ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಎಲ್ಲಿಗೋ ಪ್ರಯಾಣ ಹೋಗಬೇಕು ಎಂದುಕೊಂಡವರು ನಿಮ್ಮ ದಿಕ್ಕು ಬದಲಿಸಿ ಬೇರೆಡೆಗೆ ಹೊರಟಿದ್ದೀರಿ. ಹಾಗೆಂದುಕೊಂಡು ಕೊರಗಬೇಡಿ. ಯಾವುದೇ ಕೆಡುಕಿಲ್ಲ. ನಿಮ್ಮ ಬಳಿಗೆ ಬರಬೇಕಿರುವ ಕೀರ್ತಿ ನಿಮ್ಮ ಬಿಟ್ಟು ಎತ್ತಲೂ ಹೋಗುವುದಿಲ್ಲ.ವೃಷಭ : ಮತ್ತೆ ಸಿಡುಕು, ಸಿಟ್ಟು ನಿಮ್ಮನ್ನು ಕೆಡಿಸಿಬಿಡುತ್ತದೆ. ಜಗಳ ಮಾಡಿದರೆ, ರಾಜಿಯಾಗುವ ಸಲುವಾಗಿ ಇವತ್ತು ಸಂಜೆ ಪಾರ್ಕು, ಸಿನೆಮಾ ಅಂತ ಸುತ್ತಾಡಲಾಗದು ಅಲ್ಲವೇ ? ಆದ್ದರಿಂದ ಕಷ್ಟಪಟ್ಟು ಇವತ್ತು ಕೂಲ್ ಆಗಿರಿ.
ಮಿಥುನ : ಕತ್ತೆ ದುಡಿತ. ಸಹೋದ್ಯೋಗಿಗಳಿಂದ ಕಿರುಕುಳ ಎದುರಾದರೆ ಸಹಿಸಿಕೊಳ್ಳಬೇಕಷ್ಟೆ. ಸ್ನೇಹಿತರ ಅಗಲಿಕೆಯಿಂದ ಬೇಸರ ಮಾಡಿಕೊಂಡರೆ ಹೇಗೆ? ಮಾಡಿದ ಕೆಲಸವನ್ನೇ ಮತ್ತೆ ಮತ್ತೆ ಮಾಡಿ ಸುಸ್ತಾಗುತ್ತೀರಿ.
ಕಟಕ : ಆಪ್ತೇಷ್ಟರೊಡನೆ ಹಿತ ಚಿಂತನೆ ನಡೆಸಿ ಮನಸ್ಸು ಉಲ್ಲಾಸವಾಗಿರುತ್ತದೆ. ಯೋಚನೆಗಳು, ಕನಸುಗಳು ನಿಮ್ಮನ್ನು ಗಗನಕ್ಕೇರಿಸುತ್ತವೆ. ಸುಮ್ಮನೇ ಖುಷಿಯಾಗಿರುತ್ತೀರಿ.
ಸಿಂಹ : ನಿಗ್ರಹದಿಂದ ಸಾಧಿಸುವ ಮೌನಕ್ಕೂ, ಸಹಜವಾಗಿ ತುಳುಕುವ ಗಾಂಭೀರ್ಯಕ್ಕೂ ವ್ಯತ್ಯಾಸವಿದೆ ಅಲ್ಲವೇ ? ಈ ವಿಷಯಗಳಲ್ಲಿ ನೀವಿನ್ನೂ ಚಿಕ್ಕವರು ಅಂತ ಅನಿಸಬಹುದು. ನಿಜವೂ ಹೌದು ತಾನೇ?
ಕನ್ಯಾ : ಕೊನೆಗೂ ಅಧ್ಯಯನ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದಿದ್ದೀರಿ. ಆದರೂ ಏಕಾಗ್ರತೆ ಸಾಧಿಸಲು ಹೆಣಗಬೇಕಾಗಬಹುದು. ಅತಿ ಆಸೆಯಿಂದ ದಿನ ಹಾಳು ಮಾಡಿಕೊಳ್ಳಬೇಡಿ.
ತುಲಾ : ಕೃಷಿ ಕ್ಷೇತ್ರದಲ್ಲಿ ಲಕ್ ಇದೆ. ಇಷ್ಟು ದಿನ ದುಡಿದಿರುವುದಕ್ಕೆ ನಷ್ಟ ಕಾಣಲಿಲ್ಲವಲ್ಲ ಎಂಬ ಸಮಾಧಾನದ ನಿಟ್ಟುಸಿರು ಬಿಡುತ್ತೀರಿ.
ವೃಶ್ಚಿಕ : ದೂರದ ಪ್ರಯಾಣ ಕೈಗೂಡಲಿದೆ. ಹಿರಿಯರು ಹೇಳುವ ವಿಚಾರಗಳು ಕಿರಿಕಿರಿ ಎನಿಸಿದರೂ ನೀವು ಅವುಗಳನ್ನು ತಡೆದುಕೊಳ್ಳಲೇ ಬೇಕು ತಾನೆ. ನಿಮ್ಮ ಸೃಜನ ಶೀಲತೆಗೆ ಒಂದು ಅವಕಾಶ.
ಧನಸ್ಸು : ಸಂಗಾತಿಯಾಂದಿಗೆ ಒಂದು ಸುಂದರ ಸಂಜೆ . ಇವತ್ತು ಎಲ್ಲವನ್ನೂ ಗೆದ್ದಿದ್ದೇನೆ ಎಂಬ ಖುಷಿ ಮನತುಂಬಾ ತುಂಬಿರುತ್ತದೆ. ಧನವಿಯೋಗವಾದರೂ ಚಿಂತೆ ನಿಮ್ಮ ಬಳಿ ಸುಳಿಯದು. ಎಂಜಾಯ್. ಆಲ್ ದ ಬೆಸ್ಟ್.
ಮಕರ : ಟೂರ್ ಹೊರಟಿದ್ದೀರಿ. ಖುಷಿ ಪಡಲು ಸಮಯ ಕಡಿಮೆ. ಆರೋಗ್ಯದ ಕಡೆ ತೀವ್ರ ಕಾಳಜಿ ಬೇಕು. ಇಲ್ಲದೇ ಹೋದಲ್ಲಿ ಖುಷಿಯೋಲ್ಲಾ ಅನಾರೋಗ್ಯದ ಪಾಲಾಗುತ್ತದೆ.
ಕುಂಭ : ಗೃಹ ಕೃತ್ಯಗಳಲ್ಲಿ ಉಲ್ಲಾಸವಿರುತ್ತದೆ. ಯಶಸ್ಸೂ ಇದೆ ಎಂದು ಬೇರೆ ಹೇಳಬೇಕೇ ? ಹೊಸ ಯೋಜನೆಗಳನ್ನು, ಕನಸುಗಳನ್ನು ನೇಯುತ್ತಿರುತ್ತೀರಿ. ಆಫೀಸಿನಲ್ಲಿ ಸತ್ಕೀರ್ತಿ ಲಭಿಸಲಿದೆ. ಖರ್ಚಾಗುತ್ತಿರುವ ಹಣದ ಬಗ್ಗೆ ಅಷ್ಟೊಂದು ಚಿಂತಿಸುವ ಅಗತ್ಯವಿಲ್ಲ.
ಮೀನ : ಇವತ್ತೆಲ್ಲಾ ಖುಷಿಯಿಂದ ಇರುವ ನಿಮ್ಮ ಮನಸ್ಸಿನಲ್ಲಿ ಮುಂದಿನ ದಿನಗಳ ಬಗ್ಗೆ ಯೋಚನೆ ತುಂಬಿರುತ್ತದೆ. ಆಫೀಸಿನಲ್ಲಿ ಕೈ ತುಂಬಾ ಕೆಲಸ. ದಿನದ ಇತರ ವ್ಯವಹಾರಗಳಿಗೆ ಸಣ್ಣ ಬ್ರೇಕ್ ಹಾಕುತ್ತದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications