Get Updates
Get notified of breaking news, exclusive insights, and must-see stories!

ಇಂತಹುದೊಂದು ಪರಿಸ್ಥಿತಿಯ ಬಗ್ಗೆ ಯಾರೂ ಪ್ರತಿಭಟನೆಯ ಮಾತಾಡುತ್ತಿಲ್ಲ ...

ಅದೃಷ್ಟವಶಾತ್‌ ಜಾನ್‌ರ ಹೇಳಿಕೆ ವಿಡಿಯೋ ಕ್ಯಾಮರಾದಲ್ಲಿ ರೆಕಾರ್ಡ್‌ ಆಗಿದೆ. ಆದ್ದರಿಂದ ಅವರ ಹೇಳಿಕೆಯನ್ನು ನಿರಾಕರಿಸುವುದಾಗಲಿ, ಅವರ ಹೇಳಿಕೆ ಕೋಮು ಸೌಹಾರ್ದತೆ ಹದಗೆಡಿಸುವಂತಹದೇನಲ್ಲ ಎನ್ನುವುದಾಗಲೀ ನಡೆದಿಲ್ಲ . ಜಾನ್‌ ಹೇಳಿಕೆ ಎಂತಹುದು ಎನ್ನುವ ಬಗ್ಗೆ ಬಿಜೆಪಿಯವರಿಗಿಂತ ಚೆನ್ನಾಗಿ ಇನ್ನು ಯಾರು ಸರ್ಟಿಫಿಕೇಟ್‌ ಕೊಡಬಲ್ಲರು ? (ಏಕೆಂದರೆ ಬಿಜೆಪಿಯಲ್ಲಿ ಇಂಥಾ ವಿಷಯದಲ್ಲಿ ಬಹಳಷ್ಟು ಮಂದಿ ಪಿಎಚ್‌ಡಿ ಮಾಡಿರುವ ಸಬ್ಜೆಕ್ಟ್‌ ಮ್ಯಾಟರ್‌ ಎಕ್ಸ್‌ಪರ್ಟ್‌ಗಳಿದ್ದಾರೆ !). ಆದ್ದರಿಂದಲೇ, ಬಿಜೆಪಿಯ ಪ್ರತಿಭಟನೆಗೆ ಹೆಚ್ಚಿನ ಬೆಲೆ ಇರುವುದಿಲ್ಲ . ಬಿಜೆಪಿಯ ಪ್ರತಿಭಟನೆಗೆ ಬೆಲೆ ಬರುವುದು ಇತರರು ಬೇಜವಾಬ್ದಾರಿಯಿಂದ ವರ್ತಿಸಿದಾಗ.

ಕರ್ನಾಟಕದಲ್ಲಿ ಜಾತ್ಯತೀತ ಜನತಾದಳ ಎಂಬ ಪಕ್ಷವಿದೆ. ಮಾಜಿ ಪ್ರಧಾನಿಗಳಂತ ನಾಯಕರಿದ್ದಾರೆ. ಆದರೆ ಆ ಪಕ್ಷದ ಯಾವ ಕುರಿಮರಿಯೂ ಟಿ. ಜಾನ್‌ ಬಗ್ಗೆ ಪ್ರತಿಕ್ರಿಯಿಸಲಿಲ್ಲ . ವಾರ ಕಳೆದ ಮೇಲೆ, ಸುಬ್ಬಯ್ಯ (ಕರ್ನಾಟಕದ ಸುಬ್ರಹ್ಮಣ್ಯ ಸ್ವಾಮಿ - ಅಂದರೆ - ಕರ್ನಾಟಕದ ಅರೆ ಮರುಳ ರಾಜಕಾರಣಿ) ಟಿ. ಜಾನ್‌ ಹೇಳಿದ್ದೇ ಸರಿ ಅಂತ ಅಪ್ಪಣೆ ಕೊಡಿಸಿದ್ದಾರೆ. ಇಂಥಾ ಅಸಂಬದ್ಧ ಹೇಳಿಕೆ ಕೊಡಲಿಕ್ಕಾಗಿಯೆ ಅವರನ್ನು ದೇವೇಗೌಡರು ಪಕ್ಷಕ್ಕೆ ಕರೆದು ಸೇರಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.

ಕರ್ನಾಟಕದಲ್ಲಿ ಪ್ರಗತಿಪರರೆನಿಸಿಕೊಂಡ ಕವಿಗಳು, ಕಾದಂಬರಿಕಾರರೂ, ಸಾಹಿತಿಗಳೂ, ವಿಚಾರವಾದಿಗಳೂ ಇದ್ದಾರೆ. ಇವರ್ಯಾರೂ ಇನ್ನು ಬಾಯಿಬಿಟ್ಟಿಲ್ಲ . ಒಟ್ಟಾರೆಯಾಗಿ, ಇಂತಹುದೊಂದು ಪರಿಸ್ಥಿತಿಯ ಬಗ್ಗೆ ಯಾರೂ ಪ್ರತಿಭಟನೆಯ ಮಾತಾಡುತ್ತಿಲ್ಲ .

ಅಲ್ಪ ಸಂಖ್ಯಾತನೆಂದಲ್ಲ , ಅಧಿಕ ಪ್ರಸಂಗಿಯೆಂದು

ಟಿ. ಜಾನ್‌ ಅವರ ಇತ್ತೀಚಿನ ಹೇಳಿಕೆ ಪ್ರಕಾರ, ಅವರ ಮೇಲೆ ಕೇಸು ದಾಖಲಾಗಿರುವುದು ಅವರು ಅಲ್ಪ ಸಂಖ್ಯಾತನೆಂದು. ಆದರೆ ವಸ್ತುಸ್ಥಿತಿ ಏನೆಂದರೆ, ಅವರು ಅಧಿಕಪ್ರಸಂಗಿಯಂತೆ ಮಾತಾಡಿದುದರ ಫಲ ಅನುಭವಿಸುತ್ತಿದ್ದಾರೆ. ಅವರ ಮೇಲೆ ಇನ್ನೂ ಕಾನೂನು ಕ್ರಮ ಕೈಗೊಳ್ಳದಿದ್ದರೆ ಅದಕ್ಕೆ ಕಾರಣ, ಅವರು ಅಲ್ಪ ಸಂಖ್ಯಾತರೆನ್ನುವುದು. ಧರ್ಮದ ಆಧಾರದಲ್ಲಿ ತಿರಸ್ಕರಿಸುವ, ದ್ವೇಷಿಸುವ ಬಿಜೆಪಿಯವರದು ಎಷ್ಟು ದೊಡ್ಡ ತಪ್ಪೊ, ಧರ್ಮದ ಆಧಾರದಲ್ಲಿ ಒಬ್ಬರನ್ನು ಪುರಸ್ಕರಿಸುವ, ಓಲೈಸುವ ಇತರರದೂ ಅಷ್ಟೆ ದೊಡ್ಡ ತಪ್ಪು . ಇಂಥಾ ಘಟನೆಗಳು ಬಹುಸಂಖ್ಯಾತರನ್ನು ಹೆಚ್ಚು ಹೆಚ್ಚು ಕೋಮವಾದದೆಡೆಗೆ ತಳ್ಳುತ್ತವೆ ಹಾಗೂ ಬಿಜೆಪಿಯಂಥ ಅಪ್ಪಟ ಕೋಮುವಾದಿಗಳನ್ನು ಬೆಳೆಸುತ್ತವೆ.

ಮುಖ್ಯಮಂತ್ರಿಗಳಿಗೊಂದು ಕಾರ್ಯ ಯೋಜನೆ - ಆ್ಯಕ್ಷನ್‌ ಪ್ಲಾನ್‌

  • ಒಬ್ಬ ಕ್ರಿಶ್ಚಿಯನ್‌ ಮುಖಂಡರನ್ನು (ಡೆಲ್ಲಿ ಮೇಡಂ ಯಾರನ್ನು ಸೂಚಿಸುತ್ತಾರೊ ಅವರನ್ನು !) ತಕ್ಷಣವೆ ಮಂತ್ರಿಗಳನ್ನಾಗಿ ನೇಮಕ ಮಾಡುವುದು. ಕಾಂಗ್ರೆಸ್‌ನಲ್ಲಿ ಅರ್ಹ ಕ್ರಿಶ್ಚಿಯನ್‌ ಮುಖಂಡರು ಬಹಳ ಜನರಿದ್ದಾರೆ.
  • ಟಿ. ಜಾನ್‌ ಅವರನ್ನು ಎಂಎಲ್‌ಸಿ ಪದವಿಯಿಂದ ತೆಗೆದು ಹಾಕಿ, ಅಲ್ಲಿಗೂ ಇನ್ನೊಬ್ಬ ಕ್ರಿಶ್ಚಿಯನ್‌ ಮುಖಂಡರ ನ್ನು ನೇಮಕ ಮಾಡುವುದು.
  • ಟಿ. ಜಾನ್‌ ಅವರನ್ನು ಕಾಂಗ್ರೆಸ್‌ನಿಂದ ತೆಗೆದು ಹಾಕುವುದು.
  • ಟಿ. ಜಾನ್‌ ಪ್ರಕರಣದಲ್ಲಿ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರಿಗೆ ಆದೇಶ ನೀಡುವುದು.
ಇವೆಲ್ಲವನ್ನು ಬಿಜೆಪಿಯವರು ಕೇಳಿದರು ಅಥವಾ ಕೇಳಲಿಲ್ಲ ಎಂದು ಮಾಡಬೇಕಾಗಿಲ್ಲ . ರಾಜ್ಯಕ್ಕೆ ಪಾರದರ್ಶಕ ಆಡಳಿತ ಕೊಡುವ ಜವಾಬ್ದಾರಿಯಿಂದ ಸ್ವತಃ ಮಾಡಬೇಕಾಗಿದೆ. ಇಲ್ಲವಾದಲ್ಲಿ ಇಂಥಾ ಮರಿ ಠಾಕ್ರೆಗಳು ಹೆಚ್ಚುತ್ತಲೆ ಇರುತ್ತಾರೆ ಮತ್ತು ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಕಾಂಗ್ರೆಸ್‌ ಪಶ್ಚಾತ್ತಾಪ ಪಡಬೇಕಾದೀತು.

ಮುಖಪುಟ / ಇವತ್ತು... ಈ ಹೊತ್ತು...
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+