ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ಅಕಸ್ಮಿಕ ಧನಲಾಭವಿದೆ. ಇವತ್ತು ಹಮ್ಮಿಕೊಳ್ಳುವ ಕೆಲಸ ಈ ತಿಂಗಳು ಪೂರ್ತಿ ನಿಮ್ಮನ್ನು ವ್ಯಸ್ತರನ್ನಾಗಿ ಇಡಲಿದೆ. ವಿಪರೀತ ಕೆಲಸದಿಂದ ಮನಸ್ಸು ಸುಸ್ತಾಗದಂತೆ ನೋಡಿಕೊಳ್ಳಿ. ಹೊಸ ಅವಕಾಶಗಳಿಂದ ವಂಚಿತರಾಗಬಾರದಲ್ಲವೇ ?ವೃಷಭ :ವ್ಯಾಪಾರದಲ್ಲಿ ಇವತ್ತು ಎಲ್ಲ ಕಡೆಯೂ ಪಾಸಿಟಿವ್ ರಿಯಾಕ್ಷನ್. ಆದರೆ ಸಂಗಾತಿಯಾಂದಿಗೆ ಮಾತ್ರ ಪುಟ್ಟ ಜಗಳವಾಡುತ್ತೀರಿ. ಮೂಡ್ ಔಟ್ ಅಂತ ಕೆಲಸಗಳನ್ನೆಲ್ಲಾ ಬದಿಗೊತ್ತಿ ಇಡಬೇಡಿ.
ಮಿಥುನ : ಪ್ರಯಾಣ ಯೋಗವಿದೆ. ಆರೋಗ್ಯದ ಕಡೆ ಮತ್ತೊಮ್ಮೆ ಎಚ್ಚರವಹಿಸಬೇಕಾಗುತ್ತದೆ. ತುಂಬಾ ದಿನಗಳ ನಂತರ ಸ್ನೇಹಿತರನ್ನು ಭೇಟಿಯಾಗುತ್ತಿರುವುದರಿಂದ ಖುಷಿಯಾಗಿರುತ್ತೀರಿ. ಎಂದಿನಂತೆ ಜಗಳ ಕಾದೀರಾ ಜೋಕೆ.
ಕಟಕ : ಧನಲಾಭ ನಿರೀಕ್ಷಿತವಾದರೂ ದಿನವಿಡೀ ಉಲ್ಲಾಸವಾಗಿರುತ್ತೀರಿ. ಓದು ಬರಹದಲ್ಲಿ ಹಿಂದೆ ಉಳಿಯುತ್ತೇನೆ ಎಂಬ ಭಯವಿದ್ದರೂ, ನಿಮ್ಮ ಶ್ರಮ ನಿಮ್ಮ ಮುಂದೆ ನಡೆಸುತ್ತದೆ.
ಸಿಂಹ : ಶತ್ರು ನಾಶ. ಯಾರ ಮೇಲೆಯೂ ಸೇಡು ತೀರಿಸಿಕೊಳ್ಳಬೇಕು ಎಂಬ ಹಠ ಬೇಡ. ಮನೆಯಲ್ಲಿನ ಅಶಾಂತಿಯಿಂದ ದೈನಂದಿನ ಕೆಲಸಗಳಿಗೆ ಧಕ್ಕೆ ತಂದುಕೊಳ್ಳುತ್ತೀರಿ. ಸಹನೆ ನಿಮ್ಮನ್ನು ಬಚಾವ್ ಮಾಡಬಲ್ಲುದು.
ಕನ್ಯಾ : ಕೊಟ್ಟ ಮಾತು ಉಳಿಸಿಕೊಳ್ಳಲು ಹೆಣಗುತ್ತೀರಿ. ನಿಮ್ಮ ಪ್ರಾಮಾಣಿಕತೆಯಿಂದಾಗಿ ಸ್ನೇಹಿತರು ನಿಮ್ಮನ್ನು ಹಚ್ಚಿಕೊಳ್ಳಲಾರಂಭಿಸುತ್ತಾರೆ. ಅವರ ಪ್ರೀತಿಯ ಬಗ್ಗೆ ಸಂಶಯ ಬೇಡ. ಪ್ರಯಾಣ ಹೊರಡುವ ದಿನ ಇನ್ನೂ ದೂರವಿದೆ.
