ಮೈಸೂರು ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಜಯಲಲಿತಾ
ಮೈಸೂರು : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ತಮ್ಮ ಗೆಳತಿ ಶಶಿಕಲಾ ನಟರಾಜ್ ಅವರೊಂದಿಗೆ ಮೈಸೂರಿನಲ್ಲಿ ಪ್ರತ್ಯಕ್ಷರಾದರು. ಮೈಸೂರು ಒಡೆಯರ ಕುಲದೇವತೆ ಶ್ರೀಚಾಮುಂಡೇಶ್ವರಿ ಸನ್ನಿಧಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.
ಭಾನುವಾರ ಬೆಳಗ್ಗೆ 7 ಗಂಟೆಯ ಸಮಯದಲ್ಲಿ ಬೆಟ್ಟಕ್ಕೆ ಬಂದ ಜಯಲಲಿತಾ ಸುಮಾರು 4 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೇವಿಗೆ ಕಾಣಿಕೆಯಾಗಿ ನೀಡಿದರು. ಹತ್ತು ಸಾವಿರ ರುಪಾಯಿಗಳನ್ನು ಹುಂಡಿಗೆ ಹಾಕಿದರು. 25 ವರ್ಷಗಳಿಂದ ತಾವು ಬಾಕಿ ಉಳಿಸಿಕೊಂಡಿದ್ದ ಹಲವು ಹರಕೆಗಳನ್ನು ಜಯಲಲಿತಾ ತೀರಿಸಿದರು.
ಇದು ಸಂಪೂರ್ಣ ತಮ್ಮ ಖಾಸಗಿ ಭೇಟಿ, ನಾನು ಈ ಸಂದರ್ಭದಲ್ಲಿ ಮತ್ತೇನೂ ಹೇಳಲು ಇಚ್ಛಿಸುವುದಿಲ್ಲ. ದೇವರ ದರ್ಶನಕ್ಕೆ ಬಂದಿದ್ದೇನೆ. ಸೂಕ್ತ ವೇದಿಕೆಯಲ್ಲಿ , ಸಮಯ ಬಂದಾಗ ಮಾತನಾಡುವೆ, ಕ್ಷಮಿಸಿ ಎಂದು ಕನ್ನಡದಲ್ಲೇ ಹೇಳಿ ಕಾರು ಹತ್ತಿದರು.
ಜಯಲಲಿತಾ ಅವರ ಅನಿರೀಕ್ಷಿತ ಭೇಟಿಯ ಹಿನ್ನೆಲೆಯಲ್ಲಿ ವಿಶೇಷ ಸುದ್ದಿಯನ್ನು ಅರಸಿ ಬೆಟ್ಟ ಹತ್ತಿದ ಪತ್ರಕರ್ತರಿಗೆ ಮತ್ತಾವುದೇ ವಿಶೇಷ ಸಮಾಚಾರ ಸಿಗಲೇ ಇಲ್ಲ. ಮುಂಬರುವ ತಮಿಳುನಾಡು ಚುನಾವಣೆಯ ಬಗ್ಗೆಯೂ ಅವರು ಚಕಾರ ಎತ್ತಲಿಲ್ಲ.
ಬರಲಿರುವ ಚುನಾವಣೆ ಎದುರಿಸುವ ಮುನ್ನ ಜಯಲಲಿತಾ ಚಾಮುಂಡೇಶ್ವರಿಯವರ ಆಶೀರ್ವಾದಕ್ಕಾಗಿ ಇಲ್ಲಿಗೆ ಬಂದಿದ್ದರು ಎಂಬುದಷೇ ಸುದ್ದಿ. ಜಯಲಲಿತಾ ಅವರಿಗೆ ಬಿಗಿ ಬಂದೋಬಸ್ತ್ ನೀಡಲಾಗಿತ್ತು. ಜಯಲಲಿತಾ ಅವರ ಭೇಟಿಯ ವಿಷಯವನ್ನು ಅತ್ಯಂತ ಗೌಪ್ಯವಾಗಿ ಇಡಲಾಗಿತ್ತು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications