Get Updates
Get notified of breaking news, exclusive insights, and must-see stories!

ಶಿವರಾತ್ರಿಗೆ ಮೊದಲೇ ಏರುತ್ತಿದೆ ಬಿಸಿಲು

ಬೆಂಗಳೂರು : ರಾಜ್ಯದಲ್ಲಿ ಒಣಹವೆಯಲ್ಲದೆ ಮತ್ತೇನೂ ವಿಶೇಷವಿಲ್ಲ. ಬಿಸಿಲಂತೂ ಶಿವರಾತ್ರಿಗೆ ಮೊದಲೇ ಕೊಂಚ ಕೊಂಚವಾಗಿ ಏರುತ್ತಿದೆ. ರಥಸಪ್ತಮಿಯ ನಂತರ ಸೂರ್ಯನಂತೂ ಬಲು ಬಿರುಸಿನಿಂದ ಸಾಗುತ್ತಿದ್ದಾನೆ. ಮಾತೊಂದಿದೆ: ಚಳಿ ಸಂಕ್ರಾಂತಿಯ ಹೊತ್ತಿಗೆ ಶಂಖದಷ್ಟು ಕಡಿಮೆ ಆದರೆ, ಶಿವರಾತ್ರಿಗೆ ಶಿವಶಿವಾ ಎಂದು ಓಡುತ್ತದೆ ಎಂದು.

ಆದರೆ, ಈ ಬಾರಿ ಶಿವರಾತ್ರಿಗೆ 15 ದಿನ ವಿರುವಾಗಲೇ ಚಳಿ ಹೇಳ ಹೆಸರಿಲ್ಲದಂತೆ ಪಲಾಯನ ಮಾಡಿದೆ. ಬೆಂಗಳೂರೂ ಸೇರಿದಂತೆ ರಾಜ್ಯದ ಬಹುತೇಕ ಎಲ್ಲೆಡೆ ಚಳಿಯ ನಡುಕವಿಲ್ಲ. ಸೆಕೆಯ ಬೆವರು ಹರಿಯುತ್ತಿದೆ. ಅಂದಹಾಗೆ ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ ಒಣಹವೆ ಇತ್ತು.

ಉತ್ತರ ಒಳನಾಡಿನ ಕೆಲವೆಡೆ ಕನಿಷ್ಠ ತಾಪಮಾನ ಇಳಿದಿತ್ತು ಎನ್ನುವುದನ್ನು ಬಿಟ್ಟರೆ ಉಳಿದಂತೆ ಸಾಮಾನ್ಯವಾಗಿತ್ತು. ಕರಾವಳಿ ಕರ್ನಾಟಕದಲ್ಲಿ ಕನಿಷ್ಠ ತಾಪಮಾನದಲ್ಲಿ ಏರಿಕೆ ಆಗಿದೆ. ರಾಜ್ಯದ ಅತಿ ಕನಿಷ್ಠ ತಾಪಮಾನ 12.8 ಡಿಗ್ರಿ ಸೆಲ್ಸಿಯಸ್‌ ಬೆಳಗಾವಿ ವಿಮಾನ ನಿಲ್ದಾಣದಲ್ಲಿತ್ತು. ಮುನ್ಸೂಚನೆಯಂತೆ ರಾಜ್ಯದಲ್ಲಿ ಒಣಹವೆಯೇ ಮುಂದುವರಿಯಲಿದೆ.

ರಾಜ್ಯದ ಹವಾಮಾನದಲ್ಲಿ ಮುಂದಿನ 48 ಗಂಟೆಗಳ ಅವಧಿಯಲ್ಲಿ ಹೆಚ್ಚಿನ ಬದಲಾವಣೆಗಳೇನೂ ಕಂಡು ಬರುವುದಿಲ್ಲ ಎನ್ನುತ್ತದೆ ಹವಾಮಾನ ವೀಕ್ಷಣಾಲಯದ ವರದಿ. ಸ್ಥಳೀಯ ಹವಾಮಾನ ಮುನ್ಸೂಚನೆ ಪ್ರಕಾರ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ನಿರ್ಮಲ ಆಗಸವಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಆಸುಪಾಸಿನಲ್ಲಿರುವ ಸೂಚನೆಗಳಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+