ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಪೊಲೀಸರಿಂದ 3 ಕೋಟಿ ಬೆಲೆಯಮಾದಕ ವಸ್ತು ವಶ

By Staff
|
Google Oneindia Kannada News

ಬೆಂಗಳೂರು : ನಗರ ಪೊಲೀಸರು ಸುಮಾರು 3 ಕೋಟಿ ರುಪಾಯಿ ಮೌಲ್ಯದ ಬ್ರೌನ್‌ ಷುಗರ್‌, ಹೆರಾಯಿನ್‌ ಹಾಗೂ ಗಾಂಜಾ ವಶಪಡಿಸಿಕೊಂಡಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಬಯಲಾಗಿರುವ ಅತಿ ದೊಡ್ಡ ಮಾದಕ ವಸ್ತು ಜಾಲ ಇದಾಗಿದೆ.

ಆಫ್ಘಾನಿಸ್ತಾನದಿಂದ ತರಿಸಲಾಗಿದ್ದ ಈ ಮಾಲನ್ನು ಕೋಲಾರ ಜಿಲ್ಲೆ ನಿವಾಸಿಗಳಾದ ಸುರೇಶ್‌ (28) ಹಾಗೂ ಷಣ್ಮುಗಂ (36) ವಿಶ್ವೇಶ್ವರಪುರದ ವಸತಿ ಗೃಹವೊಂದರಲ್ಲಿ ಮಾರಲು ಯತ್ನಿಸುತ್ತಿದ್ದರು. ಈ ಬಗ್ಗೆ ಚಾಮರಾಜಪೇಟೆ ಉಪ ವಿಭಾಗದ ಪೊಲೀಸರಿಗೆ ಸುಳಿವು ಸಿಕ್ಕಿ, ದಾಳಿ ನಡೆಸಿದಾಗ ಆರೋಪಿಗಳು ಮಾಲಿನ ಸಮೇತ ಸಿಕ್ಕಿ ಬಿದ್ದರು ಎಂದು ನಗರ ಪೊಲೀಸ್‌ ಆಯುಕ್ತ ಟಿ.ಮಡಿಯಾಳ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2 ಕೆ.ಜಿ. ಬ್ರೌನ್‌ ಷುಗರ್‌, 1 ಕೆ.ಜಿ. ಹೆರಾಯಿನ್‌ ಹಾಗೂ 20 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಮಾಲಿನ ಪೆಟ್ಟಿಗೆಗಳ ಮೇಲೆ ಆಫ್ಘಾನಿಸ್ತಾನದ ಕಂಪನಿಯಾಂದರ ಮುದ್ರೆಯಿದ್ದು, ಕೇರಳ ಮೂಲಕ ನಗರಕ್ಕೆ ಸಾಗಿಸಿದ್ದಾರೆ. ಆಲಿ ಎಂಬ ಮತ್ತೊಬ್ಬ ಆರೋಪಿ ತಪ್ಪಿಸಿಕೊಂಡಿದ್ದು, ತಲಾಷು ನಡೆದಿದೆ ಎಂದು ಮಡಿಯಾಳ್‌ ಹೇಳಿದರು.

ಆರೋಪಿಗಳನ್ನು ಮಾಲು ಸಮೇತ ಹಿಡಿಯುವಲ್ಲಿ ಯಶಸ್ವಿಯಾದ ಚಾಮರಾಜ ಪೇಟೆ ಎಸಿಪಿ ಬಿ. ಎಂ.ಉತ್ತಯ್ಯ, ಸೆಂಟ್ರಲ್‌ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಎಚ್‌.ಸುಬ್ಬಣ್ಣ ಮತ್ತಿತರರ ಸಾಧನೆಗೆ ಮಡಿಯಾಳ್‌ ಮೆಚ್ಚುಗೆ ವ್ಯಕ್ತಪಡಿಸಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X