Get Updates
Get notified of breaking news, exclusive insights, and must-see stories!

ಗುರುವಾರದೊಳಗೆ ಭೀಮಾ ನದಿಗೆ ನೀರು ಬರಲಿದೆ : ಕೃಷ್ಣ

ಬೆಂಗಳೂರು : ಬತ್ತಿ ಹೋಗಿರುವ ಭೀಮಾ ನದಿಗೆ ಫೆ.15ರ ಗುರುವಾರದೊಳಗೆ ಮಹಾರಾಷ್ಟ್ರದಿಂದ ನೀರು ಬರಲಿದೆ ಎಂದು ಮುಖ್ಯಮಂತ್ರಿ ಕೃಷ್ಣ ಬುಧವಾರ ಇಲ್ಲಿ ತಿಳಿಸಿದ್ದಾರೆ.

ಮಹಾರಾಷ್ಟ್ರ ಸರಕಾರ ಈಗಾಗಲೇ ಒಂದೂವರೆ ಟಿ.ಎಂ.ಸಿ. ನೀರು ಬಿಡುಗಡೆ ಮಾಡಿದ್ದು, ಅದು ಮಂದಗತಿಯಲ್ಲಿ ರಾಜ್ಯದತ್ತ ಹರಿದು ಬರುತ್ತಿದೆ. ಮಹಾರಾಷ್ಟ್ರ ನೀರು ಸಂಗ್ರಹಿಸಿದ್ದು, ಅದರ ವಿರುದ್ಧ ಸಮರ ಸಾರುವುದು ಸರಿಯಲ್ಲ ಎಂದೂ ಅವರು ಹೇಳಿದ್ದಾರೆ.

ನೀರಿಗಾಗಿ ಚಳವಳಿಯಲ್ಲಿ ತೊಡಗಿರುವವರ ಜತೆ ಬಿಜಾಪುರ ಜಿಲ್ಲಾ ಉಸ್ತುವಾರಿ ನೋಡಿಕೊಳ್ಳುತ್ತಿರುವ ರಾಜ್ಯದ ಸಚಿವ ಕಾಶಪ್ಪನವರ್‌ ಮಾತುಕತೆ ನಡೆಸುತ್ತಿದ್ದಾರೆ. ಗುರುವಾರದೊಳಗೆ ಚಳವಳಿ ಹೂಡಿರುವವರ ಬಳಿಗೇ ನೀರು ಬರಲಿದೆ. ಬಿಜಾಪುರ ಪ್ರದೇಶದಲ್ಲಿ ಕಾಶಪ್ಪನವರು ಸಂಚರಿಸುತ್ತಿದ್ದು, ಪರಿಸ್ಥಿತಿಯನ್ನು ತಿಳಿಗೊಳಿಸುವ ಯತ್ನದಲ್ಲಿದ್ದಾರೆ ಎಂದೂ ಅವರು ಹೇಳಿದರು.

ಈ ಮಧ್ಯೆ ನೀರು ಬಿಡುವವರೆಗೆ ಅನ್ನ ಮುಟ್ಟೆವು ಎಂದು ಕುಡಿಯುವ ನೀರಿಗಾಗಿ ಆಮರಣಾಂತ ನಿರಶನ ನಡೆಸುತ್ತಿರುವ ಭೀಮಾ ನದಿ ನೀರು ರಕ್ಷಣಾ ಸಮಿತಿಯ (ಬಿಆರ್‌ಡಬ್ಲ್ಯೂಪಿಸಿ) ಸದಸ್ಯರು ಪಟ್ಟು ಹಿಡಿದು ಚಳವಳಿಯ ಮಾರ್ಗ ತುಳಿದಿದ್ದಾರೆ. ಬತ್ತಿ ಹೋಗಿರುವ ಭೀಮೆಗೆ ನೀರು ಬಿಡುವಂತೆ ಆಗ್ರಹಿಸಿ, ರಸ್ತೆ ತಡೆ, ಮೆರವಣಿಗೆ ಪ್ರದರ್ಶನ ಹಾಗೂ ಸರದಿ ಉಪವಾಸ ಮುಷ್ಕರವನ್ನು ನಡೆಸಲಾಗುತ್ತಿದೆ.

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+