ಸಾಲ್ವಡಾರ್‌ನಲ್ಲಿ ಭೂಕಂಪ:170 ಸಾವು, 1500 ಜನರಿಗೆ ಗಾಯ
ಸ್ಯಾನ್ ಸಾಲ್ವಡಾರ್ : ಎಲ್ ಸಾಲ್ವಡಾರ್‌ನಲ್ಲಿ ಮತ್ತೊಮ್ಮೆ ಮಂಗಳವಾರ ಸಂಭವಿಸಿದ ಭೀಕರ ಭೂಕಂಪ 170ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿದೆ. 1500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮನೆಗಳು ನೆಲಕಚ್ಚಿವೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.6 ಎಂದು ದಾಖಲಾಗಿದೆ.
ಒಂದು ತಿಂಗಳ ಹಿಂದೆ 7.6ರ ತೀವ್ರತೆಯಲ್ಲಿ ಸಂಭವಿಸಿದ್ದ ಭೂಕಂಪ 844 ಜನರನ್ನು ಬಲಿತೆಗೆದುಕೊಂಡು, ಸಾವಿರಾರು ಜನರನ್ನು ನಿರ್ವಸಿತರನ್ನಾಗಿ ಮಾಡಿತ್ತು. ಜನವರಿ 26ರಂದು ಸಾವಿರಾರು ಜನರನ್ನು ಬಲಿ ತೆಗೆದುಕೊಂಡ ಗುಜರಾತ್ ಭೂಕಂಪಕ್ಕೆ ವಿಶ್ವವೇ ಕಂಬನಿ ಮಿಡಿಯುತ್ತಿರುವಾಗ, ಮಧ್ಯ ಅಮೆರಿಕಾದ ಎಲ್ ಸಾಲ್ವಡಾರ್‌ನಲ್ಲಿ ಸಂಭವಿಸಿದ ಭೂಕಂಪ ಮತ್ತೆ ನೂರಾರು ಜನರನ್ನು ನುಂಗಿದೆ.
ಅಮೆರಿಕದ ಕಾಲಮಾನದ ರೀತ್ಯ ಬೆಳಗ್ಗೆ 8.22ರಲ್ಲಿ ಈ ಭೂಕಂಪ ಘಟಿಸಿದೆ. ವಸುಂಧರೆಯ ನಡುಕಕ್ಕೆ ಭಯಭೀತರಾದ ಜನತೆ ಮನೆಗಳಿಂದ ಬೀದಿಗೆ ಓಡಿ ಬಂದರು. ಈ ಸಮಯದಲ್ಲಿ ಸಾಲ್ವಡಾರ್‌ನ ಬಹುತೇಕ ಮಂದಿ ತಮ್ಮ ಕಚೇರಿಗೆ ತೆರಳುವ ತವಕದಲ್ಲಿದ್ದರು.
ಸ್ಯಾನ್ ಸಾಲ್ವಡಾರ್ ಸುತ್ತಮುತ್ತಲ ಮೂರು ಜಿಲ್ಲೆಗಳಲ್ಲಿ ಭೂಕಂಪದ ಹಾನಿ ತೀವ್ರ ಸ್ವರೂಪದಲ್ಲಿದೆ. ರಾಷ್ಟ್ರೀಯ ತುರ್ತು ಪರಿಹಾರ ಸಮಿತಿಯ ಹೇಳಿಕೆಯ ರೀತ್ಯ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 173ಕ್ಕೆ ಏರಿದ್ದು, 1,557 ಮಂದಿ ಗಾಯಗೊಂಡಿದ್ದಾರೆ. ರಾಜಧಾನಿ ಸ್ಯಾನ್ ಸಾಲ್ವಡಾರ್‌ಗೆ 60 ಕಿ.ಮೀಟರ್ ದೂರದ ಸ್ಯಾನ್ ವೈಸೆಂಟ್ ಪಟ್ಟಣದ ಬಹುತೇಕ ಮನೆಗಳು ನಾಶವಾಗಿವೆ. ಇಲ್ಲಿ 200ಕ್ಕೂ ಹೆಚ್ಚು ಮನೆಗಳು ನೆಲಕಚ್ಚಿವೆ. ಅವಶೇಷಗಳಡಿಯಲ್ಲಿ ನೂರಾರು ಮಂದಿ ಸಿಲುಕಿ ಪ್ರಾಣ ತೆತ್ತಿದ್ದಾರೆ. ಪರಿಹಾರ ಕಾಮಗಾರಿಗಳು ಸಮರೋಪಾದಿಯಲ್ಲಿ ಸಾಗಿವೆ.
ಹಾಂಡುರಾಸ್ ಮತ್ತು ಗುತೆಮಾಲಾಗಳಲ್ಲಿಯೂ ಕೂಡ ಭೂಕಂಪದಿಂದ ಹಾನಿ ಸಂಭವಿಸಿದೆ ಎಂದು ರೆಡ್‌ಕ್ರಾಸ್ ಸಂಸ್ಥೆ ತಿಳಿಸಿದೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಯ ಪ್ರಕಾರ ಭೂಕಂಪ ಸಂಭವಿಸಿದ ಒಂದು ಗಂಟೆಯ ತರುವಾಯ ಮತ್ತೆ ಭೂಮಿ ಕಂಪಿಸಿತು.
(ರಾಯಿಟರ್ಸ್)-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications