Get Updates
Get notified of breaking news, exclusive insights, and must-see stories!

ಬ್ಯಾಂಕ್‌ ಅವಶೇಷಗಳಡಿ ಭದ್ರವಾಗಿದ್ದ 20 ಕೋಟಿ ರುಪಾಯಿ

ಬಚಾವ್‌ : ಎಂಟು ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ ಬಚಾವ್‌ ಜಿಲ್ಲೆಯ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಕಟ್ಟದ ಅವಶೇಷಗಳಡಿ ಹೂತು ಹೋಗಿದ್ದ 20 ಕೋಟಿ ರೂಪಾಯಿಗಳನ್ನು ಶುಕ್ರವಾರ ಸೇನೆ ಹೊರತೆಗೆದಿದೆ.

ಗೋದ್ರೇಜ್‌ ಕಂಪೆನಿಯ ಬೀಗ ತೆರೆಯುವ ಪರಿಣತರನ್ನು ಕರೆಸಿ ಬ್ಯಾಂಕಿನ ಭದ್ರತಾ ಕೋಣೆಯ ಬೀಗ ತೆಗೆದು 20 ಕೋಟಿ ರೂಪಾಯಿ ಹಣವನ್ನು ಹೊರ ತೆಗೆಯಲಾಯಿತು. ಇದರ ಜೊತೆಗೆ ಗ್ರಾಹಕರಿಗೆ ಸೇರಿದ ಮೂರು ಲಾಕರ್‌ಗಳನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಜನವರಿ 26ರಂದು ಸಂಭವಿಸಿದ್ದ ಭೀಕರ ಭೂಕಂಪದಲ್ಲಿ ಬಚಾವ್‌ ಜಿಲ್ಲೆ ನೆಲಕಚ್ಚಿತ್ತು. ಎಸ್‌ಬಿಐನ ಬಹುಮಹಡಿ ಕಟ್ಟಡ ಸಂಪೂರ್ಣ ನಾಶವಾಗಿದ್ದು, ಹಣ ವಾಪಾಸು ಸಿಗುವ ಭರವಸೆಯಿರಲಿಲ್ಲ. ಬ್ಯಾಂಕಿನ ವಶದಲ್ಲಿದ್ದ ಸಂಪೂರ್ಣ ಹಣ ಯಾವುದೇ ಕಳ್ಳ ಕಾಕರ ಪಾಲಾಗದೇ ಮರಳಿ ದೊರೆತಿರುವುದು ಬ್ಯಾಂಕಿನ ಅಧಿಕಾರಿಗಳಿಗೆ ಸಮಾಧಾನ ತಂದಿದೆ.

(ಇನ್ಫೋ ವಾರ್ತೆ)

ಮುಖಪುಟ
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+