ತುಲಾ : ಮನೆಯಲ್ಲಿ ಶುಭ ಕಾರ್ಯ. ತಾಂತ್ರಿಕ ಕ್ಷೇತ್ರದಲ್ಲಿ ದುಡಿಯುತ್ತಿರುವವರಿಗೆ ಅನುಕೂಲಕರ ವಾತಾವರಣ. ಇವತ್ತೇನಾದರೂ ಇಂಟರ್‌ವ್ಯೂಗಳಿದ್ದರೆ, ಖಂಡಿತಾ ತಪ್ಪಿಸಿಕೊಳ್ಳಬೇಡಿ. ಜಯ ನಿಮ್ಮ ಪಾಲಿಗಿರುತ್ತದೆ.
ವೃಶ್ಚಿಕ : ಪ್ರಯಾಣದ ಗುಂಗು. ಸ್ನೇಹಿತರ ಭೇಟಿ. ರಾಶಿ ಬಿದ್ದಿರುವ ಕೆಲಸ, ಜವಾಬ್ದಾರಿಗಳು. ಇವತ್ತು ನೀವೇ ಬಿಜಿ ಪರ್ಸನ್.
ಧನಸ್ಸು :ಶತ್ರುಗಳ ಕಾಟ ನಿಮ್ಮ ನೆಮ್ಮದಿಯನ್ನು ಕೆಡಿಸುತ್ತದೆ. ಆದರೆ ನೀವು ನೇರ ದಾರಿಯನ್ನೇ ಆಯ್ದುಕೊಂಡಲ್ಲಿ ಗೆಲುವು ನಿಮ್ಮ ಬಳಿಯೇ ಇರುತ್ತದೆ. ವ್ಯಾಪಾರ ವ್ಯವಹಾರಗಳಿಗೆ ಇದು ಸುದಿನ.
ಮಕರ : ಆಫೀಸಿನಲ್ಲಿ ಕೆಲಸ ರಾಶಿ ಬಿದ್ದಿರುವುದನ್ನು ನೆನೆಸಿಕೊಂಡೇ ಸುಸ್ತಾಗುತ್ತೀರಿ. ಪ್ರಯತ್ನದಿಂದ ಕಾರ್ಯಜಯ. ಲಾಟರಿ ಕೊಂಡುಕೊಳ್ಳಬೇಕೆಂದಿದ್ದರೆ ಇವತ್ತೇ ಕೊಳ್ಳಿ.
ಕುಂಭ : ಬ್ಯಾಂಕ್ ವ್ಯವಾಹರಗಳು ಇವತ್ತು ಸುಲಭವಾಗಿ ನೆರವೇರುತ್ತದೆ. ನಿಮ್ಮ ಓಡಾಡಟದಿಂದ ಮನೆ ಮಂದಿಯನ್ನೆಲ್ಲಾ ಆತಂಕಕ್ಕೀಡು ಮಾಡುತ್ತೀರಿ. ಸಿಡುಕಿದರೆ ವಾತಾವರಣವೆಲ್ಲಾ ಕಲಕಿ ಹೋಗುತ್ತದೆ ಅಲ್ವೇ ?
ಮೀನ : ಮನೆ ಮಂದಿಯ ಪ್ರೀತಿಯನ್ನೆಲ್ಲಾ ದೋಚಿಕೊಂಡು ಆರಾಮವಾಗಿದ್ದೀರಿ. ಆಫೀಸಿನಲ್ಲಿನ ಕೆಲಸಗಳೆಲ್ಲಾ ನಿಮ್ಮನ್ನು ಕಾಯುತ್ತಿವೆ. ಆರೋಗ್ಯ ಜೋಪಾನ .
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications