ಗಂಗೂಲಿ ನಾಗದೋಷ ಪೂಜೆಗೆ ಜೊತೆಯಾದ ಸಿನಿಮಾ ನಟಿ ನಗ್ಮಾ !
ಚೆನ್ನೈ : ಭಾರತ ಕ್ರಿಕೆಟ್ ತಂಡದ ನಾಯಕ ಸೌರವ್ ಗಂಗೂಲಿ ಕಾಳಹಸ್ತಿಗೆ ಹೋಗಿ ಪೂಜೆ ಸಲ್ಲಿಸಿದ್ದು ಬಹುಭಾಷಾ ತಾರೆ ನಗ್ಮಾ ಜೊತೆಯಲ್ಲಿ.
ಕೋಲ್ಕತ ಪ್ರಿನ್ಸ್ ಗಂಗೂಲಿ, ಕುಟುಂಬದವರ ವಿರೋಧದ ನಡುವೆಯೂ ಬಾಲ್ಯದ ಗೆಳತಿ ಡೋನಾ ಅವರನ್ನು ಬಾಳಸಂಗಾತಿಯಾಗಿ ಸ್ವೀಕರಿಸಿದ್ದು ನಿಮಗೆ ಗೊತ್ತೇ ಇದೆ. ಗಂಗೂಲಿ ಜೊತೆ ಗುರುವಾರದವರೆಗೂ ಚೆನ್ನೈನಲ್ಲಿದ್ದ ಡೋನಾ, ನಂತರ ಕೊಲ್ಕತಾಗೆ ತೆರಳಿದ್ದಾರೆ. ಅದರ ಮರುದಿನವೇ ನಗ್ಮಾ ಜೊತೆಯಲ್ಲಿ ಗಂಗೂಲಿ ಕಾಳಹಸ್ತಿ ಈಶ್ವರನ ದೇವಸ್ಥಾನದಲ್ಲಿ ನಾಗದೋಷ ಪರಿಹಾರ ಪೂಜೆ ಸಲ್ಲಿಸಿದ್ದಾರೆ.
ಶನಿವಾರ ಚೆನ್ನೈ ತುಂಬೆಲ್ಲಾ ಮಾಧ್ಯಮಗಳು ಎಬ್ಬಿಸಿದ ಗಂಗೂಲಿ ಧೂಳೇ ತೇಲುತ್ತಿತ್ತು. ಪ್ರಶ್ನೆಗಳನ್ನು ಕೇಳಹೊರಟ ಸುದ್ದಿಗಾರರಿಗೆ ಗಂಗೂಲಿ ಕೊಟ್ಟ ಉತ್ತರ - ನಮ್ಮ ಕೋಚ್ ಜಾನ್ರೈಟ್, ಮಾಧ್ಯಮದವರೊಂದಿಗೆ ದಿನಾ ಮಾತನಾಡಬೇಡ ಎಂದಿದ್ದಾರೆ. ವೈಯಕ್ತಿಕ ಪ್ರಶ್ನೆಗಳಿಗೆ ನೋ ಆನ್ಸರ್ಸ್. ಏನು ಕೇಳಬೇಕಿದ್ದರೂ ಕ್ರಿಕೆಟ್ ಬಗ್ಗೆ ಮಾತ್ರ ಕೇಳಿ.
ಕೋಲ್ಕತಾ ರಾಜಕುಮಾರ, ಭಾರತದ ಉತ್ತಮ ಬ್ಯಾಟ್ಸ್ಮನ್ ಗೊತ್ತಿದ್ದೂ ಗೊತ್ತಿದ್ದೂ ಇಂಥ ರಂಪಕ್ಕೆ ಸಿಲುಕುತ್ತಿರುವುದು ವಿಪರ್ಯಾಸವೇ ಸರಿ. ಊಹಾಪೋಹಗಳಿಗೆ ಎಡೆಮಾಡಿಕೊಡದೆ ಆದಷ್ಟು ಬೇಗ ಅವರು ಸರಿಯಾದ ಉತ್ತರ ಕಕ್ಕುವುದು ಒಳಿತು. ಅವರ ಕೆರಿಯರ್ ದೃಷ್ಟಿಯಿಂದಲೂ ಕೂಡಾ.
(ಇನ್ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications