ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರುವಾರದಿಂದ ಅಂದಗೆಟ್ಟ ಅಮಾನಿಕೆರೆ ಸುಂದರಗೊಳಿಸುವ ಸಮರ

By Staff
|
Google Oneindia Kannada News

ತುಮಕೂರು : ಅಂದಗೆಟ್ಟು ನಾರುತ್ತಿರುವ ನಗರದ ಅಮಾನಿಕೆರೆಯನ್ನು ಸ್ವಚ್ಛಗೊಳಿಸುವ ಕಾರ್ಯ ಗುರುವಾರದಿಂದ ಪ್ರಾರಂಭವಾಗಲಿದ್ದು , ಸ್ವಚ್ಛತಾ ಕಾರ್ಯಗಳಿಗಾಗಿ ಆರು ಸಮಿತಿಗಳನ್ನು ನೇಮಿಸಲಾಗಿದೆ ಎಂದು ನಗರಸಭೆ ಆಯುಕ್ತ ಬಾಲಕೃಷ್ಣ ತಿಳಿಸಿದ್ದಾರೆ.

ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಪ್ರತಿ ತಂಡವೂ 15 ರಿಂದ 20 ಸ್ವಯಂ ಸೇವಕರನ್ನು ಒಳಗೊಂಡಿದ್ದು, ಅವರು ಕೆರೆಯ ದಡದ ಮೇಲೆ ನಿಂತು ಕಾರ್ಯ ನಿರ್ವಹಿಸುವರು. ಕೆರೆಯಾಳಗೆ 50 ಮಂದಿ ನುರಿತ ಮೀನುಗಾರರು ಕಾರ್ಯ ನಿರ್ವಹಿಸಲಿದ್ದು , ಈ ಕಾರ್ಯಕ್ಕಾಗಿ 15 ತೆಪ್ಪಗಳನ್ನು ಬಳಸಲಾಗುತ್ತಿದೆ. ಕಸವನ್ನು ಸಾಗಿಸಲು 90 ಲಾರಿಗಳನ್ನು ಬಳಸಲಾಗುತ್ತದೆ ಎಂದು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಾಲಕೃಷ್ಣ ತಿಳಿಸಿದರು.

ಸಾಕ್ಷರಮಿತ್ರ ನೆಹರು ಯುವಕೇಂದ್ರ, ಆಟೋ ಚಾಲಕರ ಸಂಘ, ಎನ್‌ಎಸ್‌ಎಸ್‌ ಸದಸ್ಯರು, ನಗರಸಭೆ ಸಿಬ್ಬಂದಿ ಹಾಗೂ ವಿವಿಧ ಸ್ವಯಂ ಸೇವಾ ಸಂಘಟನೆಗಳ ಸದಸ್ಯರು ಸೇರಿದಂತೆ ಸುಮಾರು 750 ಕಾರ್ಯಕರ್ತರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗುವರು.

ಸ್ವಚ್ಛತಾ ಕೆಲಸದಲ್ಲಿ ಭಾಗಿಯಾಗುವ ಪ್ರತಿಯಾಬ್ಬ ಕಾರ್ಯಕರ್ತನಿಗೂ ಗುರುತಿನ ಚೀಟಿ ನೀಡಲಾಗುವುದು. ಉಚಿತ ಮಧ್ಯಾಹ್ನದ ಊಟದ ವ್ಯವಸ್ಥೆ ಹಾಗೂ ಕುಡಿಯಲು ಮಿನರಲ್‌ ವಾಟರ್‌ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಸ್ವಚ್ಛತಾ ಕಾರ್ಯದಲ್ಲಿ ತೊಡಗುವವರಿಗೆ ಮೂರು ದಿನಗಳ ಕಾಲ ತುರ್ತು ಚಿಕಿತ್ಸೆಗಾಗಿ ಆರೋಗ್ಯ ಘಟಕವನ್ನೂ ತೆರೆಯಲಾಗಿದೆ ಎಂದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X