ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀವಮಾನ ಶ್ರೇಷ್ಠ ಸಾಧನೆಯಾಂದಿಗೆ ಅಪವಾದವನ್ನೂ ಕಟ್ಟಿಕೊಂಡ ಅಖ್ತರ್‌

By Staff
|
Google Oneindia Kannada News

ಆಕ್ಲೆಂಡ್‌ : ದೀರ್ಘಕಾಲದ ವಿಶ್ರಾಂತಿಯ ನಂತರ ಮೈದಾನಕ್ಕಿಳಿದು ಮೊದಲ ಪಂದ್ಯದಲ್ಲೇ ಜೀವಮಾನ ಶ್ರೇಷ್ಠ ಸಾಧನೆಗೈದ ಪಾಕಿಸ್ತಾನದ ವೇಗದ ಬೌಲರ್‌ ಶೋಯೆಬ್‌ ಅಖ್ತರ್‌ ಸಾಧನೆಯಾಂದಿಗೆ ವಿವಾದವನ್ನೂ ಬೆನ್ನಿಗೆ ಕಟ್ಟಿಕೊಂಡಿದ್ದಾರೆ.

ಭಾನುವಾರ ಆಕ್ಲೆಂಡ್‌ನ ಈಡೆನ್‌ ಪಾರ್ಕ್‌ನಲ್ಲಿ ನಡೆದ ನ್ಯೂಜಿಲೆಂಡ್‌ ವಿರುದ್ಧದ ಸೀಮಿತ ಓವರ್‌ಗಳ ಪಂದ್ಯದಲ್ಲಿ ಕೇವಲ 19 ರನ್‌ಗಳಿಗೆ 5 ವಿಕೆಟ್‌ ಕೀಳುವ ಮೂಲಕ ನ್ಯೂಜಿಲೆಂಡ್‌ನ ಮಧ್ಯಮ ಕ್ರಮಾಂಕ ಹಾಗೂ ಬಾಲಗಳನ್ನು ಕತ್ತರಿಸಿದ್ದ ಅಖ್ತರ್‌ ಬೌಲಿಂಗ್‌ನಲ್ಲೀಗ ಕಿವಿಗಳು ಹುಳುಕು ಕಾಣುತ್ತಿದ್ದಾರೆ. ಕಿವೀಸ್‌ ನಾಯಕ ಸ್ಟೀಫನ್‌ ಫ್ಲೆಮಿಂಗ್‌ರಂತೂ, ಅಖ್ತರ್‌ ಬೌಲಿಂಗ್‌ ಶೈಲಿಯ ಬಗ್ಗೆ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ನ್ಯೂಜಿಲೆಂಡ್‌ನ ಮಾಜಿ ವಿಕೆಟ್‌ಕೀಪರ್‌ ಟೋನಿ ಬ್ಲೈನ್‌, ಭಾನುವಾರ ರಾವಲ್ಪಿಂಡಿ ಎಕ್ಸ್‌ಪ್ರೆಸ್‌ ಬೌಲಿಂಗ್‌ ಶೈಲಿಯ ಬಗ್ಗೆ ರಾಷ್ಟ್ರೀಯ ರೇಡಿಯೋದಲ್ಲಿ ಪದೇ ಪದೇ ತಮ್ಮ ಸಂಶಯ ವ್ಯಕ್ತಪಡಿಸಿದರು. ಮತ್ತೊಬ್ಬ ಅತ್ಯುನ್ನತ ಸ್ಥಳೀಯ ರೇಡಿಯೋ ವೀಕ್ಷಕ ವಿವರಣೆಕಾರ ಬ್ರೆೃನ್‌ ವ್ಯಾಡಲ್‌ ಕೂಡ ಭಾನುವಾರ ವೀಕ್ಷಕ ವಿವರಣೆ ನೀಡುವಾಗ ಶೋಯೆಬ್‌ ಬೌಲಿಂಗ್‌ ಶೈಲಿಯನ್ನು ಬಲವಾಗಿ ಖಂಡಿಸಿದರು.

ಬೌಲಿಂಗ್‌ ಶೈಲಿಯ ಬಗ್ಗೆ ಮಾತನಾಡಿದ ಫ್ಲೆಮಿಂಗ್‌ - ಚೆಂಡುಗಳ ಗತಿಯನ್ನು ಗುರ್ತಿಸುವುದೇ ಕಷ್ಟವಾಗಿತ್ತು. ನಾವೀ ಪ್ರಕರಣವನ್ನು ಇತರರಿಗೆ ಬಿಡಲು ನಿರ್ಧರಿಸಿದ್ದೇವೆ. ಬೌಲರ್‌ಗಳ ಬೌಲಿಂಗ್‌ ಶೈಲಿಯನ್ನು ಹದ್ದಿನ ಕಣ್ಣಿನಿಂದ ಗಮನಿಸಿ, ಅನುಮಾನಾಸ್ಪದ ಶೈಲಿಗಳನ್ನು ಪರೀಕ್ಷೆಗೊಳಪಡಿಸುವುದು ಐಸಿಸಿ ಕೆಲಸ ಎಂದು ಅವರು ಹೇಳಿದರು.

ಗಾಯಗೊಂಡ ಕಾರಣದಿಂದಾಗಿ ಬಹಳಷ್ಟು ಅಂತರರಾಷ್ಟ್ರೀಯ ಪಂದ್ಯಗಳನ್ನು ಕಳೆದುಕೊಂಡಿದ್ದ ಅಖ್ತರ್‌, ಗುಣಮುಖರಾದ ನಂತರ ಇದೇ ಮೊದಲಬಾರಿಗೆ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದರು. ಆದರೆ, ಬೌಲಿಂಗ್‌ ಶೈಲಿಯ ಬಗೆಗಿನ ಆಪಾದನೆಗಳಿಂದಾಗಿ ಅವರ ಆಟದ ಮರು ಆರಂಭ ಅಷ್ಟೇನೂ ಹಿತಕರವಾಗಿಲ್ಲ .

(ಎಪಿ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X