Get Updates
Get notified of breaking news, exclusive insights, and must-see stories!

ರಾಜ್ಯಾದ್ಯಂತ ಅನುದಾನಿತ ಪದವಿ ಕಾಲೇಜುಗಳ ಯಶಸ್ವಿ ಬಂದ್‌

ಬೆಂಗಳೂರು : ಅನುದಾನಿತ ಖಾಸಗಿ ಕಾಲೇಜುಗಳ ಅನುದಾನದಲ್ಲಿ ಶೇ. 15 ರಷ್ಟನ್ನು ಕಡಿತ ಮಾಡುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯ ಹಾಗೂ ಕಾಲೇಜು ಅಧ್ಯಾಪಕರ ಸಂಘಗಳ ಒಕ್ಕೂಟ ನೀಡಿದ ಅನುದಾನಿತ ಪದವಿ ಕಾಲೇಜುಗಳ ಒಂದು ದಿನದ ಮುಷ್ಕರದ ಕರೆಗೆ ರಾಜ್ಯಾದ್ಯಂತ ಸಂಪೂರ್ಣ ಬೆಂಬಲ ವ್ಯಕ್ತವಾಯಿತು.

ರಾಜ್ಯಾದ್ಯಂತ ಇರುವ 292 ಅನುದಾನಿತ ಪದವಿ ಕಾಲೇಜುಗಳು ಗುರುವಾರ ಬಂದ್‌ನಲ್ಲಿ ಪಾಲ್ಗೊಂಡವು. ಕಾಲೇಜುಗಳ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಕಾಲೇಜುಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಸರ್ಕಾರಿ ಕಾಲೇಜು ಉಪನ್ಯಾಸಕರು ಬಂದ್‌ನಲ್ಲಿ ಭಾಗಿಯಾಗಲಿಲ್ಲ . ಆದರೆ, ಮುಷ್ಕರಕ್ಕೆ ಅವರು ತಮ್ಮ ನೈತಿಕ ಬೆಂಬಲ ವ್ಯಕ್ತ ಪಡಿಸಿದರು.

ಅನುದಾನ ಕಡಿತ ನಿರ್ಧಾರ ಕೈಬಿಡಿ : ನಗರದ ಶೇಷಾದ್ರಿಪುರಂ ಕಾಲೇಜು, ಎಂಇಎಸ್‌ ಕಾಲೇಜು, ವಿಜಯ ಕಾಲೇಜು, ಸೆಂಟ್‌ ಜೋಸೆಫ್‌ ಕಾಲೇಜು, ನಿಜಲಿಂಗಪ್ಪ ಕಾಲೇಜು ಸೇರಿದಂತೆ ಅನೇಕ ಅನುದಾನಿತ ಕಾಲೇಜುಗಳ ಸಿಬ್ಬಂದಿ ತರಗತಿಗಳನ್ನು ಬಹಿಷ್ಕರಿಸಿ, ಪ್ರತಿಭಟನೆ ನಡೆಸಿದರು. ನಗರದ ಎಂಇಎಸ್‌ ಕಾಲೇಜು ಮುಂಭಾಗ ನಡೆದ ಪ್ರತಿಭಟನಾಕಾರರ ಸಭೆಯ ನೇತೃತ್ವವನ್ನು ಕಾಲೇಜು ಅಧ್ಯಾಪಕರುಗಳ ಸಂಘದ ಅಧ್ಯಕ್ಷ ರವೀಂದ್ರ ರೇಷ್ಮೆ ವಹಿಸಿದ್ದರು. ಖಾಸಗಿ ಕಾಲೇಜುಗಳ ಅನುದಾನದಲ್ಲಿ ಶೇ. 15 ರಷ್ಟನ್ನು ಕಡಿತಗೊಳಿಸುವ ನಿರ್ಧಾರವನ್ನು ಕೈ ಬಿಡಬೇಕೆಂದು ಸಭೆ ಸರ್ಕಾರವನ್ನು ಒತ್ತಾಯಿಸಿತು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರವೀಂದ್ರ ರೇಷ್ಮೆ, ರಾಜ್ಯಾದ್ಯಂತ ಮುಷ್ಕರಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಇನ್ನು 10 ದಿನಗಳೊಳಗಾಗಿ ಸರ್ಕಾರ ಎಚ್ಚತ್ತು ನಮ್ಮ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಫೆ. 26 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಹೇಳಿದರು.

ಮುಷ್ಕರ ಯಶಸ್ವಿ : ಖಾಸಗಿ ಕಾಲೇಜುಗಳ ಮುಷ್ಕರಕ್ಕೆ ರಾಜ್ಯದ ವಿವಿಧ ಸಂಘಟನೆಗಳು ತಮ್ಮ ಬೆಂಬಲ ವ್ಯಕ್ತಪಡಿಸಿದ್ದವು. ಮಂಗಳೂರಿನಲ್ಲಿಯೂ ಮುಷ್ಕರ ಸಂಪೂರ್ಣ ಯಶಸ್ವಿ ಎಂದು ನಮ್ಮ ಮಂಗಳೂರು ಬಾತ್ಮೀದಾರರು ನಡೆಸಿದ್ದಾರೆ. ಈ ನಡುವೆ, ಉಪನ್ಯಾಸಕರು ಮುಷ್ಕರ ನಿರತರಾದರೆ, ಪರೀಕ್ಷಾ ಕಾರ್ಯಗಳಿಗೆ ತೊಂದರೆಯಾಗುತ್ತದೆ ಎಂದು ಮಂಗಳೂರು ವಿವಿ ಮೂಲಗಳು ತಿಳಿಸಿವೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+