Get Updates
Get notified of breaking news, exclusive insights, and must-see stories!

ರಾಜ್‌ ಸಿನಿಮಾ : ಕಾದಂಬರಿಯೇ ಇರಲಿ

*ಶ್ಯಾಮ್‌

ನನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ . ಅಣ್ಣಾವ್ರುಹಾಗೂ ಶಿವಣ್ಣ ಒಟ್ಟಿಗೆ ರಾಕ್‌ಲೈನ್‌ ಸಿನಿಮಾದಲ್ಲಿ ಅಭಿನಯಿಸುವುದು, ಅದೂ ಸುನಿಲ್‌ ಕುಮಾರ್‌ ದೇಸಾಯಿ ನಿರ್ದೇಶನದಲ್ಲಿ - ಸುದ್ದಿಯೇ ಪುಳಕ ಹುಟ್ಟಿಸುತ್ತದೆ. ಇದು ಪ್ರತಿಯಾಬ್ಬ ಎ- ಗ್ರೇಡ್‌ ಸಿನಿಪ್ರಿಯ ಕನ್ನಡಿಗನ ಕನಸು. ಇದು ಸಾಧ್ಯವಾದಷ್ಟು ಬೇಗ ನಿಜವಾಗಲಿ.

ಆದರೆ, ರಾಜ್‌ ಬಿಡುಗಡೆಗಾಗಿ ಕಂಕಣ ತೊಟ್ಟಿದ್ದ ಅಂಬಿ ಹಾಗೂ ರಾಕ್‌ಲೈನ್‌ಗೆ ತಕ್ಕ ಗೌರವ ದಕ್ಕಲಿಲ್ಲವೆನ್ನುವ ವಿಷಯ ಕೆಡುಕೆನಿಸಿತು. ಅದೇನೇ ಇರಲಿ, ದೇಸಾಯಿಗಂತೂ ರಾಜ್‌- ರಾಕ್‌ಲೈನ್‌ ಸಿನಿಮಾ ಅಗ್ನಿಪರೀಕ್ಷೆಯೇ ಸರಿ. ದೇಸಾಯಿ ಯಶಸ್ವಿಯಾಗಲಿ.

ರಾಜ್‌ ಅಭಿಮಾನಿಗಳಂತೂ ಅಣ್ಣಾವ್ರನ್ನು ವಿಭಿನ್ನ ಪಾತ್ರದಲ್ಲಿ ನೋಡುವ ತವಕದಲ್ಲಿದ್ದಾರೆ. ದುರಾದೃಷ್ಟಶಾತ್‌, ಅಣ್ಣಾವ್ರು ತಮ್ಮಲ್ಲಿನ ನಟನ ಬಗ್ಗೆ ತಲೆ ಕೆಡಿಸಿಕೊಂಡಿದ್ದಕ್ಕಿಂತ ಸ್ಟಾರ್‌ಗಿರಿಯ ಬಗ್ಗೆ ಯೋಚಿಸಿದ್ದೇ ಹೆಚ್ಚು . ಈ ನಿಟ್ಟಿನಲ್ಲಿ ದೇಸಾಯಿ ಆಯ್ದುಕೊಳ್ಳುವ ಕಥೆ ಹಾಗೂ ಆದನ್ನು ನಿಭಾಯಿಸುವ ರೀತಿಯ ಬಗ್ಗೆ ಕುತೂಹಲ ಉಂಟಾಗಿದೆ.

ರಾಜ್‌ ಸಿನಿಮಾದ ಕಥೆಗಾಗಿ ಯಾವುದಾದರೂ ಕಾದಂಬರಿಯನ್ನೇ ಆಯ್ದುಕೊಳ್ಳುವುದು ಒಳ್ಳೆಯದು. ನಾವಂತೂ, ನಟನೆಯಲ್ಲಿ ಮತ್ತಷ್ಟು ಉತ್ತಮಗೊಳ್ಳುವ ರಾಜ್‌ಗಾಗಿ ಕಾತರದಲ್ಲಿದ್ದೇವೆ. ಈ ಕಾತರ ಉಂಟು ಮಾಡಿದ, ಸಿನಿಮಾ ಸ್ಕೂಪ್‌ಗಳನ್ನು ಬಿತ್ತರಿಸುವಲ್ಲಿ ಯಾವತ್ತೂ ಎತ್ತಿದ ಗೈ ಎನಿಸಿದ ನಮ್ಮ ಕನ್ನಡ ಪೋರ್ಟಲ್‌ ಇಂಡಿಯಾ ಇನ್ಫೋಗೆ ಅಭಿನಂದನೆ.

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+