ಸಿಲಿಕಾನ್ ಕಣಿವೆ ಗಾದೆಗಳು
ಹೀಗಾಗೆ ನಮ್ಮ ಓದುಗ ಮಿತ್ರರೊಬ್ಬರು, ಸಿಲಿಕಾನ್ ಕಣಿವೆಯ ಗಾದೆಗಳನ್ನು ಕಳುಹಿಸಿದ್ದಾರೆ. ನಾವು ನಿಮಗೆ ತಲುಪಿಸುತ್ತಿದ್ದೇವೆ. ನೀವು ನಿಮ್ಮ ಮಿತ್ರರೆಲ್ಲರಿಗೂ ತಿಳಿಸಿ.
- ಎಲ್ಲರ ಪ್ರಾಜೆಕ್ಟ್‌ನಲ್ಲೂ ಬಗ್‌ಸೇ... (ಎಲ್ಲರ ಮನೆ ದೋಸೇನೂ ತೂತೆ)
- ಮೈನ್ ಫ್ರೇಮ್ಸ್‌ಗೆ ಒಂದು ಕಾಲ, ಇ - ಕಾಮರ್ಸ್‌ಗೆ ಒಂದು ಕಾಲ (ಅತ್ತೆಗೊಂದು ಕಾಲ ಸೊಸೆಗೊಂದುಕಾಲ)
- ಕೋಡಿಂಗ್ ಮಾಡಿದವನಿಗಿಂತ, ಟೆಸ್ಟಿಂಗ್ ಮಾಡಿದವನದೇ ಬಹಳ ಆಯ್ತು (ಅಡಿಗೆ ಮಾಡ್ದೋನಿಗಿಂತ, ಬಡಿಸೋನ್ದೇ ಬಹಳ ಆಯ್ತು)
- ಬಾಡಿ ಷಾಪರ್‌ನಿಂದ ಕಳೆದುಕೊಂಡ ಮಾನ, ಲಕ್ಷ ಕೊಟ್ಟರೂ ಬರೋದಿಲ್ಲ ( ಅಡಿಕೆಗೆ ಹೋದ ಮಾನ ಕೋಟಿ ಕೊಟ್ರು ಮತ್ತೆ ಬರಲ್ಲ.)
- ಪ್ರಾಜೆಕ್ಟ್ ಮಾಡೋ ತನಕ ಮಾಡಿ, ಪ್ರಾಜಕ್ಟ್ ಯಾವುದರ ಬಗ್ಗೆ ಅನ್ನೋದು ಗೊತ್ತಾಗಲಿಲ್ಲ ಅಂದನಂತೆ ( ರಾತ್ರಿಯೆಲ್ಲಾ ರಾಮಾಯಣ ಕೇಳಿ, ರಾಮಂಗೂ ಸೀತೇಗೂ ಏನು ಸಂಬಂಧ ಎಂದನಂತೆ)
- ಕೈ ಕೀಬೋರ್ಡ್ ಮೇಲೆ ಕೈ ಓಡಿದರೇನೆ, ಹೊಟ್ಟೆಗೆ ಕಿಂಗ್ ಫಿಷರ್ ಬೀರ್ (ಕೈ ಕೆಸರಾದ್ರೇನೇ ಬಾಯಿ ಮೊಸರು)
- ಕೋಡಿಂಗ್‌ಗಿಂತ ಡಾಕ್ಯುಮೆಂಟೇಷನ್ನೇ ಜಾಸ್ತಿ (ಮಂತ್ರಕ್ಕಿಂತ ಉಗುಳೇ ಜಾಸ್ತಿ)
- ಪಿ.ಎಂ.ಗೆ (ಪ್ರಾಜೆಕ್ಟ್ ಮ್ಯಾನೇಜರ್‌ಗೆ) ಪ್ರಾಜೆಕ್ಟ್ ವಿವರಿಸಿದ ಹಾಗೆ (ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ)
- ಕರೆದು ಹೆಣ್ಣು ಕೊಡ್ತೀನಿ ಅಂದ್ರೆ, ಸಾಫ್ಟ್‌ವೇರ್ ಎಂಜಿನಿಯರ್ರೇ ಬೇಕು ಅಂತಾನೆ ( ಕರೆದು ಹೋಳಿಗೆ ಕೊಟ್ರೆ, ತುಪ್ಪ ಇಲ್ಲ ಅಂತಾನೆ)
- ಫೇಕ್ ಎಕ್ಸ್‌ಪೀರಿಯೆನ್ಸ್ ಆಂದ್ರೆ, ಫೈಲಿಂದ ರೆಸ್ಯೂಮ್ ತೆಗೆದು ನೋಡಿದನಂತೆ (ಕುಂಬಳಿಕಾಯಿ ಕಳ್ಳ ಅಂದ್ರೆ, ಹೆಗಲು ಮುಟ್ಟಿ ನೋಡಿಕೊಂಡನಂತೆ)
- ಒಂದು ಮಾಡ್ಯೂಲ್‌ನಲ್ಲಿ ಬಗ್ ಇದ್ರೆ, ಇನ್ನೊಂದರಲ್ಲಿ ಮಾಡ್ಯೂಲ್ ಡಿಬಗ್ ಮಾಡಿದರಂತೆ (ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದ್ರಂತೆ.)
- ಫಾರೀನ್ ಆಫರ್ ಸಿಗೋ ಮೊದಲು, ಪರ್ಚೇಸಿಂಗ್‌ಗೆ ಹೋದನಂತೆ ( ಕೂಸು ಹುಟ್ಟೋ ಮೊದಲೇ ಕುಲಾವಿ ಹೊಲಿಸಿದನಂತೆ)
- ಸ್ಪೆಸಿಫಿಕೇಷನ್‌ಗೆ ತಕ್ಕಂತೆ ಕೋಡ್ ಬರಿ (ಹಾಸಿಗೆ ಇದ್ದಷ್ಟು ಕಾಲು ಚಾಚು)
- ವಾಕ್ -ಇನ್ - ಇಂಟರ್‌ವ್ಯೂ ನಲ್ಲಿ ಆಫರ್ ಪಡೆದು ಕೊಂಡವನೇ ಜಾಣ (ಹುಚ್ಚು ಮುಂಡೇ ಮದುವೇಲಿ ಉಂಡವನೇ ಜಾಣ)
- ಮೈಕ್ರೋ ಸಾಫ್ಟಿನ ಟೆಕ್ನಾಲಜಿ ಎಲ್ಲಾ ಚಲೋ ಇರೋಂಗಿಲ್ಲ (ಬೆಳ್ಳಗಿರೋದೆಲ್ಲಾ ಹಾಲಲ್ಲ)
- ಸಾಫ್ಟ್‌ವೇರ್ ಕಂಪನೀಲಿ ಕೆಲಸ ಸಿಕ್ತು ಅಂತ ರಾತ್ರಿಯೆಲ್ಲ ಕುಣಿದಾಡಿದನಂತೆ ( ಅಲ್ಪನಿಗೆ ಐಶ್ವರ್ಯ ಬಂದ್ರೆ, ಅರ್ಧ ರಾತ್ರೀಲಿ ಕೊಡೆ ಹಿಡಿದನಂತೆ)
- ಕ್ಲೈಂಟ್ ಎದುರಲ್ಲಿ ಕುಳಿತಾದ, ಕೋಡಿಂಗ್ ಶುರು ಮಾಡಿದ ಹಾಗೆ (ಮನೆಗೆ ಬೆಂಕಿ ಬಿದ್ದಾಗ, ಬಾವಿ ತೋಡಕ್ಕೆ ಹೋದನಂತೆ)
- ಕಡೆಗೆ ಜನಿಸಿದ ಬಗ್, ಸಿಸ್ಟಮ್ಮನ್ನೇ ಕ್ರಾಷ್ ಮಾಡಿತಂತೆ ( ಕಡೆಗೆ ಹುಟ್ಟಿದ ಕಿಡಿ ಮನೆಯನ್ನೇ ಸುಟ್ಟಿತಂತೆ)
- ಕ್ಲೈಂಟ್ ಕೊಟ್ಟರೂ, ಬಾಡಿ ಷಾಪರ್ ಕೊಡಲಿಲ್ಲ ( ದೇವರು ವರ ಕೊಟ್ಟರೂ, ಪೂಜಾರಿ ಕೊಡಲಿಲ್ಲ)
- ಸಾವಿರ ಸುಳ್ಳು ಹೇಳಿ, ಒಂದು ಐ.ಟಿ. ಕೆಲಸ ಗಿಟ್ಟಿಸು (ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು)
- ಸ್ವದೇಶದಲ್ಲಿ ನೂರು ದಿನ ದುಡಿಯೋದಕ್ಕಿಂತ, ವಿದೇಶದಲ್ಲಿ ಮೂರು ದಿನ ದುಡಿಯೋದು ಲೇಸು (ಇಲಿಯಂತೆ ನೂರು ದಿನ ಬದುಕೋದಕ್ಕಿಂತ, ಹುಲಿಯಾಗಿ ಮೂರು ದಿನ ಬಾಳೋದು ಲೇಸು)
- ಹೊಸ ಟೆಕ್ನಾಲಜಿಗೆ ಅಪ್‌ಡೇಟ್ ಆಗದವನ ಕೆರಿಯರ್ ಹಾಳು ( ಕಾಲಕ್ಕೆ ತಕ್ಕಂತೆ ನಡೆಯದೋನ ಬಾಳು ಹಾಳು)
- ಬಾಡಿ ಷಾಪರ್ ಕ್ಯಾಂಡಿಡೇಟ್ ಜಗಳ, ಪ್ಲೇಸ್‌ಮೆಂಟ್ ಆಗೋತನಕ ( ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ)
- ಸಾಫ್ಟ್‌ವೇರ್ ಕೋರ್ಸ್ ಮಾಡಿ ನೋಡು, ಐಟಿ ಕೆಲಸ ಗಿಟ್ಟಿಸಿ ನೋಡು (ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು)
- ಪ್ರೋಗ್ರಾಂಗೆ ಒಂದು ವರ್ಷ, ಪಿಎಂಗೆ ಒಂದು ನಿಮಿಷ (ಕುಂಬಾರನಿಗೆ ಒಂದು ವರ್ಷ ದೊಣ್ಣೆಗೆ ಒಂದು ನಿಮಿಷ)
- ಇಂಟರ್‌ನೆಟ್ ಸರ್ಫ್ ಮಾಡುವಾಗ, ಪಿ.ಎಂ. ಬಂದಹಾಗೆ (ಶಿವಪೂಜೆಲಿ ಕರಡಿ ಬಂದಹಾಗೆ)
- ಪಿಎಂನ ಜತೆ ಪ್ರೋಗ್ರಾಮರ್ ವಿದೇಶಕ್ಕೆ ಹೋದಂತೆ (ಹೂವಿನ ಜತೆ ನಾರೂ ಸ್ವರ್ಗಕ್ಕೆ ಹೋದಂತೆ)
- ಪ್ರೋಗ್ರಾಮ್ ಲೆವೆಲಲ್ಲಿ ಸಾಲ್ವ್ ಆಗದ್ದು, ಸಿಸ್ಟಮ್ ಲೆವಲ್ಲಲ್ಲಿ ಸಾಲ್ವ್ ಆಗತ್ಯೇ ( ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ)
- ಅವರವರ ಜಾಬ್ ಅವರವರಿಗೆ ಚಂದ (ಹೆತ್ತೋರಿಗೆ ಹೆಗ್ಗಣ ಮುದ್ದು)
- ಪಿ.ಎಂ. ಹೇಗೋ, ಪ್ರೋಗ್ರಾಮರ್ರೂ ಹಾಗೆ (ಯಥಾ ರಾಜಾ ತಥಾ ಪ್ರಜಾ)
- ಪ್ರಾಜಕ್ಟ್ ಮುಗಿದ ಮೇಲೆ, ನೀನು ಯಾರು ಎಂದರಂತೆ ( ಹೊಳೆ ದಾಟಿದ ಮೇಲೆ, ಅಂಬಿಗ ಯಾರು ಎಂದರಂತೆ)
- ಪ್ರಾಜೆಕ್ಟ್ ಮಾಡಿದ್ದು ಯಾರೋ, ದುಡ್ಡು ಮಾಡಿದ್ದು ಮತ್ಯಾರೋ (ಯಾರದೋ ದುಡ್ಡು, ಯಲ್ಲಮ್ಮನ ಜಾತ್ರೆ)
- ಸ್ಯಾಲರಿ ನೋಡಿ ಗೌರವ ನೀಡು ( ಮುಖ ನೋಡಿ ಮಣೆ ಹಾಕು)
- ಯಾವಾಗಲೂ ಕೋಡಿಂಗ್ ಮಾಡಿದ್ರೆ ಕ್ಲೈಂಟ್ಸ್ ಹೊನ್ನೂ ಸಾಲದು (ಕುಳಿತು ತಿಂದ್ರೆ ಕುಡಿಕೆ ಹೊನ್ನೂ ಸಾಲದು)
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್‌ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications