ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಬೆಟ್ಟಾನ ತಲೆ ಮೇಲೆ ಹೊರುವ ಸಾಹಸ ಬೇಡ. ಆಂತೆಯ ಕಂತೆಗಳನ್ನೆಲ್ಲಾ ಒತ್ತಟ್ಟಿಗಿರಿಸಿ ನಿಟ್ಟುಸಿರು ಬಿಡಿ. ನೀವಂದುಕೊಂಡ ಕೆಲಸಗಳೆಲ್ಲಾ ತಂತಾವೇ ಆಗುತ್ತವೆ.ವೃಷಭ : ನಿಮ್ಮೊಬ್ಬ ಗೆಳೆಯ ಸ್ವ ಇಚ್ಛೆಯಿಂದ ನೆರವಿನ ಹಸ್ತ ಚಾಚುತ್ತಾರೆ. ನಿಮಗೆ ಆತನ ನೆರವು ಪಡೆಯಲು ಕಿಂಚಿತ್ತೂ ಇಷ್ಟವಿಲ್ಲ. ನೀವೇ ಸರಿ. ಆತ ತಾನಾಗೇ ಮುಂದೆ ಬಂದಿರುವುದು ತನ್ನ ಬೇಳೆ ಬೇಯಿಸಿಕೊಳ್ಳುವುದಕ್ಕಾಗೇ.
ಮಿಥುನ : ಕ್ಯಾಕಸ್‌ಗಳ ಮಧ್ಯದಲ್ಲಿ ನಿಂತಿದ್ದೀರಿ. ಎಂಟೂ ದಿಕ್ಕುಗಳಿಂದ ಒತ್ತಡಗಳ ಸುರಿಮಳೆ. ತಾಳ್ಮೆಯ ಮೂರ್ತಿಯಾದ ನೀವು ಸದ್ಯಕ್ಕೆ ಅದನ್ನು ತಡೆಕೊಳ್ಳಿ. ನಿಮ್ಮ ಒಳ್ಳೆಯತನವೇ ನೆಮ್ಮದಿಯ ನಾಳೆ ದಕ್ಕಿಸುತ್ತದೆ.
ಕಟಕ : ನಾನು ಜಾಣ ಅಂತ ತೋರಹೊರಟಿರುವುದೇ ನಿಮಗೆ ಮುಳುವಾಗಲಿದೆ. ನಿಮ್ಮ ಛಾತಿಯೇ ನಿಮ್ಮ ಮೇಲೆ ಕೆಲಸದ ಬಂಡೆಗಳ ಹೊರಿಸುತ್ತೆ. ಅತಿ ಪ್ರದರ್ಶನ ಒಳ್ಳೆಯದಲ್ಲ.
ಸಿಂಹ : ನೀವು ಇವತ್ತು ಪಕ್ಕಾ ಹೆಜ್ಜೆಗಳನ್ನೇ ಇಡುತ್ತೀರಿ. ಮಕ್ಕಳು ಸ್ವಲ್ಪ ಮನಸ್ಸಿಗೆ ಸಂಕಟ ಕೊಟ್ಟರೂ, ನಿಮ್ಮ ಬುದ್ಧಿ ಮಾತುಗಳನ್ನು ಅವರು ಕಿವಿ ಮೇಲೆ ಹಾಕಿಕೊಳ್ಳುತ್ತಾರೆ.
ಕನ್ಯಾ : ಹಳೆಯ ಸ್ನೇಹಿತರೊಬ್ಬರು ನಿಮ್ಮನ್ನು ಮದುವೆಯಾಗುವ ಇಂಗಿತ ಹೊರಹಾಕುತ್ತಾರೆ. ಇಷ್ಟು ವರ್ಷಗಳ ಕಾಲ ನೀವು ಕಾದಿದ್ದೂ ಅವರಿಗೇ ಅಲ್ಲವೇ?
ತುಲಾ : ಸಹೋದ್ಯೋಗಿಗಳು ಹೊರೆ ಹೊತ್ತಿದ್ದಾರೆ. ಗೊಂದಲ, ಅನನುಭವ ಅವರನ್ನು ಒದ್ದಾಟದಲ್ಲಿ ಸಿಕ್ಕಿಸಿದೆ. ಅವರ ನೊಗಕ್ಕೆ ನೀವೂ ಹೆಗಲು ಕೊಡಿ.
ವೃಶ್ಚಿಕ : ಜಂಜಡ, ಬೇಸರ ತಲೆಭಾರ ತಂದಿದೆ. ಕುಟುಂಬದವರೊಂದಿಗೆ ಒಂದು ಸಣ್ಣ ಪಿಕ್‌ನಿಕ್‌ಗೆ ಹೋಗಿ ಬನ್ನಿ. ಮಾನಸ ಸರೋವರ ಪೂರ್ತಿ ಶುದ್ಧಿಯಾಗುತ್ತದೆ.
ಧನಸ್ಸು : ಯಾರೇ ಕೂಗಾಡಲಿ, ನನ್ನ ನೆಮ್ಮದಿಗೆ ಭಂಗವಿಲ್ಲ ಅನ್ನುವ ನಿಮ್ಮ ಮನೋಭಾವ ಎಲ್ಲಾ ಸ್ಥಿತಿಯಲ್ಲೂ ಒಳ್ಳೆಯದೇನಲ್ಲ . ಇದರಿಂದಾಗಿ ಗೆಳೆಯರ ಕಳಕೊಳ್ಳಬಹುದು ಎಚ್ಚರದಿಂದಿರಿ.
ಮಕರ : ಮತ್ತೆ ತವರಿನಿಂದ ಕರೆ ಬಂತೆ. ಆತುರ ಬೇಡ, ಇಂದೇ ಪ್ರಯಾಣ ಸಾಧ್ಯವಾಗದು ಎನ್ನುವುದು ನಿಮಗೂ ಗೊತ್ತು . ನಿಮ್ಮ ಅನುಪಸ್ಥಿತಿ ಯಾರಿಗಾದರೂ ಅಸಹನೀಯ ಅನ್ನಿಸಿದರೆ ನಿಮಗೇನನ್ನಿಸುತ್ತೆ?
ಕುಂಭ : ಸ್ವಾರ್ಥಿಗಳಾಗುತ್ತಿದ್ದೀರಿ. ಇಲ್ಲವೆಂದು ನೀವು ಆಗಾಗ ಸಾಬೀತು ಪಡಿಸಹೊರಟರೂ ನಿಮ್ಮ ಜಾಯಮಾನ ಅದೇ ಎಂದು ಗೆಳೆಯರು ತೀರ್ಮಾನಿಸಿರುವುದನ್ನು ಬದಲಿಸಲು ಹೆಣಗಬೇಕಾಗುತ್ತದೆ. ಇಂದಿನದು ಸುಂದರ ಸಂಜೆ.
ಮೀನ : ಎಂದಿನ ಶೈಲಿಯಲ್ಲೇ ಚೌಕಾಸಿಗಿಳಿಯುತ್ತೀರಿ. ಕಾಲ ಸರಿಯಾಗಿಲ್ಲ . ಬಜಾರಿನಲ್ಲಿ ಜಾರಿಬಿದ್ದೀರಿ, ಜೋಕೆ. ಹೇಗಾದರೂ ಇರಲಿ, ಒಂದು ಸಲ ಕುಲದೇವರನ್ನು ಅರ್ಚಿಸುವುದು ಒಳ್ಳೆಯದು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications