Get Updates
Get notified of breaking news, exclusive insights, and must-see stories!

ಕಾಡುಗಳ್ಳನ ವಿರುದ್ಧದ ಕಾರ್ಯಾಚರಣೆ ಸಿಬ್ಬಂದಿ ಮೇಲೆ ಕಾಡೆಮ್ಮೆ ದಾಳಿ

ಚಾಮರಾಜನಗರ : ಕಾಡುಗಳ್ಳನನ್ನು ಹಿಡಿಯಲು ಸತ್ಯಮಂಗಲ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದ್ದ ಎಸ್‌ಟಿಎಫ್‌ ತಂಡದ ಮೇಲೆ ಬುಧವಾರ ಕಾಡೆಮ್ಮೆಯಾಂದು ದಾಳಿ ಮಾಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಇಲ್ಲಿಗೆ ತಲುಪಿರುವ ವರದಿ ಹೇಳಿದೆ.

ಬುಧವಾರ ಸಂಜೆ 4.30ರ ಸಮಯದಲ್ಲಿ ಸತ್ಯಮಂಗಲ ಅರಣ್ಯ ವ್ಯಾಪ್ತಿಯ ಬೆಜ್ಜಲಟ್ಟಿ ಯಲ್ಲಿ ಕಾಡೆಮ್ಮೆಯಾಂದು ಎಸ್‌ಟಿಎಫ್‌ ಅಧಿಕಾರಿ ಮೊನ್ನಪ್ಪ ಅವರ ನೇತೃತ್ವದ 12 ಮಂದಿ ತಂಡದ ಮೇಲೆ ದಾಳಿ ನಡೆಸಿತು. ಈ ದಾಳಿಯಲ್ಲಿ ಇನ್ಸ್‌ಪೆಕ್ಟರ್‌ ಮೊನ್ನಪ್ಪ ಮತ್ತು ಪೇದೆ ತಿಪ್ಪೇಸ್ವಾಮಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳಿಗೆ ಸತ್ಯಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೊಯಮತ್ತೂರಿನ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಈ ಮಧ್ಯೆ ಕೇರಳದ ವಾಳಯಾರ್‌ನಿಂದ ಸತ್ಯಮಂಗಲಕ್ಕೇ ಮರಳಿದ್ದಾನೆ ಎನ್ನಲಾಗಿರುವ ನರಹಂತಕ ವೀರಪ್ಪನ್‌ಗಾಗಿ ತೀವ್ರ ಶೋಧ ಮುಂದುವರಿದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+