ಭೂಕಂಪ ಮುನ್ಸೂಚನೆ ನೀಡುವ ಉಪಗ್ರಹ ಶೀಘ್ರವೇ ಅಂತರಿಕ್ಷಕ್ಕೆ
ಬೆಂಗಳೂರು : ಭೀಕರ ಭೂಕಂಪಗಳ ಭವಿಷ್ಯ ನುಡಿಯುವ ಮೈಕ್ರೋ ಸ್ಯಾಟಲೈಟನ್ನು ಈ ವರ್ಷಾಂತ್ಯದೊಳಗೆ ರಷ್ಯಾವು ಅಂತರಿಕ್ಷಕ್ಕೆ ಹಾರಿಸಲಿದೆ.
ರಷ್ಯದ ಇಜ್ಮಿರಾನ್ (IZMIRAN) ಏಜೆನ್ಸಿಯು 100 ಕೆಜಿಗೂ ಕಡಿಮೆ ತೂಕದ ಈ ಉಪಗ್ರಹ ಉಡಾವಣೆಯ ಬಗ್ಗೆ ಅಧ್ಯಯನದಲ್ಲಿ ತೊಡಗಿದೆ. ಗುಜರಾತ್ನಲ್ಲಿ ಘಟಿಸಿದಂತಹ ಭೀಕರ ಭೂಕಂಪಗಳ ಬಗ್ಗೆ ಈ ಉಪಗ್ರಹ ಮುನ್ಸೂಚನೆ ನೀಡಲಿದೆ ಎಂದು ರಷ್ಯಾದ ಏರ್ ಫ್ಲೀಟ್ ಮ್ಯಾಗಜೀನ್ ವರದಿ ಮಾಡಿದೆ.
1999ರ ಆಗಸ್ಟ್ನಲ್ಲಿ ಘಟಿಸಿದ ಟರ್ಕಿಯ ಭೂಕಂಪ ಮತ್ತು ಅದೇ ವರ್ಷ ಸೆಪ್ಟೆಂಬರ್ನಲ್ಲಿ ಥೈವಾನ್ನಲ್ಲಿ ನಡೆದ ಭೂಕಂಪಗಳಿಂದ ಪಡೆದುಕೊಂಡ ಅಂಕಿ ಅಂಶಗಳನ್ನು ಆಧರಿಸಿ ನಡೆಸಿದ ಅಧ್ಯಯನದಿಂದ ಈ ಹೊಸ ಉಪಗ್ರಹವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಐಯನೋ ಸ್ಫಿಯರಿಕ್ ಡೇಟಾಗಳ ಸಹಾಯದಿಂದ ಈ ಮೈಕ್ರೋ ಸ್ಯಾಟಲೈಟ್ ಭೀಕರ ಭೂಕಂಪಗಳ ಬಗ್ಗೆ ಮುನ್ಸೂಚನೆ ನೀಡಬಲ್ಲುದು.
ಭೂಕಂಪ ಭವಿಷ್ಯ ನುಡಿಯುವ ಮೈಕ್ರೋ ಸ್ಯಾಟಲೈಟಿನ ತೂಕ 100 ಕೆ.ಜಿಯಷ್ಟೇ ಇರುವುದರಿಂದ ಉಡಾವಣೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಅಲ್ಲದೆ, ಭೂಮಿಯಡಿಯಲ್ಲಿ ಅಣುಬಾಂಬ್ ಹೂತಿಟ್ಟಿದ್ದರೆ, ಅಥವಾ ಅಣು ಸ್ಥಾವರಗಳಲ್ಲಿ ಸ್ಫೋಟವಾಗುವ ಸಂಭವವಿದ್ದರೆ ಮೈಕ್ರೋ ಸ್ಯಾಟಲೈಟ್ ಮುಂಚಿತವಾಗಿ ಸೂಚನೆ ನೀಡುತ್ತದೆ ಎಂದು ಇಜ್ಮಿರಾನ್ ಗುಂಪು ರಷ್ಯನ್ ಪತ್ರಿಕೆಗೆ ತಿಳಿಸಿದೆ.
(ಯುಎನ್ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications