ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಮಗಳೂರಲ್ಲಿ 3 ದಿನಗಳ ಬಸವ ತತ್ತ್ವ ಸಮಾವೇಶ ಪ್ರಾರಂಭ

By Staff
|
Google Oneindia Kannada News

ಚಿಕ್ಕಮಗಳೂರು : ಫೆಬ್ರವರಿ 10 ರಿಂದ 12ರವರೆಗೆ ಹತ್ತಿರದ ಶ್ರೀ ಚಂದ್ರಶೇಖರ ಸ್ವಾಮಿಗಳ ಜಯಂತಿ ಮಹೋತ್ಸವ ಹಾಗೂ ಶ್ರೀಗಳ ಗದ್ದುಗೆ, ಬಸವೇಶ್ವರಮೂರ್ತಿ ಅನಾವರಣ ಹಾಗೂ ಬಸವ ತತ್ತ್ವ ಸಮಾವೇಶ ನಡೆಯಲಿದೆ.

ಬಸವ ತತ್ತ್ವ ಪೀಠದ ಶ್ರೀ ಜಯ ಬಸವಾನಂದ ಸ್ವಾಮಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಲು ಸ್ವಾಗತ ಸಮಿತಿಯಾಂದನ್ನು ರಚಿಸಲಾಗಿದೆ ಎಂದರು.

ಕಾರ್ಯಕ್ರಮಗಳ ವಿವರ

  • ಫೆಬ್ರವರಿ 10- ಬೆಳಗ್ಗೆ 6.30ಕ್ಕೆ ಸಾಮೂಹಿಕ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ. ಸಾನಿಧ್ಯ : ವಿರಕ್ತ ಮಠಾಧೀಶ ಶ್ರೀ ಚನ್ನಬಸವ ಶಿವಯೋಗಿ .
    11 ಗಂಟೆಗೆ ಪ್ರೋ. ವಿ.ವಿ. ಸಂಗಮದ ಅವರಿಂದ ಶೂನ್ಯ ಸಂಪಾದನೆ ವಿಷಯದ ಬಗ್ಗೆ ಉಪನ್ಯಾಸ.
    ಸಂಜೆ 6 ಗಂಟೆಯ ನಂತರ ಸಾಂಸ್ಕೃತಿಕ ಕಾರ್ಯಕ್ರಮ.
  • ಫೆಬ್ರವರಿ 11- ಬೆಳಗ್ಗೆ 10 ಗಂಟೆಗೆ ಬಸವ ತತ್ತ್ವ ಸಮಾವೇಶ ಮತ್ತು ಚಂದ್ರಶೇಖರ ಜಯಂತಿ ಮಹೋತ್ಸವ. ಸಾನಿಧ್ಯ : ಚಿತ್ರದುರ್ಗದ ಬೃಹನ್ಮಠದ ಶ್ರೀ ಶಿವಮೂರ್ತಿ ಮುರುಘ ರಾಜೇಂದ್ರ ಸ್ವಾಮಿ, ಅರಸೀಕೆರೆ ಯಳನಡು ಮಠದ ಶ್ರೀ ಜ್ಞಾನ ಪ್ರಭು ಸಿದ್ಧರಾಮ ದೇಶೀಕೇಂದ್ರ ಮಹಾಸ್ವಾಮಿ.
    5 ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ದಾಸೋಹ ಮಹಾಮನೆಗೆ ಸಂಸದ ಡಿ.ಸಿ.ಶ್ರೀಕಂಠಪ್ಪನವರಿಂದ ಶಂಕು ಸ್ಥಾಪನೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಡಿ.ಬಿ.ಚಂದ್ರೇಗೌಡ ಹಾಗೂ ಸಾರಿಗೆ ಸಚಿವ ಸಗೀರ್‌ ಅಹ್ಮದ್‌ ಕೂಡ ಭಾಗವಹಿಸುತ್ತಾರೆ.
    ಸಂಜೆ 6 ಗಂಟೆಗೆ ಸರ್ವ ಧರ್ಮ ಚಿಂತನಗೋಷ್ಠಿ.
  • ಫೆಬ್ರವರಿ 12- ಬೆಳಗ್ಗೆ 10 ಗಂಟೆಗೆ ದಿ. ಅಂದ್ರಶೇಖರ ಮಹಾಸ್ವಾಮಿಗಳ ಬಯಲು ಸಮಾಧಿಯ ಐಕ್ಯಮಂಟಪದಲ್ಲಿ ಬಸವೇಶ್ವರ ಮೂರ್ತಿ ಅನಾವರಣ ಕಾರ್ಯಕ್ರಮ. ಅಧ್ಯಕ್ಷರು : ತುಮಕೂರು ಸಿದ್ಧಗಂಗಾ ಕ್ಷೇತ್ರದ ಶ್ರೀ ಶಿವಕುಮಾರ ಮಹಾಸ್ವಾಮಿ. ಇದೇ ಸಂದರ್ಭದಲ್ಲಿ ಶ್ರೀ ಜಯಚಂದ್ರಶೇಖರ ಸ್ವಾಮೀಜಿಗಳ ಬದುಕು ಮತ್ತು ಚಿಂತನೆ ಕುರಿತ ಗ್ರಂಥ ಹೊರತರಲಾಗುವುದು.
ಕಾರ್ಯಕ್ರಮಗಳಿಗೆ ಬರುವ ಭಕ್ತಾದಿಗಳಿಂದ ವಂತಿಗೆ ಸಂಗ್ರಹಿಸಿ, ಗುಜರಾತ್‌ ಸಂತ್ರಸ್ತರ ನೆರವಿಗೆ ಕಳುಹಿಸಿಕೊಡಲಾಗುವುದು ಎಂದು ಸ್ವಾಮೀಜಿ ಹೇಳಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X