ಭೂಕಂಪ ಸಂತ್ರಸ್ತರಿಗೆ ರಾಜ್ಯ ರೆಡ್ಕ್ರಾಸ್ ಸೊಸೈಟಿಯಿಂದ 13 ಲಕ್ಷ
ಬೆಂಗಳೂರು : ಭಾರತೀಯ ರೆಡ್ಕ್ರಾಸ್ ಸೊಸೈಟಿಯ ಕರ್ನಾಟಕ ಘಟಕ ಗುಜರಾತ್ ಭೂಕಂಪ ಸಂತ್ರಸ್ತರ ನೆರವಿಗಾಗಿ ಶುಕ್ರವಾರ 13 ಲಕ್ಷ ರುಪಾಯಿಗಳ ಚೆಕ್ ಕಳುಹಿಸಿದೆ. ಇದು ರಾಜ್ಯ ರೆಡ್ಕ್ರಾಸ್ ಘಟಕ ಸಂತ್ರಸ್ತರ ನೆರವಿಗೆ ಒದಗಿಸುತ್ತಿರುವ ನೆರವಿನ ಮೂರನೇ ಕಂತು.
ಈ ಮುನ್ನ ಜನವರಿ 29 ರಂದು 2.5 ಲಕ್ಷ ರುಪಾಯಿ ಹಾಗೂ ಫೆ. 6 ರಂದು 13 ಲಕ್ಷ ರುಪಾಯಿಗಳ ನೆರವನ್ನು ಸಂತ್ರಸ್ತರ ನೆರವಿಗೆ ರೆಡ್ಕ್ರಾಸ್ ರಾಜ್ಯ ಘಟಕ ಒದಗಿಸಿತ್ತು ಎಂದು ಸೊಸೈಟಿಯ ಉಪಾಧ್ಯಕ್ಷ ಡಿ.ಎಂ. ನಂಜುಂಡಪ್ಪ ಹೊರಡಿಸಿರುವ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಂತ್ರಸ್ತರ ನೆರವಿಗೆ ರಾಜ್ಯ ಘಟಕ ಒಟ್ಟು 50 ಲಕ್ಷ ರುಪಾಯಿ ನೆರವನ್ನು ಸಲ್ಲಿಸುವ ಗುರಿ ಹೊಂದಿದೆ ಎಂದೂ ಪ್ರಕಟಣೆ ತಿಳಿಸಿದೆ.
ಹಣ ರೂಪದ ಸಹಾಯ ಮಾತ್ರವಲ್ಲದೆ, ದಕ್ಷಿಣ ರೈಲ್ವೆಯ ಮೂಲಕ ಒಂದು ವ್ಯಾಗನ್ ಲೋಡ್ ಪರಿಹಾರ ಸಾಮಗ್ರಿಗಳನ್ನು ಸಂತ್ರಸ್ತರ ನೆರವಿಗೆ ಕಳುಹಿಸಲಾಗಿದೆ. ಈ ಸಾಮಗ್ರಿಗಳಲ್ಲಿ ಅಕ್ಕಿ, ಗೋಧಿ, ಮೈದಾ, ಔಷಧಿ, ಟೆಂಟ್ಸ್, ಬ್ಲಾಂಕೆಟ್ಸ್, ಬ್ರೆಡ್, ಬಿಸ್ಕತ್ತು ಹಾಗೂ ಖಾದ್ಯ ತೈಲ ಸೇರಿವೆ.
(ಯುಎನ್ಐ)
| ಮುಖಪುಟ |
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications