Get Updates
Get notified of breaking news, exclusive insights, and must-see stories!

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮೂವರು ಸ್ಪಿನ್ನರ್ಸ್‌ ಬಳಕೆ - ಗಂಗೂಲಿ

Saurav gangulyಚೆನ್ನೈ : ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಮೊದಲ ಪಂದ್ಯದಲ್ಲಿ ಮೂವರು ಸ್ಪಿನ್ನರ್‌ಗಳನ್ನು ಆಡಿಸುವ ಇರಾದೆಯನ್ನು ಭಾರತ ತಂಡದ ನಾಯಕ ಸೌರವ್‌ ಗಂಗೂಲಿ ವ್ಯಕ್ತಪಡಿಸಿದ್ದಾರೆ. ಚೆನ್ನೈನಲ್ಲಿ ನಡೆದ ಐದು ದಿನಗಳ ತರಬೇತಿ ಶಿಬಿರದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಗಂಗೂಲಿ ಈ ವಿಷಯ ತಿಳಿಸಿದರು.

ಚೆನ್ನೈನಲ್ಲಿ ಮತ್ತೆ 16ರಿಂದ 18ರವರೆಗೆ ಅಲ್ಪಕಾಲದ ತರಬೇತಿ ಶಿಬಿರದಲ್ಲಿ ನಾವು ಪಾಲ್ಗೊಳ್ಳುತ್ತೇವೆ. ನಮಗಿನ್ನೂ 16 ದಿನಗಳ ಕಾಲಾವಕಾಶ ಇದೆ. ನಿಧಾನವಾಗಿ ನಮ್ಮ ಕ್ರೀಡಾ ತಂತ್ರಗಳ ಬಗ್ಗೆ ಸಮಾಲೋಚಿಸಿ, ನಿರ್ಧಾರ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು. ಮುಂಬೈನಲ್ಲಿ ನಡೆವ ಮೊದಲ ಟೆಸ್ಟ್‌ ಪಂದ್ಯಕ್ಕೆ ಮೂರ್ನಾಲ್ಕು ದಿನ ಮೊದಲೇ ನಾವು ಅಲ್ಲಿ ಸೇರಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಮಾನಸಿಕವಾಗಿ ಸಜ್ಜಾಗುತ್ತೇವೆ ಎಂದೂ ಅವರು ಹೇಳಿದರು.

ಒಬ್ಬರಿಂದ ಗೆಲುವು ಸಾಧ್ಯವಿಲ್ಲ : ಯಾವುದೇ ತಂಡ ಒಬ್ಬ ಕ್ರಿಕೆಟಿಗನಿಂದ ಗೆಲ್ಲಲು ಸಾಧ್ಯವಿಲ್ಲ. ತಂಡ ಒಟ್ಟಾಗಿ ಹೋರಾಡಿದಾಗ ಮಾತ್ರ ಗೆಲವು ಸಾಧ್ಯ. ನಾವು ಒಂದು ಸಮರ್ಥ ತಂಡವಾಗಿ ಆಸ್ಟ್ರೇಲಿಯಾ ವಿರುದ್ಧ ಸೆಣಸುತ್ತೇವೆ. ಯಾರು ಹೆಚ್ಚು ಉತ್ತಮವಾಗಿ ಆಡುತ್ತಾರೋ ಅವರು ಗೆಲ್ಲುತ್ತಾರೆ ಎಂದರು ಗಂಗೂಲಿ.

ಸ್ಟೀವ್‌ ವಾ ಅವರ ಹೇಳಿಕೆಯಿಂದ ಕೊಂಚ ಕಿರಿಕಿರಿಗೊಂಡವರಂತೆ ಕಂಡು ಬಂದ ಗಂಗೂಲಿ, ತಾವಾಗಲೀ ತಮ್ಮ ತಂಡವಾಗಲೀ ಒತ್ತಡದಲ್ಲಿ ಸಿಲುಕಿಲ್ಲ. ವಿಶ್ವಚಾಂಪಿಯನ್ನರಾಗಿ ಭಾರತಕ್ಕೆ ಬಂದಿರುವ ಆಸ್ಟ್ರೇಲಿಯನ್ನರೇ ಒತ್ತಡಕ್ಕೆ ಸಿಲುಕಿರಬೇಕು. ಕ್ರಿಕೆಟ್‌ ಸರಣಿ ಆರಂಭವಾಗುತ್ತಿದ್ದಂತೆಯೇ ಯಾವ ತಂಡ ಒತ್ತಡಕ್ಕೆ ಸಿಲುಕಿದೆ ಎಂಬುದು ಎಲ್ಲರಿಗೂ ತಿಳಿಯುತ್ತದೆ ಎಂದರು.

ಇಲ್ಲಿ ನಡೆದ ತರಬೇತಿ ಶಿಬಿರ ಹಿಂದಿನ ಶಿಬಿರಗಳಿಗಿಂತಲೂ ಭಿನ್ನವಾಗಿತ್ತು. ನಮ್ಮ ಹುಡುಗರು ಸಮರ್ಥರಾಗಿದ್ದಾರೆ. ಎಲ್ಲರಲ್ಲೂ ಉತ್ಸಾಹ ಹಾಗೂ ಪಂದ್ಯ ಎದುರಿಸುವ ಕಾತರ ಇದೆ. ನಾವು ಪಂದ್ಯ ಗೆಲ್ಲುವ ಉದ್ದೇಶದಿಂದಷ್ಟೇ ಆಡುತ್ತೇವೆ. ಒತ್ತಡಕ್ಕೆ ಒಳಗಾಗೆವು ಎಂದು ಸ್ಪಷ್ಟ ಮಾತುಗಳಲ್ಲಿ ತಿಳಿಸಿದರು.

ಸಂಭವನೀಯ ತಂಡದ ಎಲ್ಲ 25 ಆಟಗಾರರೂ ಕ್ಯಾಂಪ್‌ನಲ್ಲಿ ಶ್ರಮಪಟ್ಟು ಅಭ್ಯಾಸ ಮಾಡಿದ್ದಾರೆ. ನಾವು ಈ ಬಾರಿ ಕ್ಷೇತ್ರ ರಕ್ಷಣೆಯ ಬಗ್ಗೆ ಹೆಚ್ಚು ಗಮನಹರಿಸಿದ್ದೇವೆ. ನಮ್ಮ ಹುಡುಗರು ಕ್ಷೇತ್ರರಕ್ಷಣೆಯ ತಂತ್ರಗಳನ್ನು ಹಾಗೂ ಕೌಶಲಗಳನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ ಎಂದರು. ನಮಗೆ ವೇಗದ ಬೌಲರ್‌ಗಳ ಉತ್ತಮ ಸಹಕಾರವೂ ಇದೆ ಎಂದರು. ತಂಡದಲ್ಲಿ ಐವರು ನುರಿತ ಬೌಲರ್‌ಗಳಿರಬೇಕೇ ಬೇಡವೆ ಎಂಬುದನ್ನು ಪಿಚ್‌ನ ಲಕ್ಷಣದ ಮೇಲೆ ನಿರ್ಧರಿಸುತ್ತೇವೆ ಎಂದರು. ಯುವ ಸ್ಪಿನ್‌ ಬೌಲರ್‌ಗಳ ಬಗ್ಗೆ ನಾಯಕ ಗಂಗೂಲಿ ಮೆಚ್ಚುಗೆ ವ್ಯಕ್ತಪಡಿಸಿದರು. ಮೊದಲ ಪಂದ್ಯವನ್ನು ತಾವು ಕಾತರದಿಂದ ಎದುರು ನೋಡುತ್ತಿರುವುದಾಗಿ ಅವರು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+