ಏನೂ ವಿಶೇಷವಿಲ್ಲ ಎಂದರೆ ನಂಬುವಿರಾ ?
ವಿಶೇಷಗಳಿಲ್ಲದ ದಿನ ಯಾವುದು ? ಅಂಥಾ ಒಂದು ದಿನಕ್ಕಾಗಿ ಬೆಂಗಳೂರು ಸೇರಿದ ಜಗತ್ತು ಎದುರು ನೋಡುತ್ತಿದೆ. ಕಳೆದೊಂದು ವಾರವಿಡೀ ಬೆಂಗಳೂರು ಬಾನಿನಲ್ಲಿ ಧೂಳೆಬ್ಬಿಸಿದ್ದ ಏರೋ ಇಂಡಿಯಾ- 2001, ಇತಿಹಾಸದ ಪುಟಗಳಲ್ಲಿ ಸಂದು, ನಾಳೆಯ ವಿಶೇಷವೇನು ಅನ್ನುತ್ತಿದ್ದಂತೆ ಎದುರಾದುದು ಪ್ರೇಮಿಗಳ ದಿನ.
ಪ್ರೇಮಿಗಳ ಉತ್ಸಾಹಕ್ಕಿಂತ, ಆಚರಣೆಗೆ ಕೆಲವರು ವ್ಯಕ್ತ ಪಡಿಸಿದ ವಿರೋಧವೇ ಹೆಚ್ಚು ಪ್ರಚಾರ ಪಡೆದಿದೆ. ಆದರೆ, ಪ್ರೇಮಿಗಳ ಪಾಲಿಗೆ ಈ ವಿರೋಧಕ್ಕೆ ಯಾವ ಕಿಮ್ಮತ್ತೂ ಇಲ್ಲ . ಅವರ ಪ್ರೇಮ ಅವರದು. ಬೆಳಿಗ್ಗೆ 11 ರ ಹೊತ್ತಿಗಾಗಲೇ ಮಾರುಕಟ್ಟೆಯಲ್ಲಿ ಕೆಂಪು ಗುಲಾಬಿಗಳ ಸರಕು ಮುಗಿದಿತ್ತು . ಬೆಂಗಳೂರಿನಿಂದ, ಭಾರತದ ಪ್ರಮುಖ ನಗರಗಳಿಗೆ ಮಾತ್ರವಲ್ಲದೆ ವಿಶ್ವದ ಅನೇಕ ಮೂಲೆಗಳಿಗೂ ಗುಲಾಬಿಗಳು ರಫ್ತಾಗಿವೆಯಂತೆ. ಅಲ್ಲಿಗೆ, ವಿಶ್ವದ ಎಲ್ಲೆಡೆಗೂ ರಾಜ್ಯದಿಂದ ಪ್ರೀತಿಯ ರವಾನೆ ಆದಂತಾಯಿತು.
ಏನೂ ವ್ಯತ್ಯಾಸವಿಲ್ಲದಂತೆ ಸಾಗುತ್ತಿರುವುದು ರಾಜ್ಯದ ಹವೆ ಮಾತ್ರ. ಬುಧವಾರ, ಒಣಹವೆಯಲ್ಲಿ ವ್ಯತ್ಯಾಸವೇನೂ ಇರಲಿಲ್ಲ . ಕರಾವಳಿ ಸೇರಿದಂತೆ ರಾಜ್ಯದ ಹಲವು ಭಾಗಗಳ ಕನಿಷ್ಠ ತಾಪಮಾನದಲ್ಲಿ ಕೊಂಚ ವ್ಯತ್ಯಾಸವಿತ್ತು . ಬೆಳಗಾವಿ ವಿಮಾನ ನಿಲ್ದಾಣದಲ್ಲಿ ದಿನದ ಕನಿಷ್ಠ ಉಷ್ಣಾಂಶ 11.9 ಡಿಗ್ರಿ ಸೆಲ್ಷಿಯಸ್ ದಾಖಲಾಗಿತ್ತು . ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ನಾಳೆ ನಾಳಿದ್ದೂ ಒಣಹವೆ ಮುಂದುವರಿಯಲಿದೆ. ಬೆಂಗಳೂರಿನಲ್ಲಿ ಶುಭ್ರಾಕಾಶ. ಗುರುವಾರ 17 ಡಿಗ್ರಿ ಸೆಲ್ಷಿಯಸ್ ಆಸುಪಾಸಿನಲ್ಲಿ ಉಷ್ಣಾಂಶ ಸುಳಿದಾಡುತ್ತಿರುತ್ತದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications