ಇನ್ನು ನಾವು ಉದ್ದಿಮೆದಾರರು, ಮಾರಾಟಗಾರರಲ್ಲ : ಸಿ.ಜಿ.ಕೆ.ನಾಯರ್
ಬೆಂಗಳೂರು : ಭಾರತ ವೈಮಾನಿಕ ಉದ್ಯಮ ಸಾಕಷ್ಟು ಬೆಳೆದಿದ್ದು, ಹೊಸ ಯೋಜನೆಗಳಿಗೆ ಜಾಗತಿಕ ಮಟ್ಟದ ಜೊತೆಗಾರರೊಂದಿಗೆ ಕೈಜೋಡಿಸಲು ಸಿದ್ಧವಾಗಿದೆ ಎಂದು ಹಿಂದೂಸ್ತಾನ್ ಏರಾನಾಟಿಕ್ಸ್ ಲಿಮಿಟೆಡ್‌ನ ಅಧ್ಯಕ್ಷ ಸಿ.ಜಿ. ಕೃಷ್ಣದಾಸ್ ನಾಯರ್ ಶನಿವಾರ ಹೇಳಿದರು.
ಭಾರತೀಯ ವಾಯುಯಾನ ತಂತ್ರಜ್ಞಾನ ಮತ್ತು ಕೈಗಾರಿಕೆ (ಸಿಯಾಟಿ)ಯ 9ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಅಧ್ಯಕ್ಷ ಭಾಷಣ ಮಾಡುತ್ತಿದ್ದರು. ಭಾರತೀಯ ವಾಯುಯಾನ ವರ್ಷಗಳ ಸಾಧನೆಯ ಹಾದಿ ಸವೆಸಿದ್ದು, ಇಂದು ಒಂದು ಉತ್ತಮ ಹಂತ ತಲುಪಿದೆ. ಇನ್ನು ಉಪಕರಣಗಳನ್ನು ಕೊಂಡು- ಮಾರುವ ಕೆಲಸವನ್ನು ನಿಲ್ಲಿಸಿ, ವ್ಯಾಪಾರ ಮತ್ತು ಸಹಕಾರಿ ಕ್ಷೇತ್ರದಲ್ಲಿ ಕೈಜೋಡಿಸಲು ಸಿಯಾಟಿ ನಿರ್ಧರಿಸಿದೆ ಎಂದರು.
ಸಮಾರಂಭವನ್ನು ಉದ್ಘಾಟಿಸಿದ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ, ದೇವನಹಳ್ಳಿ ಬಳಿ ಜಾರಿಯಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣವಾದ ನಂತರ ಔದ್ಯೋಗಿಕ ಕ್ಷೇತ್ರದಲ್ಲಿ ನಮಗೆ ದೊಡ್ಡ ಬ್ರೇಕ್ ಸಿಗಲಿದೆ. ಈಗ ಮಾಹಿತಿ ತಂತ್ರಜ್ಞಾನ ಕೇಂದ್ರ ನಗರಿ ಎಂದು ಹೆಸರಾಗಿರುವ ಬೆಂಗಳೂರು ಆಗ ವಿಮಾನಯಾನ ನಗರಿ ಎಂದೂ ಕರೆಸಿಕೊಳ್ಳಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪದ್ಮ ಶ್ರೀ ಪ್ರಶಸ್ತಿ ವಿಜೇತರಾದ ನಾಯರ್ ಹಾಗೂ ಇಸ್ರೋದ ನಿರ್ದೇಶಕ ಪಿ.ಎಸ್.ಗೋಯಲ್ ಅವರನ್ನು ಸನ್ಮಾನಿಸಲಾಯಿತು. 2000ನೇ ಇಸವಿಯಲ್ಲಿ ವಾಯುಯಾನ ಕ್ಷೇತ್ರದ ಸಂಶೋಧನಾ ಕಾರ್ಯದಲ್ಲಿ ಮಹತ್ತರ ಸೇವೆ ಸಲ್ಲಿಸಿ, ವಿದೇಶೀ ವಿನಿಮಯದಲ್ಲಿ ಕೋಟ್ಯಂತರ ರುಪಾಯಿ ಉಳಿಸಿರುವ 7 ಕಂಪನಿಗಳಿಗೆ ‘ಸಿಯಾಟಿ ಪ್ರಶಸ್ತಿ’ ನೀಡಲಾಯಿತು.
(ಯುಎನ್‌ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications