Get Updates
Get notified of breaking news, exclusive insights, and must-see stories!

ಭೂಕಂಪ ಆದಾಗ ಏನು ಮಾಡಬೇಕು? ಯಾರನ್ನು ಸಂಪರ್ಕಿಸಬೇಕು...

ಬೆಂಗಳೂರು : ಭೂದೇವಿ ಆದೇಕೋ ಇತ್ತೀಚೆಗೆ ತನ್ನ ಮಕ್ಕಳ ಮೇಲೆ ಮುನಿದಿದ್ದಾಳೆ. ಗುಜರಾತ್‌ ಭೂಕಂಪದ ತರುವಾಯ ಕೇಳುತ್ತಿರುವುದೆಲ್ಲಾ ಭೂಕಂಪನದ ಸುದ್ದಿಗಳೇ, ಮಂಗಳವಾರ ಅಮೆರಿಕದ ಎಲ್‌ ಸಾಲ್ವಡಾರ್‌ನಲ್ಲಿ ಭೀಕರ ಭೂಕಂಪ ಸಂಭವಿಸಿದೆ. ನೂರಾರು ಜನರು ಸತ್ತಿದ್ದಾರೆ. ಕೇರಳ ಹಾಗೂ ಸುತ್ತ ಮುತ್ತ ಕೂಡ ಮಂಗಳವಾರವೇ ಭೂಮಿ ಕಂಪಿಸಿದೆ.

ಬೆಂಗಳೂರಿನಲ್ಲೂ ಕಳೆದ ತಿಂಗಳು ಕೆಲಕಾಲ ಭೂಮಿ ನಡುಗಿತ್ತು. ಗುಜರಾತ್‌ನ ಭೀಕರ, ಭಯಾನಕ ಭೂಕಂಪದ ಬಳಿಕ ಕರ್ನಾಟಕ ರಾಜ್ಯ ಸರಕಾರ ಎಚ್ಚೆತ್ತಿದೆ. ಭೂಕಂಪ ಸಂಭವಿಸಿದಾಗ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚಿಂತಿಸಿದೆ. ಭೂಕಂಪದ ಸಂದರ್ಭದಲ್ಲಿ ಪರಿಹಾರ ಕೈಗೊಳ್ಳಲು ಸಮಿತಿಯಾಂದನ್ನೂ ರಚಿಸಿದೆ. ಹಲವು ಕಾರ್ಯತಂತ್ರಗಳನ್ನೂ ರೂಪಿಸಿದೆ. ಈ ಎಲ್ಲದರ ಬಗ್ಗೆ ಜನತೆಗೆ ತಿಳಿಸಲು ಬುಧವಾರ ವೆಬ್‌ಸೈಟನ್ನು ಸಹ ಆರಂಭಿಸಲಾಗಿದೆ.

ಭೂಕಂಪ ಸಂಭವಿಸಿದಾಗ ತುರ್ತು ಸೇವೆ ಪಡೆಯಲು ಸಂಪರ್ಕಿಸಬೇಕಾದ ವಿಳಾಸ, ಅನುಸರಿಸಬೇಕಾದ ಕಾರ್ಯತಂತ್ರ ಮತ್ತಿತರೆ ವಿವರಗಳು ಈ ವೆಬ್‌ಸೈಟ್‌ನಲ್ಲಿ ಲಭ್ಯ. ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಬೆಳಗ್ಗೆ ಮುಖ್ಯಮಂತ್ರಿ ಈ ವೆಬ್‌ಸೈಟ್‌ ಕಾರ್ಯಾರಂಭಗೊಳಿಸಿದರು.

ಜನ ಜಾಗೃತಿ : ಭೂಕಂಪ ಸಂಭವಿಸಿದಾಗ ಅನಗತ್ಯವಾಗಿ ಆತಂಕ, ಭೀತಿಗೆ ಒಳಗಾಗದೆ ಹೇಗೆ ನಡೆದುಕೊಳ್ಳಬೇಕು, ತುರ್ತು ನೆರವಿಗೆ ಯಾವ ಜಿಲ್ಲೆಯಲ್ಲಿ ಯಾರನ್ನು ಸಂಪರ್ಕಿಸಬೇಕು ಎಂಬಿತ್ಯಾದಿ ವಿವರಗಳು ಈ ಸೈಟಿನಲ್ಲಿವೆ. ಸದ್ಯಕ್ಕೆ ಕೆಲವು ಜಿಲ್ಲೆಗಳಲ್ಲಿ ಭೂಕಂಪ ಅಥವಾ ಇನ್ನಿತರ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಂಪರ್ಕಿಸಬೇಕಾದ ಅಧಿಕಾರಿಗಳ ವಿವರ ಇದ್ದು, ಮಾರ್ಚ್‌ ಅಂತ್ಯದೊಳಗೆ ಸಮಗ್ರ ಕರ್ನಾಟಕದ ಮಾಹಿತಿ ಈ ವೆಬ್‌ಸೈಟ್‌ನಲ್ಲಿ ದೊರೆಯಲಿದೆ. ವೆಬ್‌ಸೈಟ್‌ಯು.ಆರ್‌.ಎಲ್‌ : http://www.karnatakadisaster.com

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+