ಇನ್ಫೋಸಿಸ್, ರಿಲಯನ್ಸ್ ಏಷ್ಯಾದ ನಂಬರ್ ಒನ್ ಕಂಪನಿಗಳು
ಲಂಡನ್ : ಎನ್.ಆರ್.ನಾರಾಯಣ ಮೂರ್ತಿ ಮತ್ತು ಅಜೀಂ ಪ್ರೇಂಜಿ ಅವರಿಗೆ ಶುಭಾಶಯಗಳು.
ಕಾರ್ಯನಿರ್ವಹಣೆ ಹಾಗೂ ಉತ್ಪಾದನೆಯಲ್ಲಿ ಗುಣಮಟ್ಟ ಕಾಪಿಟ್ಟುಕೊಂಡು ಬಂದಿರುವ ಬೆಂಗಳೂರಿನ ಇನ್ಫೋಸಿಸ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಏಷ್ಯಾದ ಅತ್ಯುತ್ತಮ ಕಂಪನಿಗಳೆಂಬ ಅಗ್ಗಳಿಕೆಗೆ ಪಾತ್ರವಾಗಿವೆ. ಎನ್‌ಐಐಟಿ ಹಾಗೂ ವಿಪ್ರೋ ಕಂಪನಿಗಳು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿವೆ.
ಐದನೇ ವಾರ್ಷಿಕ ಮೋಜಣಿಯಿಂದ ಕಂಪನಿಗಳ ನಿರ್ವಹಣಾ ರೀತಿ ಬೆಳಕಿಗೆ ಬಂದಿದ್ದು, ಆ ಪೈಕಿ ಮಾಹಿತಿ ತಂತ್ರಜ್ಞಾನ ಕಂಪನಿ ಇನ್ಫೋಸಿಸ್ ಹಾಗೂ ರಿಲಯನ್ಸ್‌ನ ಪೆಟ್ರೋ ಕೆಮಿಕಲ್ಸ್ ವಿಭಾಗ ಮುಂಚೂಣಿಯಲ್ಲಿವೆ. ‘ಯೂರೋಮನಿ’ ನಿಯತಕಾಲಿಕದಹೊಸ ಸಂಚಿಕೆಯಲ್ಲಿ ಮೋಜಣಿಯ ವಿವರಣಾತ್ಮಕ ಲೇಖನ ಪ್ರಕಟವಾಗಿದೆ.
ಭಾರತದ ಅತಿದೊಡ್ಡ ಖಾಸಗಿ ವಲಯದ ಕಂಪನಿ ರಿಲಯನ್ಸ್ ಒಂಭತ್ತು ತಿಂಗಳಲ್ಲಿ 21 ಸಾವಿರದ 564 ಕೋಟಿ ರುಪಾಯಿಯ ದಾಖಲೆ ವಹಿವಾಟು ನಡೆಸಿದ್ದು, 2106 ಕೋಟಿ ರುಪಾಯಿ ಲಾಭ ಗಿಟ್ಟಿಸಿದೆ (ಡಿಸೆಂಬರ್ 31, 2000ಕ್ಕೆ ಸರಿಯಾಗಿ). ಭಾರತದ ಇನ್ನೆರಡು ಮಾಹಿತಿ ತಂತ್ರಜ್ಞಾನ ಕಂಪನಿಗಳಾದ ಎನ್‌ಐಐಟಿ ಹಾಗೂ ವಿಪ್ರೋ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿವೆ.
ನಿರ್ಮಾಣ ವಲಯದಲ್ಲಿ ಗುಜರಾತ್‌ನ ಅಂಬುಜಾ ಸಂಸ್ಥೆಗೆ ಮಲೇಶಿಯಾದ ಗಮುದಾದ ನಂತರದ, ಅಂದರೆ ಎರಡನೇ ಸ್ಥಾನ ಲಭಿಸಿದೆ. ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗಳ ಪೈಕಿ ಟಾಟಾ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (ಟಿಸ್ಕೋ) ಮೂರನೇ ಸ್ಥಾನ ಪಡೆದಿದೆ.
1999ರಲ್ಲಿ ಇನ್ಫೋಸಿಸ್ ಸಂಸ್ಥೆ ನಾಸ್ಡಾಕ್ ಸ್ಟಾಕ್ ಎಕ್ಸ್‌ಚೇಂಜ್ ಪಟ್ಟಿ ಸೇರಿದಾಗ 34 ಡಾಲರ್ ಇದ್ದ ಶೇರಿನ ಬೆಲೆ ಈ ಹೊತ್ತು 270 ಡಾಲರ್‌ಗಳಷ್ಟಾಗಿದೆ. 1992ರಲ್ಲಿ ಇನ್ಫೋಸಿಸ್ ಹೆಸರೇ ಅಪರಿಚಿತವಾಗಿತ್ತು. ಕಂಪನಿಯ ಅಧ್ಯಕ್ಷ ಎನ್.ಆರ್.ನಾರಾಯಣ ಮೂರ್ತಿ ಪರಿಶ್ರಮ ಈ ಅಗ್ಗಳಿಕೆಯನ್ನು ತಂದಿತ್ತಿದೆ.
(ಪಿಟಿಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications