ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಿಂದ ಫ್ಯಾಷನ್‌ ಟಿವಿ ಚಾನೆಲ್‌ ಎತ್ತಂಗಡಿಗೆ ಕೇಂದ್ರ ಅಸ್ತು

By Staff
|
Google Oneindia Kannada News

ನವದೆಹಲಿ : ಅಶ್ಲೀಲ ದೃಶ್ಯಗಳನ್ನು ಪ್ರದರ್ಶಿಸುತ್ತಿರುವ ಫ್ಯಾಷನ್‌ ಟಿವಿ ಚಾನಲ್ಲನ್ನು ಭಾರತದಲ್ಲಿ ನಿಷೇಧಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ಕೇಂದ್ರ ವಾರ್ತಾ ಹಾಗೂ ಪ್ರಸಾರ ಖಾತೆಯ ರಾಜ್ಯ ಸಚಿವ ರಮೇಶ್‌ ಬೈಸ್‌ ಮಂಗಳವಾರ ತಿಳಿಸಿದ್ದಾರೆ.

ಸದ್ಯದಲ್ಲೇ ಭಾರತದ ಎಲ್ಲಾ ಟಿವಿ ಸೆಟ್‌ಗಳೂ ಈ ಚಾನೆಲ್‌ನಿಂದ ಮುಕ್ತವಾಗಲಿವೆ. ಈ ನಿಟ್ಟಿನಲ್ಲಿ ಈಗಾಗಲೇ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದರು. ತಂಬಾಕು ಉತ್ಪನ್ನಗಳ ಜಾಹೀರಾತು ಹಾಗೂ ಅಶ್ಲೀಲತೆ ಬಿಂಬಿಸುವ ಕಾರ್ಯಕ್ರಮಗಳನ್ನು ಸರ್ಕಾರ ನಿಷೇಧಿಸಿದೆ. ಭಾರತದ ಸಂಸ್ಕೃತಿಗೆ ಧಕ್ಕೆ ತರುವಂಥ ಯಾವುದೇ ಕಾರ್ಯಕ್ರಮದ ಪ್ರಸಾರವೂ ಅಸಹ್ಯ ಹಾಗೂ ಪ್ರಸಾರಕ್ಕೆ ಅಯೋಗ್ಯ ಎಂದ ಬೈಸ್‌ ಇತ್ತೀಚೆಗೆ ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಜಾಹೀರಾತೊಂದನ್ನು ನಿಷೇಧಿಸಿದ್ದನ್ನು ಉದಾಹರಿಸಿದರು.

ರಾಯಪುರದಲ್ಲಿ ಎಫ್‌ಎಂ ರೇಡಿಯೋ ಕೇಂದ್ರವನ್ನು ಸ್ಥಾಪಿಸಲು ಸದ್ಯದಲ್ಲೇ ಟೆಂಡರ್‌ ಕರೆಯಲಾಗುವುದು. 10 ವರ್ಷಗಳ ಹಿಂದೆ ಇದೇ ಕಾರಣಕ್ಕೆ ಕರೆಯಲಾಗಿದ್ದ ಟೆಂಡರ್‌ಗೆ ಯಾವ ಪ್ರತಿಕ್ರಿಯೆಯೂ ಬಾರದಿದ್ದ ಕಾರಣ ಎಫ್‌ಎಂ ರೇಡಿಯೋ ಕೇಂದ್ರ ಸ್ಥಾಪನೆಯ ನಿರ್ಧಾರವನ್ನು ಕೈಬಿಡಲಾಗಿತ್ತು. ಈಗ ಮತ್ತೆ ಆ ಯೋಚನೆಗೆ ಚಾಲನೆ ದೊರೆಯಲಿದೆ. ಗೀತಾ ಕೃಷ್ಣನ್‌ ಸಮಿತಿಯ ಶಿಫಾರಸ್ಸುಗಳನ್ನಾಧರಿಸಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದಲ್ಲೂ ಗುರುತರ ಬದಲಾವಣೆಗಳನ್ನು ಜಾರಿಗೆ ತರಲಾಗುವುದು ಎಂದು ಸಚಿವರು ತಿಳಿಸಿದರು.

(ಪಿಟಿಐ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X