ಕಡಲ ತಡಿಯ ಮಂಗಳೂರು ವಿವಿಯಲ್ಲಿ ಕಪ್ಪೆ ಚಿಪ್ಪುಗಳ ಸಾಲ್ಗಳು
ಮಂಗಳೂರು : ಮಂಗಳ ಗಂಗೋತ್ರಿಯಲ್ಲಿ ಮೂರು ದಿನಗಳ ಸಮುದ್ರ ಚಿಪ್ಪುಗಳ ಪ್ರದರ್ಶನ ಶನಿವಾರ ಆರಂಭವಾಗಿದೆ. ಕಡಲ ತಡಿಯಲ್ಲೇ ಇರುವ ವಿಶ್ವ ವಿದ್ಯಾಲಯದಲ್ಲಿ ಸಾಲು ಸಾಲಾಗಿ ಇಟ್ಟಿದ್ದ ರಾಶಿ ಚಿಪ್ಪುಗಳ ಪ್ರದರ್ಶನ ಕಾರ್ಯಕ್ರಮವನ್ನು ಮೈಸೂರು ವಿಶ್ವ ವಿದ್ಯಾಲಯದ ಉಪ ಕುಲಪತಿ ಪ್ರೊ. ಎಸ್. ಎನ್. ಹೆಗ್ಡೆ ಉದ್ಘಾಟಿಸಿದರು.
ವಿಶ್ವ ವಿದ್ಯಾಲಯದಲ್ಲಿ ಉಪನ್ಯಾಸಕರು ವೇತನ , ಭತ್ಯೆಗಳ ಬಗ್ಗೆ ಮಾತ್ರ ತಲೆ ಕೆಡಿಸಿಕೊಳ್ಳಬಾರದು. ಪಾಠೇತರ ಚಟುವಟಿಕೆಗಳಲ್ಲಿ ಸ್ವತಃ ಆಸಕ್ತಿ ವಹಿಸಬೇಕು. ಅಲ್ಲದೆ ಪಶ್ಚಿಮ ಘಟ್ಟಗಳು ಮತ್ತು ಅರೇಬಿಯನ್ ಸಮುದ್ರದಲ್ಲಿನ ಜೀವ ವೈವಿಧ್ಯದ ಬಗ್ಗೆ ಅಧ್ಯಯನ ನಡೆಸಬೇಕಾದ ತುರ್ತು ಈಗ ಎದುರಾಗಿದೆ. ಇದು ವಿದ್ಯಾರ್ಥಿಗಳಿಗೊಂದು ಉತ್ತಮ ಅವಕಾಶ ಎಂದು ಉದ್ಘಾಟನಾ ಭಾಷಣದಲ್ಲಿ ಹೆಗ್ಡೆ ಹೇಳಿದರು.
ಚಿಪ್ಪು ಪ್ರದರ್ಶನಾ ಕಾರ್ಯಕ್ರಮ ಮೂರು ದಿನಗಳ ಕಾಲ ನಡೆಯಲಿದೆ. ಅಪರೂಪವಾಗಿ ಕಾಣ ಸಿಗುವ ಚಿಪ್ಪುಗಳ ಸಂಗ್ರಹವನ್ನೆಲ್ಲಾ ನೀವು ಇಲ್ಲಿ ನೋಡಬಹುದು. ಚಿಪ್ಪುಗಳ ವೈವಿಧ್ಯಗಳ ಬಗ್ಗೆ ಅಧ್ಯಯನ ನಡೆಸಲು ಯೋಗ್ಯವಾಗಿರುವ ಈ ಸಂಗ್ರಹವನ್ನು ಒಂದು ಕಡೆ ನೋಡಲು ಸಿಗುವುದು ಅಪರೂಪ. ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಆರಂಭವಾಗಿರುವ ಈ ವಸ್ತು ಪ್ರದರ್ಶನ ಈ ನಿಟ್ಟಿನಲ್ಲಿ ಶ್ಲಾಘನಾರ್ಹ.
ಈ ವಸ್ತು ಪ್ರದರ್ಶನದ ಆಯೋಜಕ ವಿವಿಯ ಪ್ರಾಣಿ ಶಾಸ್ತ್ರ ವಿಭಾಗದ ಉಪನ್ಯಾಸಕ ಮಂಜೇಶ್ವರ ಮುಕುಂದ ಪ್ರಭುಗಳು. ಸಮುದ್ರವಾಸಿಗಳ ಚಿಪ್ಪು ಸಂಗ್ರಹವನ್ನೇ ಹವ್ಯಾಸವನ್ನಾಗಿರಿಸಿಕೊಂಡವರು . ಪ್ರದರ್ಶನದಲ್ಲಿರುವ ಚಿಪ್ಪು ಸಂಗ್ರಹ ಮುಕುಂದ ಪ್ರಭುಗಳ ಸ್ವಂತ ಸಂಗ್ರಹವಾಗಿದ್ದು, ಮಂಗಳ ಗಂಗೋತ್ರಿಯ ಉಪ ಕುಲಪತಿ ಎಸ್. ಗೋಪಾಲ್ ಅವರನ್ನು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಡಾ. ರಾಜಶೇಖರ್ ಉಪಸ್ಥಿತರಿದ್ದರು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications