ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಡಿಎಸ್‌ ಈಸ್‌ ನಾಟ್‌ ಟೀಡಿಯಸ್‌, ಆದಾಯ ತೆರಿಗೆ ವೆಬ್‌ಸೈಟ್‌

By Staff
|
Google Oneindia Kannada News

ಬೆಂಗಳೂರು : ಮಾರ್ಚ್‌ ತಿಂಗಳು ಸುಳಿಯುವ ಮುನ್ನವೇ ಆದಾಯ ತೆರಿಗೆಯ ಜಂಜಾಟ ಆರಂಭ. ಬಹುತೇಕ ಡಿಸೆಂಬರ್‌ ತಿಂಗಳಿನಿಂದಲೇ ಸಂಬಳದಲ್ಲಿ ಆದಾಯ ತೆರಿಗೆ ಕಡಿತ ಆರಂಭವಾಗುತ್ತದೆ. ಅತಿ ಹೆಚ್ಚು ಸಂಬಳ ಪಡೆಯುವವರಿಗಂತೂ ವರ್ಷವಿಡಿ ಇನ್‌ಕಂ ಟ್ಯಾಕ್ಸ್‌ ಡಿಡಕ್ಷನ್‌ ತಪ್ಪಿದ್ದಲ್ಲ.

ಇದಾದ ಬಳಿಕ ಇನ್‌ಕಂ ಟ್ಯಾಕ್ಸ್‌ ರಿಟರ್ನ್ಸ್‌ ಸಲ್ಲಿಸುವ ತವಕ. ಇದೆಲ್ಲದರ ನಡುವೆ ಆದಾಯ ತೆರಿಗೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯದೇ ಉಂಟಾಗುವ ಗೊಂದಲ. ಅರ್ಜಿ ತುಂಬುವಲ್ಲಿ ಏನಾದರೂ ತಪ್ಪಾದರೆ ಎಂಬ ಭಯ. ಇನ್‌ಕಂ ಟ್ಯಾಕ್ಸ್‌ ಆಫೀಸ್‌ಗೆ ಹೋಗಲು ಸಮಯವಿಲ್ಲ. ಹೆಚ್ಚುವರಿಯಾಗಿ ಪಾವತಿಸಿರುವ ಹಣ ವಾಪಸ್‌ ಪಡೆಯುವುದು ಹೇಗೆ? ಎಂಬಿತ್ಯಾದಿ ಸಮಸ್ಯೆಗಳಿಗೆ ಪರಿಹಾರ ಸಿಗದೆ ಪರಿತಪಿಸುವವರಿಗೆ ಹೆಚ್ಚಿನ ಮಾಹಿತಿ ತಿಳಿಸಲು ಈಗ ವೆಬ್‌ ಸೈಟ್‌ ಸಿದ್ಧವಾಗಿದೆ.

ಟಿಡಿಎಸ್‌ ಈಸ್‌ ನಾಟ್‌ ಟೀಡಿಯಸ್‌ ಎಂಬ ಹೆಸರಿನ ಈ ವೆಬ್‌ಸೈಟ್‌ನಲ್ಲಿ ಆದಾಯ ತೆರಿಗೆಯ ಬಗ್ಗೆ ಮಾಹಿತಿ ಲಭ್ಯ. ಇದರಲ್ಲಿ ಎಫ್‌ಕೆಕ್ಯು ಮಾದರಿ, ಸಿಬಿಡಿಟಿ ಸರ್ಕ್ಯುಲರ್‌, ನ್ಯಾಯಾಲಯದ ತೀರ್ಪುಗಳು, ಗುತ್ತಿಗೆದಾರರಿಗೆ ಹಣ ಪಾವತಿ ಇತ್ಯಾದಿ ವಿವರಗಳೂ ಇವೆ.

ಆದಾಯ ತೆರಿಗೆ ನಿಯಮಾವಳಿಗಳ ಬಗ್ಗೆಯೂ ಈ ಸೈಟ್‌ನಲ್ಲಿ ಮಾಹಿತಿ ಇದೆ. ಆದಾಯ ತೆರಿಗೆ ಇಲಾಖೆಯ ಉಪನಿರ್ದೇಶಕ ಸಂಜಯ್‌ ಕುಮಾರ್‌ ವರ್ಮಾ ಈ ವೆಬ್‌ಸೈಟ್‌ ರೂಪಿಸಿದ್ದಾರೆ. ಆದಾಯ ತೆರಿಗೆ ಇಲಾಖೆಯ ಆಯುಕ್ತ ಡಾ. ಮಂಜು ಮಾಧವನ್‌ ಅವರು ಈ ವೆಬ್‌ ಸೈಟ್‌ ಉದ್ಘಾಟಿಸಿದರು. ವೆಬ್‌ ಸೈಟ್‌ ಯು.ಆರ್‌.ಎಲ್‌ : http://www.tdsisnottedious.com

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X