ಬೆಂಗಳೂರಿನಲ್ಲಿ ನಾಸ್ಡಾಕ್ ಕಚೇರಿ ಸೋಮವಾರ ಉದ್ಘಾಟನೆ
ಬೆಂಗಳೂರು : ಜಗತ್ತಿನ ಪ್ರತಿಷ್ಠಿತ ಹಾಗೂ ಪ್ರಪ್ರಥಮ ಇಲೆಕ್ಟ್ರಾನಿಕ್ ಸ್ಟಾಕ್ ಮಾರ್ಕೆಟ್ ಎನಿಸಿಕೊಂಡಿರುವ ನಾಸ್ಡಾಕ್ನ ಭಾರತದ ಶಾಖೆ ಬೆಂಗಳೂರಿನಲ್ಲಿ ಸೋಮವಾರ ಉದ್ಘಾಟನೆಗೊಳ್ಳಲಿದೆ. ಮುಖ್ಯಮಂತ್ರಿ ಕೃಷ್ಣ ಅವರ ಸತತ ಪ್ರಯತ್ನಕ್ಕೆ ಸಿಕ್ಕ ಭಾರಿ ಪ್ರತಿಫಲ ಇದು.
ಕೆನಡಾ, ಜಪಾನ್, ಸಾವೋ ಪಾಲ್ ಮತ್ತು ಲಂಡನ್ನಲ್ಲಿ ತನ್ನ ಮುಖ್ಯ ಕಚೇರಿಗಳನ್ನು ಹೊಂದಿರುವ ನಾಸ್ದಾಕ್ ಭಾರತದ ಷೇರು ಮಾರುಕಟ್ಟೆಯನ್ನೂ ಪ್ರವೇಶಿಸಿದೆ. ಬೆಂಗಳೂರಿನಲ್ಲಿ ಹೊಸದಾಗಿ ಆರಂಭವಾಗಲಿರುವ ನಾಸ್ಡಾಕ್ ಕಚೇರಿಯನ್ನು ನಾಸ್ಡಾಕ್ ಸ್ಟಾಕ್ ಮಾರ್ಕೆಟ್ನ ಉಪಾಧ್ಯಕ್ಷ ಆಲ್ಫ್ರೆಡ್ ಆರ್. ಬರ್ಕ್ಲಿ ಸೋಮವಾರ ಉದ್ಘಾಟಿಸಲಿದ್ದಾರೆ. ಷೇರು ಮಾರಾಟ ಕೇಂದ್ರಗಳನ್ನು ಪ್ರಮುಖ ನಗರಗಳಲ್ಲಿ ತೆರೆಯುವ ಉದ್ದೇಶದೊಂದಿಗೆ ಮತ್ತು ಷೇರು ಬಂಡವಾಳ ಹೂಡಿಕೆದಾರರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಬೆಂಗಳೂರಿನ ನಾಸ್ಡಾಕ್ ಕಚೇರಿ ಉದ್ಘಾಟನೆಯಾಗುತ್ತಿದೆ.
ಬೆಂಗಳೂರಿನಲ್ಲಿರುವ ಹಲವು ಕಂಪೆನಿಗಳು ಪ್ರೆೃಮರಿ ಯುಎಸ್ ಮಾರ್ಕೆಟ್ ಲಿಸ್ಟ್ನಲ್ಲಿವೆ. ಮುಂದಿನ ದಶಕದಲ್ಲಿ ಷೇರು ವ್ಯವಹಾರಗಳು ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ. ಆಲ್ಫೆ ್ರಡ್ ಅವರ ಪ್ರಕಾರ ಮುಖ್ಯ ಮಂತ್ರಿ ಎಸ್.ಎಂ. ಕೃಷ್ಣ ಅವರು ಕಳೆದ ವರ್ಷ ನಾಸ್ಡಾಕ್ ಕಚೇರಿಯನ್ನು ಬೆಂಗಳೂರಿನಲ್ಲಿ ತೆರೆಯುವಂತೆ ಮಾಡಿದ ಪ್ರಸ್ತಾಪದ ಪರಿಣಾಮವಾಗಿ ಏಷ್ಯಾದ ಮಾಹಿತಿ ತಂತ್ರಜ್ಞಾನ ರಾಜಧಾನಿ ಬೆಂಗಳೂರಿನಲ್ಲಿ ನಾಸ್ಡಾಕ್ ಕಚೇರಿ ಆರಂಭವಾಗುತ್ತಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications