ವೀರಪ್ಪನ್ ಬಗ್ಗೆ ಪೊಲೀಸರಿಗೆ ಸುಳಿವು ನೀಡಿದ್ದ ಅಯ್ಯಪ್ಪನ್ ನಾಪತ್ತೆ
(ಕೊಯಮತ್ತೂರು ಬಾತ್ಮೀದಾರರಿಂದ)
ಕೊಯಮತ್ತೂರು : ಇನ್ನೇನು ಈಗಲೋ ಆಗಲೋ ವೀರಪ್ಪನ್ನನ್ನು ಹಿಡಿದೇ ತೀರುತ್ತೇವೆಂದು ಪಣ ತೊಟ್ಟಿರುವ ಎಸ್ಟಿಎಫ್ ಪೊಲೀಸರ ತೀವ್ರ ಕಾರ್ಯಾಚರಣೆ ನಡೆದಿರುವಂತೆಯೇ, ಈ ಕಾರ್ಯಾಚರಣೆಗೆ ಕಾರಣವಾಗಿರುವ ಪೊಲೀಸರ ಆಸಾಮಿ ನಾಪತ್ತೆಯಾಗಿದ್ದಾನೆ.
ಹೆಸರು ಅಯ್ಯಪ್ಪನ್. ವೀರಪ್ಪನ್ ಚಲನವಲನಗಳ ಬಗ್ಗೆ ಪತ್ತೆ ಮಾಡಲು ಈ ವ್ಯಕ್ತಿಯನ್ನು ಪೊಲೀಸರು ನಿಯೋಜಿಸಿದ್ದರು. ತಮಿಳುನಾಡು- ಕೇರಳ ಗಡಿಭಾಗದ ಸಾವಂತಿ ಅರಣ್ಯ ಪ್ರದೇಶದಲ್ಲಿ ವೀರಪ್ಪನ್ ಹಾಗೂ ಸಹಚರರು ಇದ್ದಾರೆ ಎಂಬುದನ್ನು ಪತ್ತೆ ಮಾಡಿದ್ದೇ ಅಯ್ಯಪ್ಪನ್. ಇದಕ್ಕಾಗಿ ಈತನಿಗೆ ಪೊಲೀಸರು 10 ಸಾವಿರ ರುಪಾಯಿ ಬಹುಮಾನವನ್ನೂ ಕೊಟ್ಟಿದ್ದಾರೆ.
ಆದರೆ ಬುಧವಾರದಿಂದ ಈತ ನಾಪತ್ತೆಯಾಗಿದ್ದು, ಈ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಪೊಲೀಸರು ದೂರು ದಾಖಲಿಸಿಕೊಂಡು ತಲಾಷು ನಡೆಸುತ್ತಿದ್ದಾರೆ.
ವೀರಪ್ಪನ್ ತಂಡವೇ ಈತನನ್ನು ಅಪಹರಿಸಿದೆ ಎಂಬ ಬಲವಾದ ಗುಮಾನಿಗಳಿದ್ದು, ಪ್ರಕರಣಕ್ಕೆ ಹೊಸ ತಿರುವು ಬಂದಿದೆ. ಅಷ್ಟೊಂದು ಬಿಗಿ ಪೊಲೀಸ್ ಪಹರೆಯ ನಡುವೆಯೂ ಅಯ್ಯಪ್ಪನ್ ಕಾಣೆಯಾಗಿರುವುದು ಪೊಲೀಸರ ಮಾನಸಿಕ ಸ್ಥೈರ್ಯಕ್ಕೆ ಮತ್ತೊಂದು ಸವಾಲೆಸೆದಿದೆ. ಕೊಯಮತ್ತೂರಿನ ನಮ್ಮ ಬಾತ್ಮೀದಾರ ಪೊಲೀಸರಿಂದ ಈ ಮಾಹಿತಿಯನ್ನು ಸಂಗ್ರಹಿಸಿ ತಂದಿದ್ದಾರೆ.
ವಾರ್ತಾಸಂಚಯ
ಮುಖಪುಟ / ವೀರಪ್ಪನ್ ಶಿಕಾರಿ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications