ಕಾಡುಗಳ್ಳನ ಸುಳಿವು ನೀಡಿದ ವ್ಯಕ್ತಿಗೆ ಬಹುಮಾನ,ಕುಟುಂಬಕ್ಕೆ ರಕ್ಷಣೆ
ಕೊಯಮತ್ತೂರು: ತಮಿಳುನಾಡಿನ ಎಸ್‌ಟಿಎಫ್ ಅಧಿಕಾರಿ ಕೆ. ರಾಜೇಂದ್ರನ್ ಪ್ರಕಾರ ವೀರಪ್ಪನ್ ಬಗ್ಗೆ ಪ್ರಥಮ ಸುಳಿವು ನೀಡಿದ ಅಯ್ಯಪ್ಪನ್ ಎಂಬ ವ್ಯಕ್ತಿಗೆ 10 ಸಾವಿರ ರುಪಾಯಿ ಬಹುಮಾನ ನೀಡಲಾಗಿದೆ. ಆತನ ಕುಟುಂಬಕ್ಕೆ ರಕ್ಷಣೆ ನೀಡಲಾಗಿದೆ.
ಈ ಮಧ್ಯೆ ಎಸ್‌ಟಿಎಫ್‌ನಲ್ಲೇ ಹೊಗೆಯಾಡುತ್ತಿರುವ ಭಿನ್ನಮತ ಕಾಡುಗಳ್ಳನಿಗೆ ವರದಾನವಾಗಿದೆ. ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯ ಕಾರ್ಯವೈಖರಿಯನ್ನು ಕೇರಳದ ಮುಖ್ಯಮಂತ್ರಿ ಇ.ಕೆ. ನಯನಾರ್ ಟೀಕಿಸಿದ್ದಾರೆ ಇದಿಷ್ಟೂ ಗುರುವಾರ ಬೆಳಗ್ಗೆ ವರೆಗಿನ ವೀರಪ್ಪನ್ ಶಿಕಾರಿಯ ಮುಖ್ಯಾಂಶಗಳು.
ಕೇರಳ ಗಡಿಯಲ್ಲಿ ಅಲೆದಾಡುತ್ತಿರುವ ನರಹಂತಕ ವೀರಪ್ಪನ್‌ನನ್ನು ಹಿಡಿಯಲು ಹಾಗೂ ಜಂಟಿ ಕಾರ್ಯಪಡೆಗೆ ನೆರವಾಗಲೆಂದು ತಮಿಳುನಾಡು, ವಿಶೇಷ ಕಮಾಂಡೊ ಪಡೆ ರಚಿಸಿದೆ. ಈ ಪಡೆ ಎಸ್‌ಟಿಎಫ್‌ನ ಅಂಗಸಂಸ್ಥೆಯಂತೆ ಕಾರ್ಯನಿರ್ವಹಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತಮಿಳುನಾಡು ಪೊಲೀಸರ ಅಸಹಕಾರದಿಂದ ವೀರಪ್ಪನ್ ಶಿಕಾರಿ ವಿಳಂಬವಾಗುತ್ತಿದೆ ಎಂದು ಕರ್ನಾಟಕ ವಿಶೇಷ ಕಾರ್ಯಾಚರಣೆ ಪೊಲೀಸರು ದೂರಿದ್ದಾರೆ. ಚಿನ್ನೈಂಬುದಿಯಿಂದ 2 ಕಿ.ಮೀಟರ್ ದೂರದಲ್ಲಿ ವೀರಪ್ಪನ್ ಇದ್ದಾನೆ ಎಂಬ ಸುಳಿವು ದೊರೆದಾಗ ಇನ್ಸ್‌ಪೆಕ್ಟರ್ ರಾಮಲಿಂಗಂ ಎಸ್‌ಟಿಎಫ್‌ಗೆ ವಿಷಯ ತಿಳಿಸದೇ ತಾವೇ ಅಲ್ಲಿಗೆ ತೆರಳಿದರು. ಹೀಗಾಗಿ ವೀರಪ್ಪನ್ ತಪ್ಪಿಸಿಕೊಂಡ ಎಂಬುದು ಕರ್ನಾಟಕ ಪೊಲೀಸರ ಆರೋಪ.
ಆದರೆ, ಕರ್ನಾಟಕ ಪೊಲೀಸರಿಗೆ ನಾವು ಎಲ್ಲ ರೀತಿಯ ನೆರವು, ಸಹಕಾರ ನೀಡುತ್ತಿದ್ದೇವೆ ಎಂಬುದು ತಮಿಳುನಾಡು ಪೊಲೀಸರ ಹೇಳಿಕೆ. ಯಾರು ಏನೇ ಹೇಳಲಿ ಸದ್ಯಕ್ಕಂತೂ ವೀರಪ್ಪನ್ ಪೊಲೀಸರ ಕಣ್ಣಿಗೆ ಮಣ್ಣೆರಚಿ ಅಲೆಯುತ್ತಿದ್ದಾನೆ. ತಪ್ಪಿಸಿಕೊಳ್ಳುತ್ತಿದ್ದಾನೆ.
ವಾರ್ತಾಸಂಚಯ
ಮುಖಪುಟ / ವೀರಪ್ಪನ್ ಶಿಕಾರಿ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications