ದಾವಣಗೆರೆ : ಸಿನಿಮೀಯ ಶೈಲಿಯಲ್ಲಿ ಇಬ್ಬರು ವೈದ್ಯರ ಅಮಾನತು
ದಾವಣಗೆರೆ : ಒಂದೆಡೆ ಸರ್ಕಾರಿ ಸೇವಕರಾಗಿದ್ದ ಚಿತ್ರನಟ ಬಿ.ಸಿ.ಪಾಟೀಲ್ ಅಮಾನತ್ತಾಗಿ, ಕಷ್ಟಗಳ ಮೇಲೆ ಕಷ್ಟ ಎದುರಿಸುತ್ತಿದ್ದಾರೆ. ಇದೇ ಗತಿ ಇನ್ನೇನು ನಾಳೆಯೋ ನಾಳಿದ್ದೋ ಚಿತ್ರನಟ ಕೆ.ಶಿವರಾಂ ಅವರಿಗೂ ಬರಬಹುದೆಂದು ಗಾಂಧಿನಗರ ಮಾತಾಡಿಕೊಳ್ಳುತ್ತಿರುವ ಸಂದರ್ಭದಲ್ಲೇ ದಾವಣಗೆರೆ ಜಿಲ್ಲಾಧಿಕಾರಿ ಕೆ.ಶಿವರಾಂ ಧೂಳು ಕೊಡವಿಕೊಂಡು ಎದ್ದಿದ್ದಾರೆ. ಅದನ್ನು ಸಾಬೀತು ಪಡಿಸಲೋ ಎಂಬಂತೆ, ಶನಿವಾರ ಇಬ್ಬರು ವೈದ್ಯರನ್ನು ಅಮಾನತ್ತು ಮಾಡಿದ್ದಾರೆ.
ಡಾ. ಜಗದೀಶ್ ಹಾಗೂ ಡಾ. ರಾಜು ಇವರೇ ಅಮಾನತ್ತುಗೊಂಡಿರುವ ಗುತ್ತಿಗೆ ಆಧಾರದ ಮೇಲೆ ನೇಮಕವಾಗಿದ್ದ ವೈದ್ಯಕೀಯ ಅಧಿಕಾರಿಗಳು. ಡಾ.ಜಗದೀಶ್ ಅವರನ್ನು ಹರಿಹರ ತಾಲ್ಲೂಕಿನ ಉಕ್ಕಡಗಾತ್ರಿಗೆ ನೇಮಿಸಲಾಗಿತ್ತು. ಆದರೆ ಅವರು ಅಲ್ಲಿಗೆ ಹೋಗಲೇ ಇಲ್ಲ. ಇನ್ನು ಹೂವಿನಮಡುವಿಗೆ ನಿಯೋಜಿಸಲಾಗಿದ್ದ ಡಾ.ರಾಜು ಸರ್ಕಾರಿ ಸೇವೆಯನ್ನು ನಿರ್ಲಕ್ಷಿಸಿ ಜನರಿಂದ ಕಾಸು ಕಿತ್ತುಕೊಂಡು ಖಾಸಗಿ ಸೇವೆ ಮಾಡುತ್ತಿದ್ದರು. ಈ ಕಾರಣ ಇಬ್ಬರನ್ನೂ ಕೆ.ಶಿವರಾಂ ಅಮಾನತ್ತು ಮಾಡಿದ್ದು, ತಾವು ಮೈಯೆಲ್ಲಾ ಕಣ್ಣಾಗಿ ದುಡಿಯುತ್ತಿರುವುದನ್ನು ತೋರಿದ್ದಾರೆ.
ಶಿವರಾಂ ಅವರನ್ನು ಅಮಾನತ್ತು ಮಾಡುವ ಯೋಚನೆಯೇನಾದರೂ ಸರ್ಕಾರಕ್ಕೆ ಇದ್ದಲ್ಲಿ ಅವರ ಈ ಕರ್ತವ್ಯಪರತೆಗೆ ಮೆಚ್ಚಿ ಆ ಯೋಚನೆ ಕೈ ಬಿಟ್ಟರೂ ಆಶ್ಚರ್ಯವೇನಿಲ್ಲ ಎಂದು ಗಾಂಧಿನಗರದ ಮಂದಿ ಮಾತಾಡಿಕೊಳ್ಳುತ್ತಿರುವುದರಲ್ಲಿ ವ್ಯಂಗ್ಯವೇನೂ ಕಾಣುತ್ತಿಲ್ಲ.
(ಯುಎನ್‌ಐ)
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications