ಬಂತು ಬೇಸಿಗೆ, ಪ್ರವಾಸ ಎಲ್ಲಿಗೆ ? ಕೆಎಸ್‌ಟಿಡಿಸಿ ನಿಮ್ಮ ನೆರವಿಗೆ
ಬೆಂಗಳೂರು : ಬಿಸಿಲು ಹೆಚ್ಚಾಯ್ತು. ಬೇಸಿಗೆ ಶುರುವಾಯ್ತು. ಗಿರಿಧಾಮಗಳು ನಿಮ್ಮನ್ನು ಬನ್ನಿ ಎಂದು ಕರೆದೂ ಆಯ್ತು. ಆದರೆ, ಹೋಗುವುದಾದರೂ ಎಲ್ಲಿಗೆ? ಹೇಗೆ? ನಿಮ್ಮ ಈ ಮನದ ತೊಳಲಾಟವನ್ನು ಅರಿತ ರಾಜ್ಯ ಪ್ರವಾಸೋದ್ಯಮ ನಿಗಮ ಮೂರು ಹೊಸ ಪ್ರವಾಸಗಳನ್ನು ಆರಂಭಿಸಿದೆ.
ಮೈಸೂರು, ಊಟಿ, ಕೂನೂರು, ಕೊಡೈಕೆನಾಲ್ ಇನ್ನೂ ಮುಂತಾದ ತಂಪಾದ ಪ್ರದೇಶಗಳಿಗೆ ನಿಮ್ಮನ್ನು ಕರೆದೊಯ್ಯಲು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಪ್ರತಿ ಸೋಮವಾರ ಹಾಗೂ ಗುರುವಾರ 5 ದಿನಗಳ ಪ್ರವಾಸ ಕಾರ್ಯಕ್ರಮ ರೂಪಿಸಿದೆ. ಆ ಎರಡು ದಿನಗಳಂದು ಬೆಳಗ್ಗೆ 7-15ಕ್ಕೆ ಹೊರಟು 5ನೇ ದಿನ ಬೆಳಗ್ಗೆ 6 ಗಂಟೆಗೆ ನೀವು ವಾಪಸಾಗಬಹುದು.
ಈ ವಿಶೇಷ ಬೇಸಿಗೆ ಪ್ರವಾಸ ಫೆಬ್ರವರಿ 19 ಹಾಗೂ 22ರಿಂದ ಆರಂಭ. ಪ್ರವಾಸ ದರ ತಲಾ 1750 ರುಪಾಯಿ. ಇದಲ್ಲದೆ ಪ್ರತಿ ಶನಿವಾರ ಬೆಳಗ್ಗೆ 7-15ಕ್ಕೆ ಆರಂಭವಾಗುವ ಮತ್ತೊಂದು ಪ್ರವಾಸ ಮೈಸೂರು, ಬಂಡೀಪುರ, ಊಟಿ, ಕೂನೂರು, ಬ್ಲಾಕ್ ಥಂಡರ್‌ಗೆ . ಇದು ಕೇವಲ 4 ದಿನದ ಪ್ರವಾಸ. ಅಂದರೆ ಶನಿವಾರ ಪ್ರವಾಸ ಆರಂಭಿಸುವ ಪ್ರವಾಸಿಗರು ಮತ್ತೆ ಮಂಗಳವಾರ ವಾಪಸಾಗಬಹುದು.
ಮೂರನೆಯದು ಬಹು ಸುದೀರ್ಘ ಪ್ರವಾಸ. ಇದು 12 ದಿನಗಳ ಕಾರ್ಯಕ್ರಮ . ಈ ಪ್ರವಾಸ ಕೈಗೊಂಡರೆ, ತೀರ್ಥಕ್ಷೇತ್ರ, ಗಿರಿಧಾಮ, ಪ್ರೇಕ್ಷಣೀಯ ಸ್ಥಳಗಳನ್ನು ಸಂದರ್ಶಿಸಬಹುದು. ಆ ಸ್ಥಳಗಳು ಯಾವುವೆಂದರೆ ....
ಪದ್ಮಾವತಿ, ಲಕ್ಷ್ಮೀ ಸಹಿತನಾಗಿ ಶ್ರೀನಿವಾಸ ನೆಲೆಸಿರುವ ತಿರುಪತಿ, ಕಾಂಚೀಪುರ, ತಮಿಳುನಾಡಿನ ರಾಜಧಾನಿ ಹಾಗೂ ಬೀಚಿನ ನಗರ ಚೆನ್ನೈ, ಶಿಲ್ಪಕಲೆಯಿಂದ ಮನಸೂರೆಗೊಳ್ಳುವ ಮಹಾಬಲಿ ಪುರಂ, ಅರವಿಂದರ ನೆಲೆವೀಡು ಪಾಂಡಿಚೇರಿ, ಚಿದಂಬರಂ, ಕುಂಭಕೋಣಂ, ಬೃಹದೇಶ್ವರನ ಸನ್ನಿಧಿ ತಂಜಾವೂರು, ಕಾವೇರಿ ತೀರದಿ ಪವಡಿಸಿರುವ ರಂಗನಾಥನ ಸನ್ನಿಧಿ ಶ್ರೀರಂಗ, ತಿರುಚಿನಾಪಳ್ಳಿ, ಮೀನಾಕ್ಷಿಯ ಮದುರೈ, ದಕ್ಷಿಣ ಕಾಶಿ ರಾಮೇಶ್ವರಂ, ಭಾರತ ಭೂಶಿರ ಕನ್ಯಾಕುಮಾರಿ, ಪೆರಿಯಾರ್ ವನ್ಯಮೃಗಾಲಯ, ದಕ್ಷಿಣ ಭಾರತದ ಕಾಶ್ಮೀರ ಕೊಡೈಕೆನಾಲ್, ಸುಬ್ರಹ್ಮಣ್ಯ ನೆಲೆಸಿಹ ಪಳನಿ, ತಂಪಾದ ಊಟಿ ಹಾಗೂ ಬಂಡೀಪುರ. ಪ್ರವಾಸದ ದರ 5,500 ರುಪಾಯಿ.
ಈ ಪ್ರವಾಸ ಪ್ರತಿ ತಿಂಗಳ ಎರಡನೇ ಶನಿವಾರ ಮೈಸೂರಿನಿಂದ ಆರಂಭವಾಗುತ್ತದೆ. ಮಾರ್ಚ್ 10ರಂದು ಮೊದಲ ಪ್ರವಾಸ ಆರಂಭವಾಗುತ್ತದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ. ಮೈಸೂರಿನಲ್ಲಿ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821- 423652 ಅಥವಾ ಮೈಸೂರಿನ ಕೆಎಸ್‌ಟಿಡಿಸಿ ಕಚೇರಿ ಸಂಪರ್ಕಿಸಬಹುದು.
ಪ್ರವಾಸೋದ್ಯಮ ನಿಗಮ ಬೆಂಗಳೂರಿನಿಂದ ದಕ್ಷಿಣ ಭಾರತ ಪ್ರವಾಸವನ್ನು ಪ್ರತಿ ತಿಂಗಳ ಎರಡನೇ ಗುರುವಾರ ಆರಂಭಿಸಿಯಾಗಿದೆ. ಎಲ್.ಟಿ.ಸಿ. ಸೌಲಭ್ಯವೂ ಉಂಟು. ವಿವರಗಳನ್ನು ಬಾದಾಮಿ ಹೌಸ್‌ನಲ್ಲಿರುವ ಪ್ರವಾಸೋದ್ಯಮ ಇಲಾಖೆಯ ಕಚೇರಿಯಿಂದ ಪಡೆಯಬಹುದು. ದೂರವಾಣಿ ಸಂಖ್ಯೆಗಳು : 080-2275883, 080-2275869 ಮತ್ತು 080-2212098.
(ಇನ್‌ಫೊವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications