ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದಿಂದ 310 ಸಮರ ಟ್ಯಾಂಕ್‌ ಖರೀದಿಗೆ ಭಾರತ ಒಪ್ಪಂದ

By Staff
|
Google Oneindia Kannada News

ನವದೆಹಲಿ : ಮೂರು ಸಾವಿರ ಕೋಟಿ ರುಪಾಯಿ ಮೌಲ್ಯದ ಟಿ-90 ಶ್ರೇಣಿಯ 310 ಯುದ್ಧ ಟ್ಯಾಂಕ್‌ಗಳನ್ನು ರಷ್ಯಾದಿಂದ ಖರೀದಿಸುವ ಸಂಬಂಧ ಭಾರತವು ಗುರುವಾರ ಒಪ್ಪಂದಕ್ಕೆ ಸಹಿ ಹಾಕಿತು. ಮೂರು ವರ್ಷಗಳ ಸುದೀರ್ಘ ಚರ್ಚೆಯ ಬಳಿಕ ಈ ಒಡಂಬಡಿಕೆಗೆ ಸಹಿ ಮಾಡಲಾಗಿದೆ.

ರಷ್ಯದ ಪರವಾಗಿ ಭಾರತ ಪ್ರವಾಸದಲ್ಲಿರುವ ರಷ್ಯಾ ಉಪ ಪ್ರಧಾನಿ ಇ. ಕ್ಲೇಬ್ನೋವ್‌ ಮತ್ತು ಭಾರತ ಸರಕಾರದ ಪರವಾಗಿ ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಪ್ಪಂದವು ಟ್ಯಾಂಕ್‌ಗಳಿಗೆ ಬೇಕಾದ ಬಿಡಿ ಭಾಗಗಳನ್ನು ಭಾರತದಲ್ಲೇ ತಯಾರಿಸಲೂ ಅವಕಾಶ ಕಲ್ಪಿಸಿದೆ.

ಟಿ -90 ಶ್ರೇಣಿಯ ಈ ಟ್ಯಾಂಕ್‌ ಐದು ಕಿ.ಮೀಟರ್‌ ದೂರದ ಶತ್ರು ನೆಲೆಗಳನ್ನು ಗುರುತಿಸಿ ನಾಶಮಾಡುವ ಸಾಮರ್ಥ್ಯವನ್ನು ಹೊಂದಿದೆ. ಎರಡೂ ರಾಷ್ಟ್ರಗಳ ನಾಯಕರು ಸುಮಾರು 90 ನಿಮಿಷಗಳ ಕಾಲ ಸುದೀರ್ಘ ಚರ್ಚೆ ನಡೆಸಿದ ತರುವಾಯ ಈ ಒಡಂಬಡಿಕೆಗೆ ಅಂಕಿತ ಹಾಕಿದರು.

ಇದೊಂದು ಅತ್ಯಂತ ಮಹತ್ವದ ಒಪ್ಪಂದ ಇದರಿಂದಾಗಿ ಭಾರತದ ರಕ್ಷಣಾ ಪಡೆ ಮತ್ತಷ್ಟು ಬಲಗೊಳ್ಳಲಿದೆ ಎಂದು ತಿಳಿಸಿರುವ ಜಾರ್ಜ್‌ ಫರ್ನಾಂಡಿಸ್‌, ಭಾರತದಲ್ಲಿಯೇ ನಾವು ಮತ್ತಷ್ಟು ಟ್ಯಾಂಕ್‌ಗಳನ್ನು ಉತ್ಪಾದಿಸಲೂ ಇಚ್ಛಿಸಿದ್ದೇವೆ ಎಂದರು. ಆದರೆ, ಭಾರತದಲ್ಲಿ ಎಷ್ಟು ಟ್ಯಾಂಕ್‌ ಉತ್ಪಾದಿಸುತ್ತೇವೆ ಎಂಬ ವಿಷಯವನ್ನು ಬಹಿರಂಗಪಡಿಸಲಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X