Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ರಜೆಯ ಮಜಾ ನಿಮಗಿವತ್ತು ಸಿಗುವ ಹಾಗೆ ಕಾಣಿಸುವುದಿಲ್ಲ. ಧಾರ್ಮಿಕ ಕೆಲಸ ಕಾರ್ಯಗಳು ನಿಮ್ಮ ಮನೆಯಲ್ಲಿ ನೆರವೇರುವ ಲಕ್ಷಣಗಳು ಕಾಣಿಸುವುದರಿಂದ ನೀವು ಇವತ್ತು ಸಿಕ್ಕಾ ಪಟ್ಟೆ ಕೆಲಸದ ಒತ್ತಡ ಎದುರಿಸುತ್ತೀರಿ.

ವೃಷಭ :ನಿಮ್ಮ ಸಂಗಾತಿ ಇವತ್ತು ಮುನಿಸಿಕೊಳ್ಳುತ್ತಾರೆ ಅಂತ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳಬೇಡಿ. ಎಲ್ಲ ಕ್ಷಣಿಕ. ಕಿಸೆ ಸ್ವಲ್ಪ ಹಗುರವಾಗಬಹುದು. ಆದರೆ ನಂತರ ನಿಮಗೆ ಸಿಗುವ ಖುಷಿಗೆ ಸಮನುಂಟೇ ?

ಮಿಥುನ : ಎದುರಾಗುವ ಎಲ್ಲ ಸಂದರ್ಭಗಳನ್ನು ಕಳೆದು ಹೋದುದರ ಬಗ್ಗೆ ಹೋಲಿಸಿಕೊಂಡು ನರಳುತ್ತೀರಿ. ಅದರಿಂದ ಪ್ರಯೋಜನವಿಲ್ಲ ಅಂತ ಗೊತ್ತಿದ್ದರೂ, ದಿನ ಹಾಳು ಮಾಡಿಕೊಳ್ಳಬೇಡಿ. ಬಂಧು ಮಿತ್ರರ ಸಹಕಾರವಿದೆ.

ಕಟಕ : ಮಕ್ಕಳು ಕಿರಿಕಿರಿ ಮಾಡಿದರು ಅಂತ ಮನಸ್ಸು ಕೆಡಿಸಿಕೊಳ್ಳಬಾರದಲ್ಲವಾ ? ಕೌಟುಂಬಿಕ ಅಶಾಂತಿಯಿಂದ ಬಳ್ಳಲುತ್ತಿದ್ದೇನೆ ಅಂತ ಖಿನ್ನರಾಗಿರಬೇಡಿ.

ಸಿಂಹ : ಸ್ನೇಹಿತರು ನಿಮ್ಮ ಕಾಲ ಮೇಲೆ ಬೀಳಬೇಕು, ನೀವು ಅವರನ್ನು ಆಳಬೇಕು ಎಂಬ ಜಂಭ ಬೇಡ. ಉನ್ನತ ವ್ಯಾಸಂಗ ಹಿಂದುಳಿಯುತ್ತಿರುವುದು ಗಮನಕ್ಕೆ ಬಂದರೂ ಯಾಕೆ ಸುಮ್ಮನಿದ್ದೀರಿ ?

ಕನ್ಯಾ : ಸಂಗಾತಿಯನ್ನು ಸುಮ್ಮನೇ ಗೋಳು ಹೊಯ್ಕೋಬೇಡಿ. ಅದರಿಂದ ನಿಮಗೂ ಬೇಸರ ಅಲ್ವಾ ? ಮನೆಯಲ್ಲಿ ಶುಭಕಾರ್ಯವಿದೆ. ಮಕ್ಕಳಿಂದ ಶುಭ.

ತುಲಾ : ಆಫೀೕಸಿನ ಚಿಂತೆ ಮನೆಯಲ್ಲಿ ಕಾಡುತ್ತಿರುತ್ತದೆ. ಅಪರೂಪದ ಗೆಳೆಯರೊಂದಿಗಿನ ಮಾತುಕತೆ ದಿನವಿಡೀ ಉಲ್ಲಾಸ ತರುತ್ತದೆ. ಅವರ ಸಹಕಾರದಿಂದ ಏಳಿಗೆಯಾಗಬಹುದು.

ವೃಶ್ಚಿಕ : ಕನಸೆಲ್ಲಾ ನಿಜವಾಗುವುದಿಲ್ಲ ಅಂತ ಗೊತ್ತಿಲ್ಲವೇ ? ಸ್ವ ಪ್ರಯತ್ನಕ್ಕೂ ಬೆಲೆ ಇರುತ್ತದೆ ಅಂತ ನಿಮಗೆ ಬೇರೆಯೇ ಹೇಳಬೇಕಾಗಿಲ್ಲ. ಮಕ್ಕಳ ತಂಟೆಯಿದ್ದರೂ ಖುಷಿಯಾಗಿರುತ್ತೀರಿ. ಮನಸ್ಸು ಮಾಡಿದರೆ ಕೈಯಲ್ಲಿ ಹಣ ಎಣಿಸಬಹುದು. ಆರೋಗ್ಯ ಜೋಪಾನ ಮತ್ತೆ !

ಧನಸ್ಸು :ಇವತ್ತು ಶಾಪಿಂಗ್‌ ಡೇ ಅಂತಿಟ್ಟುಕೊಳ್ಳಿ. ಹಣ ಖರ್ಚಾದರೂ ಒಳ್ಳೆಯದಕ್ಕೇ ವಿನಿಯೋಗವಾದರೆ ಒಳ್ಳೆಯದಲ್ವಾ? ಶತ್ರು ಭಯ ಬೇಡ. ನ್ಯಾಯಾಲಯ ವಿಷಯದಲ್ಲಿ ಮಿತ್ರರ ಸಲಹೆ ಪಡೆಯಿರಿ.

ಮಕರ : ಇವತ್ತು ಆರಾಮ ದಿನ ಅಂತ ಅಂದುಕೊಳ್ಳಬೇಡಿ. ಇನ್ನೂ ಎಷ್ಟೊಂದು ಕೆಲಸಗಳು ನಿಮ್ಮ ಮುಂದೆ ರಾಶಿ ಬಿದ್ದಿದೆ. ನಿಮ್ಮ ಸ್ನೇಹಿತರು ಒಳ್ಳೆಯವರಾದ್ದರಿಂದ ನೀವು ಲಕ್ಕೀ ಎಂದೇ ಲೆಕ್ಕ.

ಕುಂಭ : ದೂರ ಪ್ರಯಾಣ ಸಂಭವವಿದೆ. ಮನೆ ಮಂದಿಯಾಂದಿಗಿನ ಒಡನಾಟ ಖುಷಿ ತಾರದಿರುತ್ತದೆಯೇ ? ಮನೆಯಲ್ಲಿನ ಆರಾಮ ಆಫೀಸಿನಲ್ಲಿಯೂ ನಿಮ್ಮ ಮೂಡ್‌ ಚೆನ್ನಾಗಿರುವಂತೆ ಮಾಡುತ್ತದೆ.

ಮೀನ : ಸುಳ್ಳು ಹೇಳುವುದು ಕಡಿಮೆ ಮಾಡಿ. ಇವತ್ತು ಬಂಧು ವರ್ಗದವರನ್ನು ಭೇಟಿಯಾಗುತ್ತೀರಿ. ಮಾಮೂಲಿ ಸಣ್ಣ ಪುಟ್ಟ ಜಗಳ. ಮನೆ ಎಂದ ಮೇಲೆ ಇದೆಲ್ಲಾ ಮಾಮೂಲು ಬಿಡಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+