದು ನಾರಾಯಣನ್ ಹೇಳಿದರು.
ಭೂಕಂಪದ ಕೇಂದ್ರದಿಂದ 450 ಕಿಮೀ ದೂರವಿದ್ದ ಗುಜರಾತಿನ ರಾಜಧಾನಿ ಅಹಮದಾಬಾದಿನಲ್ಲಿ ಭೂನಡುಕದಿಂದಾಗಿ 69 ಆಧುನಿಕ ಕಟ್ಟಡಗಳು ನೆಲ ಕಚ್ಚಿವೆ. ಮಾಧ್ಯಮಗಳ ಪ್ರಕಾರ, ಕಟ್ಟಡ ನಿರ್ಮಾಣಕಾರರ ವಿರುದ್ಧ ಈವರೆಗೆ 59 ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿದ್ದು , ಈ ಸಂಬಂಧ ಮೂವರನ್ನು ಭೂಕಂಪ ಸಂಭವಿಸಿದ ನಾಲ್ಕು ವಾರಗಳ ನಂತರ ಬಂಧಿಸಲಾಗಿದೆ.
(ಎಎಫ್ಪಿ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications