ಭುಜ್ : ಪರಿಕರಗಳಲ್ಲಿ ಸಿಕ್ಕಿ ಬಿದ್ದಿದ್ದ 26 ಕೋಟಿ ರು. ಬಾಂಡ್ ಪತ್ತೆ
ಭುಜ್ : ಕಂಪನದಿಂದ ಕುಸಿದಿರುವ ಕಟ್ಟಡಗಳ ಪರಿಕರಗಳಡಿಯಲ್ಲಿ ಸಿಕ್ಕಿಬಿದ್ದಿದ್ದ 26 ಕೋಟಿ ರುಪಾಯಿ ಮೌಲ್ಯದ ಸರ್ಕಾರಿ ಬಾಂಡ್‌ಗಳನ್ನು ಸೇನಾ ಸಿಬ್ಬಂದಿ ಹುಡುಕಿ ತೆಗೆದಿದ್ದಾರೆ.
ಎಂಜಿನಿಯರ್ ರೆಜಿಮೆಂಟ್-12 ತಂಡ ಈ ಅಪಾರ ಮೊತ್ತದ ಬಾಂಡ್‌ಗಳನ್ನು ಶತಾಯಗತಾಯ ಯತ್ನಿಸಿ ಹೆಕ್ಕಿ ತೆಗೆದಿದ್ದಾರೆ. ಎಂಜಿನಿಯರ್ ರೆಜಿಮೆಂಟ್- 108 ತಂಡ ಸುಮಾರು 12 ಕೆಜಿ ತೂಕದ ತಾಮ್ರ ಹಾಗೂ ಕಂಚಿನ ಹಳೆ ಕಾಲದ ನಾಣ್ಯಗಳನ್ನು ಹುಡುಕಿದ್ದಾರೆ. ಯಾವುದೋ ಒಬ್ಬ ವ್ಯಕ್ತಿ ಸಂಗ್ರಹಿಸಿರುವ ಈ ಅಪರೂಪದ ನಾಣ್ಯಗಳು ಈಗ ಪೊಲೀಸ್ ವಶದಲ್ಲಿವೆ. ಈ ಮೊದಲು ಇದೇ ಸೇನಾ ತಂಡ ಸುಮಾರು 1 ಕಿಲೋ ತೂಕದ ಚಿನ್ನ ಹಾಗೂ ಬೆಳ್ಳಿ ಹೆಕ್ಕಿ ತೆಗೆದಿದ್ದರು.
ಕಛ್‌ನಲ್ಲಿ ದಾಖಲೆ ಲಘು ಭೂಕಂಪಗಳು : ಕಛ್‌ನಲ್ಲಿ ಭೂತಾಯಿ ಇನ್ನೂ ಶಾಂತಳಾಗಿಲ್ಲ. ಬುಧವಾರದಿಂದ ಈವರೆಗೆ 11 ಲಘು ಭೂಕಂಪಗಳು ಸಂಭವಿಸಿದ್ದು, ಈ ಪ್ರದೇಶದಲ್ಲಿ ಈವರೆಗೆ ಒಟ್ಟು 325 ಲಘು ಭೂಕಂಪಗಳು (ಜನವರಿ 26ರಿಂದ) ಸಂಭವಿಸಿದಂತಾಗಿದೆ. ರಿಕ್ಟಾರ್ ಮಾಪಕದಲ್ಲಿ ಈ ಲಘು ಕಂಪನಗಳ ತೀವ್ರತೆ 3 ರಿಂದ 3.8ರಷ್ಟು ದಾಖಲಾಗಿದೆ.
ಒಂದೇ ದಿನದಲ್ಲಿ ಎಲ್‌ಐಸಿ ಹಣ ವಿತರಣೆ : ಕಂಪನದಲ್ಲಿ ಮೃತಪಟ್ಟಿರುವ ವಿಮಾದಾರರ ಕುಟುಂಬದವರಿಗೆ ವಿಮಾ ಮೊತ್ತವನ್ನು ತ್ವರಿತವಾಗಿ ವಿತರಿಸಲು ಎಲ್‌ಐಸಿ ವಿಶೇಷ ಘಟಕಗಳನ್ನು ತೆರೆದಿದೆ. ವಿಳಂಬ ಹಣ ವಿತರಣೆಯಿಂದ ಜನ ರೋಸಿ ಹೋಗುವಂತೆ ಮಾಡಿದೆ ಎಂಬ ಆಪಾದನೆಯನ್ನೂ ಹೊತ್ತಿರುವ ಸಂಸ್ಥೆ ಈಗ ಕ್ಷಿಪ್ರ ಕಾರ್ಯಾಚರಣೆಗೆ ಹೆಸರುವಾಸಿಯಾಗಿದೆ. ಸೂರತ್ತಿನ ಘಟಕ ಒಂದೇ ದಿನದಲ್ಲಿ 8.75 ಲಕ್ಷ ರುಪಾಯಿ ವಿಮಾ ಹಣವನ್ನು ಹಕ್ಕುದಾರರಿಗೆ ನೀಡಿದೆ. ಎಲ್‌ಐಸಿಯ ಸೂರತ್‌ನ ವಿಭಾಗಾಧಿಕಾರಿ ಜಿ.ಎಂ.ಸದ್ದಳಿಗಿ ಈ ವಿಷಯ ತಿಳಿಸಿದರು.
(ಯುಎನ್‌ಐ)
| ಮುಖಪುಟ |
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications