ಲೋಕದ ಮಳೆ ಬೆಳೆ ಮನಸ್ಸಿಗೆ ಬರುತ್ತದಾ ?
ಮಾವು ಚಿಗುರಿದೆ. ಮೈ ತುಂಬ. ಏಪ್ರಿಲ್‌ನ ಸುಡು ಬಿಸಿಲಿನಲ್ಲಿ ಒಣಗಿ ಬಿರುಕು ಬಿಚ್ಚುತ್ತಿರುವ ನೆಲ ತುಂಬಾ ಹಣ್ಣು ಮಾವು ತರಗೆಲೆಯಂತೆ ಹರಡಬಹುದು ಎಂಬ ಕನಸು ಚಿಗುರೊಡೆಯುತ್ತಿದೆ.
ಮಾವು ಬೆಳೆದವರ ಮನದಲ್ಲಿ ಈ ಸಮೃದ್ಧಿಯ ಖುಷಿಯ ಹಿಂದೆಯೇ ಭಾರ ಯೋಚನೆಯ ಸೆಳಕು. ಜೋಳ, ತೊಗರಿ, ಭತ್ತ ಬೀದಿಯಲ್ಲಿ ಚೆಲ್ಲಿದ ಸುದ್ದಿ ಎದೆ ಮೇಲೆ ಬಂಡೆ ಕಲ್ಲಿನಂತೆ ಇನ್ನೂ ಕುಳಿತಿರುವಾಗ ಈ ಚಿಗುರು ಹೂವುಗಳ ಕಂಡು ನಿರಾಳವಾಗಿ ಆನಂದಿಸುವುದು ಹೇಗೆ ? ಮಾವಿನ ಉಪ್ಪಿನಕಾಯಿ, ಹಣ್ಣಿನ ಜ್ಯೂಸ್... ತಿಂಡಿ... ಸುದ್ದಿಗಳ ಆಚೆಗೆ ಮತ್ತೇನೂ ಆಗದಿರಲಪ್ಪಾ ...
ಚಳಿ ಮಾಯವಾಗಿದ್ದರೂ, ಚರ್ಮ ಒಡೆದು ಹೋಗುವಷ್ಟು ಹವೆ ಒಣಗಿದೆ. ಕರಾವಳಿಯಲ್ಲಿ ಆಗಲೆ ಸೆಕೆ ದರಬಾರು ನಡೆಸಿದೆ. ಉತ್ತರ ಕರ್ನಾಟಕದತ್ತ ಇಣುಕಿದರೆ ಗುಲ್ಬರ್ಗಾದಲ್ಲಿ ಉಷ್ಣಾಂಶ ಹತ್ತಕ್ಕಿಳಿದು ಕನಿಷ್ಠ ಉಷ್ಣಾಂಶದ ಕಿರೀಟ ಹೊತ್ತಿದೆ. ಇದೇ ಗುಲ್ಬರ್ಗಾ ಅಲ್ಲವೇ ಕಳೆದ ಏಪ್ರಿಲ್‌ನಲ್ಲಿ 40 ಡಿಗ್ರಿ ದಾಟಿ ಅಲ್ಲಿನ ಮಂದಿಯ ಉಸಿರುಗಟ್ಟಿಸಿ ಬಿಟ್ಟದ್ದು?
ಈ ಬಾರಿ ಏನಾಗಲಿದೆಯೋ... ಯಾರದಾದರೂ ಪುಣ್ಯ, ಯಾವ ಪುಣ್ಯಾತ್ಮನದ್ದೋ ಧರ್ಮ, ರಾಜ್ಯದಲ್ಲಿ ಮಳೆ ಬೆಳೆ ತರಲಿ, ಗುಟುಕು ನೀರ ಆರಿಸದಿರಲಿ.. ಎಂದು ಮನೆಯಲ್ಲಿ ಅಜ್ಜಿ ದಿನವೂ ಹಾರೈಸುತ್ತಾರೆ. ನೀವು ಸ್ನಾನ ಮಾಡಿ ದೇವರಿಗೆ ಕೈ ಮುಗಿಯುವಾಗ ಲೋಕದ ಮಳೆ ಬೆಳೆ ಮನಸ್ಸಿಗೆ ಬರುತ್ತದಾ?
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications