Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ಪ್ರವಾಸ ಹೊರಡಲು ಸುಸಮಯ. ಸಂಗಾತಿ ಮತ್ತು ಮಕ್ಕಳೊಂದಿಗೆ ಹರಟೆ ಹೊಡೆಯುತ್ತಾ ರಿಲ್ಯಾಕ್ಸ್‌ ಆಗಲು ಇದಕ್ಕಿಂತ ಒಳ್ಳೆಯ ದಿನ ಬೇರೆ ಸದ್ಯಕ್ಕೆ ಕಾಣಿಸದು. ಸಹೋದ್ಯೋಗಿಗಳ ಒಲವು ಗಳಿಸಬೇಕೆಂಬ ಹಠ ಬೇಡ.

ವೃಷಭ :ಆರಂಬಿಸಿದ ಹೊಸ ಕಾರ್ಯದ ಲಕ್‌ ಚೆನ್ನಾಗಿದೆ. ಲಾಭದ ಮೊದಲ ಕಂತಿನ ಸುದ್ದಿ ತಲುಪಲಿದೆ. ಈ ಸಂದರ್ಭದಲ್ಲಿ ನೀಚ ಜನರ ಕಿರಿಕಿರಿಗೆ ಮನಸ್ಸು ವಿಚಲಿತವಾದರೆ ಕೆಡುತ್ತೀರಿ.

ಮಿಥುನ : ನಿಮ್ಮ ಸ್ನೇಹಿತರು ಹೇಳುವ ಬುದ್ಧಿ ಮಾತು ವಾಸ್ತವ ಅಲ್ಲವೇ ? ವಿಪರೀತ ಖರ್ಚು ಮಾಡುವ ಪರಿಸ್ಥಿತಿ ನಿಮ್ಮ ಮುಂದಿಲ್ಲ. ಅಗತ್ಯವಿಲ್ಲದ ಕಡೆಗೆಲ್ಲಾ ಓಡುವ ಮನಸ್ಸನ್ನು ಒಂದೆಡೆ ಹಿಡಿದು ನಿಲ್ಲಿಸಿ.

ಕಟಕ : ಸ್ಥಾನ ಮಾನ ವೃದ್ಧಿ ಎಂದರೆ ಆಫೀಸನಲ್ಲಿ ಶುಭ ಸುದ್ದಿ ಕಾದಿದೆ ಎಂದಾಯಿತು. ಸದ್ಯದಲ್ಲಿಯೇ ಪಾರ್ಟಿ, ಡಿನ್ನರ್‌ಗಳಿಗೆ ತಯಾರಿ ನಡೆಸಬೇಕಾಗಿ ಬರಬಹುದು.

ಸಿಂಹ : ಇಷ್ಟು ದಿನದ ಸೋಲುಗಳಿಗೆ ಇವತ್ತು ಉತ್ತರ ಸಿಗುತ್ತದೆ. ಶ್ರಮ ಜೀವಿಗಳೆನಿಸಿಕೊಂಡು ಸ್ನೇಹಿತರಿಂದ ಹೊಗಳಿಸಿಕೊಳ್ಳುತ್ತೀರಿ. ಹಾಗೆಂದು ಮತ್ತೆ ಉಡಾಫೆ ಮಾಡಿದರೆ ಸೋಲು ನಿಮ್ಮನ್ನೆತ್ತಿ ಕುಕ್ಕಬಹುದು. ಸ್ನೇಹದ ನಡುವೆ ಅಧಿಕಾರ ಚಲಾಯಿಸಿದರೆ ಅದು ನಿಷ್ಪ್ರಯೋಜಕ .

ಕನ್ಯಾ : ಈ ಸೂಕ್ಷ್ಮ ಪ್ರವೃತ್ತಿಯಿಂದ ಇಲ್ಲದ ಸಮಸ್ಯೆ ತಂದೊಡ್ಡಿಕೊಳ್ಳುತ್ತೀರಿ. ಮನೆ ಕಟ್ಟುವ ಯೋಚನೆ ಇದ್ದರೆ ಇವತ್ತು ಆ ಕೆಲಸಕ್ಕೆ ಚಾಲನೆ ಸಿಗಬಹುದು. ಇದಕ್ಕಿಂತ ಶುಭ ಸುದ್ದಿ ಬೇಕೇ ? ರಾಜಕೀಯ ರಂಗದಲ್ಲಿದ್ದರಂತೂ ಪ್ರಶಂಸೆಯ ಸುರಿಮಳೆ

ತುಲಾ : ಹಣ ಪೋಲು ಮಾಡಿದರೆ ಮುಂದಿನ ದಿನಗಳನ್ನು ಹೇಗೆ ಕಳೆಯುತ್ತೀರಿ? ಔದ್ಯೋಗಿಕ ಕ್ಷೇತ್ರದಲ್ಲಿ ಹಿರಿಯ ಅಧಿಕಾರಿಗಳಿಂದ ಕಿರಿಕಿರಿ ಇರಬಹುದು. ಸಂಜೆ ಹೊತ್ತಿಗೆ ಮಕ್ಕಳಿಂದ ಖುಷಿ ಸುದ್ದಿ ಬರುತ್ತದೆ.

ವೃಶ್ಚಿಕ : ಬರೀ ಸುತ್ತಾಟ. ಮನೆಯಲ್ಲಿ ಬೋರ್‌ ಹೊಡೆಯುತ್ತದೆ ಎಂದುಕೊಂಡು ನೀವಾರಂಭಿಸುವ ಕೆಲಸ, ನಂತರ ತೊಂದರೆ ಕೊಡಬಹುದು. ಆರೋಗ್ಯದ ಕಡೆಗೂ ಗಮನ ಕೊಡಬೇಕಲ್ಲವಾ ?

ಧನಸ್ಸು :ಆರಂಭಿಸಿದ ಕೆಲಸದಲ್ಲಿ ಬರುವ ಅಡ್ಡಿ ಆತಂಕ, ಅಡೆ ತಡೆಗಳಿಂದ ಮನಸ್ಸು ಕೆಡಿಸಿಕೊಳ್ಳುತ್ತೀರಿ. ಆದರೆ ಸದ್ಯಕ್ಕೆ ಬರುವ ಕಷ್ಟ ನಷ್ಟಗಳಿಂದ ಪಾರಾಗಿ ಬಂದರೆ ಲಕ್‌ ನಿಮ್ಮ ಕೈಯಾಳಗೆ ಇರುತ್ತದೆ. ಆ ಕನಸಿನ ಮೂಲಕ ಇಂದಿನ ನೋವನ್ನು ನಿವಾರಿಸಿಕೊಳ್ಳಿ. ಆಲ್‌ ದ ಬೆಸ್ಟ್‌.

ಮಕರ : ತಮ್ಮ ಕೆಲಸವಾಗಲಿ ಎಂದು ನಿಮ್ಮ ಕಿವಿ ಊದುವ ಸ್ನೇಹಿತರಿಂದ ಕೆಲಸ ಕೆಡಿಸಿಕೊಳ್ಳುವ ಭಯವಿದೆ. ಮನೆಯಲ್ಲಿ ಶುಭ ಕಾರ್ಯಗಳು ನಿಮ್ಮ ಜೇಬಿಗೆ ಕತ್ತರಿ ಹಾಕಬಹುದು. ಆರೋಗ್ಯ ಜೋಪಾನ ಇಟ್ಟುಕೊಂಡಲ್ಲಿ ಇದು ಸುದಿನ.

ಕುಂಭ : ಹಠಮಾರಿತನವೊಂದು ಬಿಟ್ಟರೆ ನಿಮ್ಮ ಮನೆಯ ಸಣ್ಣ ಪುಟ್ಟ ಜಗಳಕ್ಕೆ ಪೂರ್ಣವಿರಾಮ ಇಡಬಹುದು. ನಿಮ್ಮಿಂದಲೇ ಸಮಸ್ಯೆ ಸೃಷ್ಟಿಯಾಗಿರುವುದಲ್ಲವೇ ? ಅತಿಯಾಸೆ ಬೇಡ. ನೆಮ್ಮದಿ ನಿಮ್ಮ ಬಳಿ ಮಲಗಿರುತ್ತದೆ.

ಮೀನ : ದೈವಬಲವಿದೆ. ಕಾರ್ಯ ಜಯ ಯೋಗ. ಆದರೆ ಸಮುದ್ರದ ತುಂಬ ಇರುವ ನೀರು ನಿಮ್ಮ ಬಿಂದಿಗೆಯಳತೆಯಷ್ಟೇ ನಿಮಗೆ ಸಿಗುವುದು. ನಿಮ್ಮ ಬಳಿ ಇರುವ ಧೈರ್ಯದಿಂದ ಸದ್ಯದ ಕಷ್ಟಗಳನ್ನು ನಿವಾರಿಸುವುದು ಕಷ್ಟ ಸಾಧ್ಯ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+