ನಿತ್ಯ ಭವಿಷ್ಯ
ಮೇಷ :ಕೊಡುವ ಕೆಂಪು ಗುಲಾಬಿಗೆ ನಕಾರಾತ್ಮಕ ಪ್ರತಿಕ್ರಿಯೆ. ನಿಮ್ಮ ಕಾಲ ಮೇಲೆ ನೀವು ನಿಂತುಕೊಳ್ಳೋದಕ್ಕೆ ಮೊದಲು ಒತ್ತು ಕೊಡಿ.
ವೃಷಭ :ಗೂಳಿ ಹಾಗೆ ನುಗ್ಗೋ ಭಂಡಧೈರ್ಯ ಈವತ್ತಿನ ಮಟ್ಟಿಗೆ ನಿಮಗೆ ಏನೇನೂ ತಂದುಕೊಡದು. ಬದಲಿಗೆ ಎಡವಿ ಬೀಳುವ ಸಾಧ್ಯತೆಗಳೇ ಹೆಚ್ಚು.
ಮಿಥುನ : ತುಮುಲ, ತಳಮಳ, ದ್ವಂದ್ವ. ಕೊಡಲೋ ಬೇಡವೋ, ಹೇಳಲೋ ಬೇಡವೋ? ದೇವರಿಗೆ ಭಾರ ಹಾಕಿ, ಚೀಟಿ ಎತ್ತಿ. ಅದೃಷ್ಟ ನಿಮ್ಮ ಕಡೆಗೇ ಇದೆ.
ಕಟಕ : ಜೀವದ ಹಂಗನ್ನು ಒತ್ತಟ್ಟಿಗಿರಿಸಿ ತೆಗೆದುಕೊಂಡ ರಿಸ್ಕೂ ಠುಸ್ಸು. ಇವತ್ತು ನೀವು ಹತ್ತು ಕಳಕೊಂಡಿರಬಹುದು. ನಾಳೆ ನಿಮ್ಮ ಇದೇ ಕೆಲಸ ನಿಮಗೆ ಸಹಸ್ರ ಹೊನ್ನು ತರಲಿದೆ.
ಸಿಂಹ : ಪಾಪಪ್ರಜ್ಞೆ ಕಾಡುತ್ತಿದೆ. ಉದ್ದೇಶಪೂರ್ವಕವಾಗಿ ತಪ್ಪು ಮಾಡದಿದ್ದರೂ ಪಶ್ಚಾತ್ತಾಪದ ಹಾದಿ ಹುಡುಕುತ್ತಿರುವ ನಿಮ್ಮ ಮನವನ್ನ ಮೆಚ್ಚಲೇ ಬೇಕು. ದೇವರ ಮೊರೆ ಹೋಗಿ.
ಕನ್ಯಾ : ಕಳೆದೊಂದು ವಾರದಿಂದ ಪಾರ್ಟಿಗಳಲ್ಲೇ ಕಳೆದು ಹೋಗಿರುವ ನಿಮಗಿಂದು ಬದಲಾವಣೆ. ಮನೆಯವರ ಮೋರೆಗಳನ್ನೇ ಸರಿಯಾಗಿ ನೋಡದಿದ್ದ ನೀವು ಆ ಕೊರತೆಯನ್ನು ಇವತ್ತು ನೀಗಿಸಿಕೊಳ್ಳಬಲ್ಲಿರಿ.
ತುಲಾ : ಜೀವನದಲ್ಲಿ ಹೊಸ ಗೆಳೆಯನ ಪ್ರವೇಶ. ಒಂದೇ ನೋಟದಲ್ಲಿ ಆತ ಹೃದಯ ಹೊಕ್ಕಿಬಿಡುವ. ನಿಮ್ಮ ಭಾಗ್ಯದ ಬಾಗಿಲೂ ಆತನೇ. ನಿಶ್ಟಿಂತೆಯಿಂದ ತೆರೆಯಿರಿ, ಬರಮಾಡಿಕೊಳ್ಳಿ.
ವೃಶ್ಚಿಕ : ಮನೆಯಲ್ಲೇ ಬಹು ದಿನಗಳಿಂದ ಮಾಡಿದ ಕಸರತ್ತು ಡಬ್ಬ ತುಂಬಿಸಿದೆ. ಅದಕ್ಕೆ ಸಾರ್ಥಕ್ಯ ತರುವ ದಿನವಿದು. ದಿನವಿಡೀ ಸುಂದರ.
ಧನಸ್ಸು :ಮನದಲ್ಲಿ ಕುದಿಯುತ್ತಿರುವ ಸಾಲುಗಳನ್ನು ಕವನವಾಗಿಸಲು ಹೇಳಿ ಮಾಡಿಸಿದ ದಿನ. ಯಾವುದಾದರೂ ದೊಡ್ಡ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುವ ಇರಾದೆಯಿದ್ದರೆ, ಈಗಲೇ ತೆಗೆದುಕೊಳ್ಳಿ.
ಮಕರ : ಹವಾಮಾನದ ಅನಿರೀಕ್ಷಿತ ಏರಿಳಿತದಷ್ಟೇ ನಿಮ್ಮ ಜೀವನದ ಲಬ್ಬು ಡಬ್ಬು ಕಂಡಾಪಟ್ಟೆ ತೂಗಾಟದಲ್ಲಿದೆ. ಬೇಗ ವೈದ್ಯರ ಆಸ್ಪತ್ರೆಯ ಕದ ತಟ್ಟಿ.
ಕುಂಭ : ಯಾರದೋ ಮೇಲಿನ ಕೋಪ ಮಕ್ಕಳ ಮೇಲೆ ತೀರಿಸೋದೆ ? ನೊಂದ ಎಳೆ ಜೀವಗಳನ್ನು ಪಾರ್ಕಿಗೆ ಕೊಂಡು, ಐಸ್ ಕ್ರೀಂ ಕೊಡಿಸಿ ತಣ್ಣಗೆ ಮಾಡಿ.
ಮೀನ : ಪ್ರೀತಿಯ ಅಭಿವ್ಯಕ್ತಿಗೆಂದೇ ಮಾಡಿರುವ ಈ ದಿನ ನಿಮ್ಮ ಅಭೀಷ್ಟೆಗಳೆಲ್ಲಾ ಈಡೇರಲಿವೆ. ಕೆಂಪು ಗುಲಾಬಿಗೆ ಸ್ವೀಕೃತಿ, ಕರೆದಲ್ಲಿಗೆ ಬರುವ ಮನಸ್ಸು, ಎಲ್ಲದಕ್ಕೂ ಒಂದು ಠರಾವು. ದಿ ಡೇ ಈಸ್ ಯುವರ್ಸ್.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications