ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಭಟನೆ ನಡೆಸಬೇಡಿ : ಕೆಎಸ್ಸಾರ್ಟಿಸಿ ನೌಕರರಿಗೆ ಸಗೀರ್‌ ಮನವಿ

By Staff
|
Google Oneindia Kannada News

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಒಕ್ಕೂಟ ಮಾರ್ಚ್‌ 7ರಿಂದ ನಡೆಸಲು ಉದ್ದೇಶಿಸಿರುವ ಸರಣಿ ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳಬೇಕೆಂದು ರಾಜ್ಯ ಸಾರಿಗೆ ಸಚಿವ ಸಗೀರ್‌ ಅಹ್ಮದ್‌ ನೌಕರರಲ್ಲಿ ಮನವಿ ಮಾಡಿದ್ದಾರೆ.

ಶುಕ್ರವಾರ ರಸ್ತೆ ಸಾರಿಗೆ ಸಂಸ್ಥೆಯ ಒಕ್ಕೂಟ (ಎಎಸ್‌ಆರ್‌ಟಿಯು) ದ 2 ದಿನಗಳ ಅವಧಿಯ 46ನೇ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ನೌಕರರ ಬೇಡಿಕೆಗಳ ಈಡೇರಿಸುವ ಬಗ್ಗೆ ಚರ್ಚಿಸಲು ಸರ್ಕಾರ ಸದಾ ಕದ ತೆರೆದಿದೆ. ಚರ್ಚೆಗೆ ಮುಕ್ತ ಅವಕಾಶವಿದೆ. ಫೆಬ್ರವರಿ 26ರಂದು ಒಕ್ಕೂಟದ ಸಿಬ್ಬಂದಿಯನ್ನು ಮುಕ್ತ ಚರ್ಚೆಗೆ ಸರ್ಕಾರ ಆಹ್ವಾನಿಸಿದೆ. ಮಾತಿನಿಂದಲೇ ಬಗೆಹರಿಸಿಕೊಳ್ಳಬಹುದಾದ ಸಮಸ್ಯೆಗಳಿಗೆ ಪ್ರತಿಭಟನೆ ಕೂಡದು. ದಯಮಾಡಿ ಪ್ರತಿಭಟನೆ ಕರೆಯನ್ನು ಹಿಂದಕ್ಕೆ ಪಡೆಯಿರಿ ಎಂದು ಒಕ್ಕೂಟದ ಸದಸ್ಯರಲ್ಲಿ ಸಚಿವರು ಮನವಿ ಮಾಡಿಕೊಂಡರು.

ಫೆಬ್ರವರಿ 26ರಂದು ನಡೆಯಲಿರುವ ಸಭೆಯಲ್ಲಿ ಎಲ್ಲಾ 4 ನಿಗಮಗಳ ಕಾರ್ಯನಿರ್ವಾಹಕ ನಿರ್ದೇಶಕರು ಭಾಗವಹಿಸಲಿದ್ದಾರೆ. ಕಳೆದ ವರ್ಷ ಕೆಎಸ್‌ಆರ್‌ಟಿಸಿ 15.40 ಕೋಟಿ ರುಪಾಯಿ ನಷ್ಟ ಅನುಭವಿಸಿದೆ. ಈ ವರ್ಷ ನಷ್ಟದ ಪ್ರಮಾಣವನ್ನು ಸಾಕಷ್ಟು ಕಡಿಮೆ ಮಾಡುವ ವಿಶ್ವಾಸವಿದೆ ಎಂದರು.

ಸಂಸ್ಥೆ ಸಿಬ್ಬಂದಿಯ ನಾಲ್ಕು ಪ್ರಮುಖ ಬೇಡಿಕೆಗಳ ಪೈಕಿ ಎರಡರ ಬಗ್ಗೆ ಈಗಾಗಲೇ ಚರ್ಚಿಸಿದ್ದೇವೆ. ಅನುಗ್ರಹಪೂರ್ವಕ ಮೊತ್ತವನ್ನು ವಿತರಿಸುವುದು ಸಂಸ್ಥೆ ನಷ್ಟದಲ್ಲಿರುವುದರಿಂದ ಕಷ್ಟ ಸಾಧ್ಯವಾಗುತ್ತಿದೆ. ಈ ಕಾರಣ ಮೊತ್ತವನ್ನು ಒದಗಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಕಳೆದ ಜೂನ್‌ನಿಂದ ಹೆಚ್ಚಿಸಲಾಗಿರುವ ವೇತನದಿಂದ ಸಂಸ್ಥೆಗೆ 15 ಕೋಟಿ ರುಪಾಯಿ ಹೊರೆ ಬೀಳುತ್ತಿದೆ. ಇದನ್ನು ಭರಿಸುವ ಮಾರ್ಗಗಳನ್ನು ಸಂಸ್ಥೆ ಹುಡುಕುತ್ತಿದೆ ಎಂದು ಸಚಿವರು ಹೇಳಿದರು.

ಸಂಸ್ಥೆಯ ಖರ್ಚು ವೆಚ್ಚದ ಬಗ್ಗೆ ಶ್ವೇತಪತ್ರ ಹೊರಡಿಸುವ ಬಗೆಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಗೀರ್‌ ಅಹ್ಮದ್‌, ಕಾನೂನು ತಜ್ಞರ ಸಲಹೆ ಪಡೆದು ಸದ್ಯದಲ್ಲೇ ಸಿದ್ಧಪಡಿಸಲಾಗುವುದು ಎಂದರು.

ಎರಡು ದಿನಗಳ ವಾರ್ಷಿಕ ಸಮ್ಮೇಳನದ ಧ್ಯೇಯೋದ್ದೇಶಗಳು ಇಂತಿವೆ...

  • ರಾಜ್ಯ ಸಾರಿಗೆ ಸಂಸ್ಥೆಯ ನಿರ್ವಹಣೆಯಲ್ಲಿ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು, ಸಂಸ್ಥೆಯನ್ನು ಲಾಭಗಳಿಸುವ ಮಟ್ಟಕ್ಕೆ ಕೊಂಡೊಯ್ಯುವುದು ಹೇಗೆ ?- ಚರ್ಚೆ
  • ಸಾರ್ವಜನಿಕ ಹಾಗೂ ಖಾಸಗಿ ವಲಯಗಳ ಕೈಜೋಡಿಸುವಿಕೆಯಿಂದ ಸಂಸ್ಥೆಯನ್ನು ಮೇಲೆತ್ತುವ ಬಗ್ಗೆ ವಿಚಾರ ವಿನಿಮಯ
  • 1997- 98ನೇ ಸಾಲಿನಲ್ಲಿ 500 ಕೋಟಿ ರುಪಾಯಿ ವಾರ್ಷಿಕ ನಷ್ಟ ಅನುಭವಿಸಿದ್ದ ಸಂಸ್ಥೆ 99- 2000ನೇ ಸಾಲಿನಲ್ಲಿ ಬರೋಬ್ಬರಿ 2000 ಕೋಟಿ ರುಪಾಯಿ ನಷ್ಟ ಅನುಭವಿಸಿದೆ. ಲೋಪ ಎಲ್ಲಿದೆ ? ಹಣ ಎಲ್ಲಿ ಸೋರಿಹೋಗುತ್ತಿದೆ, ಯಾಕೆ ?- ಚಿಂತನೆ
ಸಮ್ಮೇಳನದ ಮೊದಲ ದಿನ ಕೇಳಿ ಬಂದ ಮಾತುಗಳು...

  • ಸಗೀರ್‌ ಅಹ್ಮದ್‌ ಉವಾಚ... ಖಾಸಗಿ ಹಾಗೂ ಸಾರ್ವಜನಿಕ ವಲಯಗಳ ಜೊತೆ ಸಂಸ್ಥೆ ಕೈಜೋಡಿಸಿ ಹಣ ಹುಟ್ಟಿಸಿಕೊಳ್ಳಬೇಕಾಗಿದೆ. ಕಾರ್ಮಿಕರಲ್ಲಿ ದಕ್ಷತೆ ಹೆಚ್ಚಿಸುವ ಯೋಜನೆಗಳನ್ನು ರೂಪಿಸಬೇಕಿದೆ. ಗುರುಮ ಘಾತುಕ ನಿರ್ವಾಹಕರ ಜೇಬು ತುಂಬಿ, ಸಂಸ್ಥೆಯ ಬೊಕ್ಕಸಕ್ಕೆ ಸಾಕಷ್ಟು ನಷ್ಟ ಆಗುತ್ತಿದೆ. ಇನ್ನು ಮುಂದೆ ನಿರ್ವಾಹಕ ರಹಿತ ಬಸ್‌ಗಳನ್ನೇ ಹೆಚ್ಚಾಗಿ ಸಂಚಾರಕ್ಕೆ ಅಣಿಗೊಳಿಸಬೇಕು. ಇದಕ್ಕಾಗಿ ಸ್ವಯಂ ಚಾಲಿತ ಹಣ ಸಂಗ್ರಹಣಾ ಯಂತ್ರಗಳ ಅಳವಡಿಕೆ ಆಗಬೇಕು.
    ಸಾರಿಗೆ ಸಂಸ್ಥೆ ವ್ಯಾಪ್ತಿಯ ಆಡಳಿತ ಯಂತ್ರಗಳಿಗೆ ಬಸ್‌ ಪ್ರಯಾಣ ದರ ನಿಗದಿ ಪಡಿಸುವ ಕನಿಷ್ಠ ಸ್ವಾಯತ್ತತೆಯನ್ನಾದರೂ ಕೊಡಬೇಕು.

  • ಎ.ಕೋಟೀಶ್ವರನ್‌, ಎಎಸ್‌ಆರ್‌ಟಿಯು ವ್ಯವಸ್ಥಾಪಕ ನಿರ್ದೇಶಕ-
  • ಎಂಟು ನಗರಗಳಲ್ಲಿ ಸಂಚಾರಕ್ಕೆ ಅನುವಾಗಲು ಸಿಎನ್‌ಐ ಬಸ್‌ಗಳನ್ನು ರಸ್ತೆಗೆ ತರಲು ಸುಮಾರು 1500 ಕೋಟಿ ರುಪಾಯಿ ಬೇಕಿದೆ. ಸಂಸ್ಥೆಗಳ ಪುನರ್‌ ರಚನೆ ಮಾಡುವಾಗ, ಆಯವ್ಯಯದ ಪಕ್ಕಾ ದಾಖಲೆಗಳನ್ನು ಕಾಪಿಡುವುದು ಹಾಗೂ ಸುಧಾರಣೆಗಳಿಗೆ ಹೆಚ್ಚು ಒತ್ತು ಕೊಡುವುದು ಅತ್ಯವಶ್ಯ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X