• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರಿ ಹೈದನೆಂಬೋನು ಮಾದೇಶ್ವರ, ಮಾದೇಶ್ವರನಿಗೆ ಶರಣು ಮಾದೇಶ್ವರ

By Staff
|

* ನಾಗೇಂದ್ರಪ್ರಸಾದ್‌, ನಂಜನಗೂಡು

ಬೆಂಗಳೂರು : ನೈಸರ್ಗಿಕ ಅರಣ್ಯದ ಮಡಿಲ ಬೆಟ್ಟದ ತಪ್ಪಲಿನಲ್ಲಿ ಇರುವ ಸುಂದರ ಹಾಗೂ ಪವಿತ್ರ ಪುಣ್ಯಕ್ಷೇತ್ರ ಮಲೆ ಮಹದೇಶ್ವರ ಸ್ವಾಮಿ ಸನ್ನಿಧಿ. 600 ವರ್ಷಗಳ ಸುದೀರ್ಘ ಇತಿಹಾಸವುಳ್ಳ ಈ ಕ್ಷೇತ್ರದಲ್ಲಿ ಮಹಾಶಿವರಾತ್ರಿಯ ದಿನವಾದ ಬುಧವಾರದಿಂದ (ಫೆ. 21)ಜಾತ್ರೆ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.

ಮಿಣ್ಯಂ ಗುರುಸಿದ್ದ ಕವಿ 18ನೇ ಶತಮಾನದಲ್ಲಿ ರಚಿಸಿದ ಮಾದೇಶ್ವರ ಸಾಂಗತ್ಯ ಈ ಕ್ಷೇತ್ರದ ಹಾಗೂ ಮಹದೇಶ್ವರರ ಮಹಿಮೆಯನ್ನು ವರ್ಣಿಸುತ್ತದೆ. ಸುತ್ತೂರಿನಲ್ಲಿ ತಮ್ಮ ಬಾಲ್ಯವನ್ನು ಕಳೆದ ಮಹದೇಶ್ವರರು, ಪ್ರಭುದೇವ ಬೆಟ್ಟಕ್ಕೆ ಬಂದು ಗುರು ಆದಿ ಶನೇಶ್ವರರಿಂದ ಗುರುಭೋದೆಯನ್ನು ಪಡೆದು, ಅಲ್ಲಿಂದ ನಡುಮಲೆಗೆ ಬಂದು ದ್ವಾದಶ ವರ್ಷಗಳ ಕಾಲ ಘೋರ ತಪವನ್ನಾಚರಿಸಿದರು. ಅವರು ಲಿಂಗೈಕ್ಯರಾದ ತರುವಾಯ ಈ ತಾಣ ಪುಣ್ಯಕ್ಷೇತ್ರವಾಯಿತೆನ್ನುವುದು ಐತಿಹ್ಯ

ಮೈಸೂರಿನಿಂದ 135 ಕಿ.ಮೀಟರ್‌ ದೂರದಲ್ಲಿರುವ ಈ ಪ್ರದೇಶ ಸಮುದ್ರಮಟ್ಟದಿಂದ ಮೂರು ಸಾವಿರ ಅಡಿಗಳಷ್ಟು ಎತ್ತರದಲ್ಲಿದೆ. ಇಲ್ಲಿರುವ ದೇವಾಲಯದಲ್ಲಿ ಮಲೆ ಮಹದ್ವೇಶ್ವರರ ಮೂರ್ತಿಯಿದೆ. ಮಹದೇಶ್ವರರು ಹುಲಿಯನ್ನು ತಮ್ಮ ವಾಹನವಾಗಿಸಿಕೊಂಡಿದ್ದರಂದೆ. ಶಿವನ ವಾಹನ ನಂದಿ. ಶಿವ ತೊಡುವ ಮಾಲೆ ರುದ್ರಾಕ್ಷಿ. ಹೀಗಾಗಿ ಇಲ್ಲಿ ರುದ್ರಾಕ್ಷಿ ಮಂಟಪ, ನಂದಿ ಹಾಗೂ ಹುಲಿವಾಹನಗಳ ಉತ್ಸವವೂ ಜರುಗುತ್ತದೆ.

ಕನ್ನಡ ನಾಡನ್ನಾಳಿದ ಮೈಸೂರು ಒಡೆಯರು ಈ ದೇವಾಲಯಕ್ಕೆ ರಥವನ್ನು ನೀಡಿರುವುದೇ ಅಲ್ಲದೆ, ರುದ್ರಾಕ್ಷಿ ಮಂಟಪವನ್ನೂ ಕೊಡುಗೆಯಾಗಿ ನೀಡಿದ್ದಾರೆ. ಶಿವಕ್ಷೇತ್ರವಾದ ಈ ಬೆಟ್ಟದಲ್ಲಿ ಶಿವರಾತ್ರಿಯ ಸಂದರ್ಭದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಮಹಾ ಶಿವರಾತ್ರಿ ಉತ್ಸವ ಹಾಗೂ ಯುಗಾದಿ ಮಹೋತ್ಸವ ಎಂಬ ಹೆಸರಿನಲ್ಲಿ ಹಲವು ಧಾರ್ಮಿಕ ವಿಧಿಗಳು ಜರುಗುತ್ತವೆ.

ವಿಜಯದಶಮಿ, ಕಾರ್ತಿಕ ಸೋಮವಾರಗಳಲ್ಲಿ ಕೂಡ ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ತಮಿಳು ನಾಡು ಗಡಿಯಲ್ಲೇ ಇರುವ ಈ ದೇವಾಲಯಕ್ಕೆ ತಮಿಳುನಾಡಿನಿಂದಲೂ ಸಾವಿರಾರು ಭಕ್ತರು ಆಗಮಿಸುತ್ತಾರೆ. ಮಲೆ ಮಹದೇಶ್ವರನ ಹೆಸರು ಕರ್ನಾಟಕದಲ್ಲಂತೂ ಮನೆ ಮಾತು. ಮಹದೇಶ್ವರ ಬೆಟ್ಟದ ಸ್ವಾಮಿ ಜನಪದರ ಆರಾಧ್ಯ ದೈವ. ನಮ್ಮ ಜನಪದರು, ಕರಿ ಹೈದನೆಂಬೋನು ಮಾದೇಶ್ವರ, ಮಾದೇಶ್ವರನಿಗೆ ಶರಣು ಮಾದೇಶ್ವರ... ಮುಂತಾದ ನೂರಾರು ಜನಪದ ಗೀತೆಗಳನ್ನೂ ರಚಿಸಿದ್ದಾರೆ.

ಈ ಪ್ರದೇಶದ ವೃತ್ತಿಪರ ಜನಪದ ಗಾಯಕರು, ಮಾದೇಶ್ವರನ ಗೀತೆಗಳನ್ನು ಹಾಡುತ್ತಾ ಊರೂರು ತಿರುಗಿ, ಮಹದೇಶ್ವರನ ಮಹಿಮೆಯನ್ನು ನಾಡಿಗೇ ಸಾರಿದ್ದಾರೆ. ಇಂದೂ ಈ ಪರಂಪರೆಯ ಜನ ಕಂಸಾಳೆಯಾಂದಿಗೆ ಶಿವಕತೆ ಹೇಳುವುದು ಪ್ರತೀತಿ.

ಈ ದೇವಾಲಯದ ಧರ್ಮದರ್ಶಿ ಮಂಡಳಿಗೆ ವಾಟಾಳು ಸೂರ್ಯ ಸಿಂಹಾಸನ ಮಠಾಧೀಶ್ವರ ವೇ.ಬ್ರ. ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳ ಮಾರ್ಗದರ್ಶನವಿದೆ. ಪ್ರಸ್ತುತ ದೇವಾಲಯದಲ್ಲಿ ನೂತನ ರಾಜಗೋಪುರ ನಿರ್ಮಾಣ ಕಾರ್ಯವೂ ನಡೆಯುತ್ತಿದೆ.

ಸುಂದರ ಕಾನನ ಪ್ರದೇಶದ ಎತ್ತರ ಪ್ರದೇಶದಲ್ಲಿರುವ ಈ ಬೆಟ್ಟದ ಮೇಲೆ ನಿಂತು ನೈಸರ್ಗಿಕ ಕಾನನದ ಸೊಬಗನ್ನೂ ಸವಿಯಬಹುದು. ಬೆಟ್ಟದ ಮಹದೇಶ್ವರನನ್ನು ಕಂಡು ಕೈವಲ್ಯವನ್ನೂ ಪಡೆಯಬಹುದು. ಬೆಟ್ಟದ ಬಗ್ಗೆ ಹೆಚ್ಚಿನ ವಿವರಗಳನ್ನು ನಿರ್ವಾಹಕ ಅಧಿಕಾರಿ, ಶ್ರೀ ಮಹದೇಶ್ವರ ಸ್ವಾಮಿ ದೇವಸ್ಥಾನ, ಮಹದೇಶ್ವರ ಬೆಟ್ಟ, ಕೊಳ್ಳೇಗಾಲ ತಾಲೂಕು, ಚಾಮರಾಜನಗರ ಜಿಲ್ಲೆ - 571 490. ದೂರವಾಣಿ : 22121, 22123 (ಎಸ್‌ಟಿಡಿ ಕೋಡ್‌ : 958225, ಐ.ಡಿ. 925) ಇಲ್ಲಿಂದ ಪಡೆಯಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more