ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೈಂಗಿಕ ಕಾರ್ಯಕರ್ತರು ಭಿಕ್ಷುಕರೇ ? ಜನಗಣತಿ ಹೌದೆನ್ನುತ್ತಿದೆ

By Staff
|
Google Oneindia Kannada News

ನವದೆಹಲಿ : ಜನಗಣತಿಯಲ್ಲಿ ಭಿಕ್ಷುಕರ ಪಟ್ಟಿಗೆ ತಮ್ಮನ್ನು ಸೇರಿಸಕೂಡದೆಂದು ಲೈಂಗಿಕ ಕಾರ್ಯಕರ್ತರು (ಸೆಕ್ಷುಯಲ್‌ ವರ್ಕರ್ಸ್‌) ಒತ್ತಡ ತಂದು, ಅದನ್ನು ಸಾಧಿಸಲು ಕೋರ್ಟಿನ ಕಟಕಟೆ ಹತ್ತಿ, ಮುಂದೆ ಹಾಗಾಗದು ಎಂದು ಜನಗಣತಿಯ ಮುಖ್ಯ ನೋಂದಣಾಧಿಕಾರಿಯಿಂದ ಆಶ್ವಾಸನೆ ಪಡೆದಿದ್ದರು. ಹೀಗಿದ್ದೂ ವೈಶ್ಯಾವೃತ್ತಿಯಲ್ಲಿ ತೊಡಗಿರುವವರನ್ನು ಮತ್ತೆ ಭಿಕ್ಷುಕರ ಪಟ್ಟಿಗೇ ಸೇರಿಸಲಾಗುತ್ತಿದೆ.

ಲೈಂಗಿಕ ಕಾರ್ಯಕರ್ತರು ತಾವು ಭಿಕ್ಷುಕರಲ್ಲ. ಬದಲಾಗಿ ಭಿಕ್ಷುಕರಿಗೆ ಅನ್ನ- ಬಟ್ಟೆ ಕೊಡುವಷ್ಟು ಚೈತನ್ಯ ಹೊಂದಿದ್ದೇವೆ. ಆ ಕಾರಣ ತಮ್ಮನ್ನು ಭಿಕ್ಷುಕರ ಪಟ್ಟಿಗೆ ಸೇರಿಸಕೂಡದು ಎಂದು ನ್ಯಾಯ ಕೋರಿ ಕೇಂದ್ರ ಗೃಹ ಸಚಿವ ಎಲ್‌.ಕೆ.ಅಡ್ವಾಣಿ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ‘ಭಾರತೀಯ ಪತಿತ ಉದ್ಧಾರ ಸಭಾ’ ಎಂಬ ಸರ್ಕಾರೇತರ ಸಂಸ್ಥೆಯ ಅಧ್ಯಕ್ಷ ಕೀರ್ತಿ ಲಾಲ್‌ ಭೋಲಾ ಎಂಬುವರು ಲೈಂಗಿಕ ಕಾರ್ಯಕರ್ತರ ಪರವಾಗಿ ಈ ಫಿರ್ಯಾದು ಅರ್ಜಿ ಸಲ್ಲಿಸಿದ್ದರು. ಲೈಂಗಿಕ ಕಾರ್ಯಕರ್ತರ ನಿಯೋಗವೊಂದು ಕಳೆದ ಜನವರಿ 25ರಂದು ಜನಗಣತಿಯ ಮುಖ್ಯ ನೋಂದಣಾಧಿಕಾರಿ ಜೆ.ಕೆ.ಬಾಂಟಿಯಾ ಅವರನ್ನೂ ಭೇಟಿಯಾಗಿತ್ತು.

ವೇಶ್ಯಾವೃತ್ತಿ ಕಾನೂನು ಬದ್ಧವಾಗಿಲ್ಲದ್ದರಿಂದ ಲೈಂಗಿಕ ಕಾರ್ಯಕರ್ತರ ಬೇಡಿಕೆಗೆ ಮರುತ್ತರ ಕೊಡಲು ಬಾಂಟಿಯಾ ಮೊದಲು ಹಿಂದೂಮುಂದು ನೋಡಿದರು. ನಂತರ ಅವರನ್ನು ವೃತ್ತಿ ಪಟ್ಟಿಯಲ್ಲಿ ಲೈಂಗಿಕ ಕಾರ್ಯಕರ್ತರೆಂದು ನಮೂದಿಸಿ, ಉದ್ಯೋಗ ಪಟ್ಟಿಯಲ್ಲಿ ಸ್ವ- ಉದ್ಯೋಗ ಎಂದು ದಾಖಲಿಸುವುದಾಗಿ ಭರವಸೆ ಕೊಟ್ಟರು.

ಲೈಂಗಿಕ ಕಾರ್ಯವನ್ನು ಸರ್ಕಾರ ಕಾನೂನು ಬದ್ಧವಾಗಿಸದಿದ್ದರೂ ‘ಪೀಟ’ ಹಾಗೂ ‘ಸೀಟ’ ಅನ್ವಯ ಕೆಲವೊಂದು ನಿಯಮಗಳನ್ನು ಅದು ರೂಪಿಸಿದೆ. ಅಪ್ರಾಪ್ತ ಹೆಣ್ಣು ಮಕ್ಕಳು ಲೈಂಗಿಕ ವೃತ್ತಿಯಲ್ಲಿ ತೊಡಗಿಕೊಳ್ಳುವುದನ್ನು ಅದು ವಿರೋಧಿಸುತ್ತದೆ. ಇಷ್ಟೇ ಅಲ್ಲದೆ ಲೈಂಗಿಕ ಕಾರ್ಯಕರ್ತರ ಹಿತಾಸಕ್ತಿಗಳಿಗೂ ಸರ್ಕಾರ ಕೆಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಹೀಗಾಗಿ ತಾವು ಭಿಕ್ಷುಕರಿಗಿಂತ ಮೇಲ್ಮಟ್ಟದಲ್ಲಿ ಇಲ್ಲವೇ ಎಂಬುದು ಲೈಂಗಿಕ ಕಾರ್ಯಕರ್ತರ ಪ್ರಶ್ನೆ.

ಒತ್ತಾಯದ ದನಿ ಹತ್ತಿಕ್ಕಲಷ್ಟೇ ಕೊಡುವ ಹುಸಿ ಭರವಸೆಗಳಿಂದ ಏನೆಲ್ಲಾ ಅವಾಂತರಗಳು ಸಂಭವಿಸಬಹುದು ಎಂಬುದಕ್ಕೆ ಇದೊಂದು ಉದಾಹರಣೆ. ಜನಗಣತಿ ಯಶಸ್ವಿಯಾಗಬೇಕಿದ್ದಲ್ಲಿ, ಇಂಥ ಕೆಲವು ಗೊಂದಲಗಳ ನಿವಾರಣೆಗೂ ಸರ್ಕಾರ ಒತ್ತು ಕೊಡಬೇಕಾದುದು ಅಗತ್ಯ.

(ಯುಎನ್‌ಐ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X