Get Updates
Get notified of breaking news, exclusive insights, and must-see stories!

‘8 ವರ್ಷಗಳಿಂದ ರೋರಿಚ್‌ ಅವರ ಅತೃಪ್ತ ಆತ್ಮ ಅಲೆಯುತ್ತಿದೆ’

ಬೆಂಗಳೂರು : ಅಂತರರಾಷ್ಟ್ರೀಯ ಖ್ಯಾತಿಯ ಚಿತ್ರಕಾರ ಸ್ವೆಟೋಸ್ಲಾವ್‌ ರೋರಿಚ್‌ ಅವರ ಸಮಾಧಿಯನ್ನು ರಷ್ಯಾದ ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ಸ್ಥಾಪಿಸುವ ಕುರಿತು ಭಾರತ ಸರಕಾರದೊಡನೆ ಸಮಾಲೋಚಿಸಿರುವುದಾಗಿ ರಷ್ಯಾದ ರಾಯಭಾರಿ ಅಲೆಕ್ಸಾಂಡರ್‌ ಎಂ. ಕಡಕಿನ್‌ ಗುರುವಾರ ಹೇಳಿದ್ದಾರೆ.

ರಷ್ಯಾದಲ್ಲಿಯೇ ತನ್ನ ದೇಹ ಸಮಾಧಿ ಮಾಡಬೇಕು ಎಂಬುದು ಸ್ವೇಟೋಸ್ಲಾವ್‌ ಅವರ ಕೊನೆಯ ಆಸೆಯಾಗಿತ್ತು. ಅವರು ಮೃತರಾಗಿ ಎಂಟು ವರ್ಷಗಳಾದರೂ ಅವರ ಆಸೆ ನೆರವೇರಿಸುವುದು ಸಾಧ್ಯವಾಗಲಿಲ್ಲ. ಎಂಟು ವರ್ಷಗಳಿಂದ ಅವರ ಆತ್ಮ ಶಾಂತಿಯಿಲ್ಲದೇ ಅಲೆಯುತ್ತಿದೆ ಎಂದು ಕಡಕಿನ್‌ ಸುದ್ದಿಗಾರರೊಡನೆ ಮಾತನಾಡುತ್ತಾ ಹೇಳಿದರು.

ಯಾವ ಧರ್ಮವೇ ಆಗಲಿ, ವ್ಯಕ್ತಿಯ ಕೊನೆಯ ಆಸೆ ಪೂರೈಸಲು ಅನುಮತಿ ನೀಡುತ್ತದೆ. ರೋರಿಚ್‌ ಅವರ ಜನ್ಮ ಶಮಾನೋತ್ಸವ 2004ನೇ ಇಸವಿಯಲ್ಲಿ ನಡೆಯಲಿದ್ದು, ಅದಕ್ಕೆ ಮುಂಚೆ ಕೋರ್ಟ್‌ ವಿವಾದಗಳೆಲ್ಲ ಇತ್ಯರ್ಥವಾಗಿ ರೋರಿಚ್‌ ಅವರ ಸಮಾಧಿಯನ್ನು ರಷ್ಯಾಕ್ಕೆ ಕೊಂಡೊಯ್ಯಬಹುದು ಎಂಬ ಭರವಸೆ ತಮಗಿದೆ. ಅಲ್ಲದೆ ಈಗಾಗಲೇ ಪೀಟರ್ಸ್‌ಬರ್ಗ್‌ನಲ್ಲಿ ರೋರಿಚ್‌ ದೇಹಕ್ಕೆ ಸಮಾಧಿ ರಚಿಸಲು ತಯಾರಿ ಆರಂಭವಾಗಿದೆ ಎಂದು ಹೇಳಿದ ಕಡಕಿನ್‌, ತಾತಗುಣಿ ಎಸ್ಟೇಟ್‌ ಭೂಮಿ ಮತ್ತು ರೋರಿಚ್‌ ಕಲಾಕೃತಿಗಳನ್ನು ವಶಪಡಿಸಿಕೊಳ್ಳುವ ಇಂಗಿತ ರಷ್ಯಾಕ್ಕಿದೆ ಎಂಬ ಪತ್ರಿಕಾ ವರದಿಗಳನ್ನು ಆಧಾರರಹಿತ ಎಂದು ತಳ್ಳಿ ಹಾಕಿದರು.

ರೋರಿಚ್‌ ಬದುಕಿದ್ದ ತಾತಗುಣಿ ಎಸ್ಟೇಟ್‌ನ ದುಃ ಸ್ಥಿತಿಯ ಬಗ್ಗೆ ಅವರು ವಿಷಾದ ವ್ಯಕ್ತಪಡಿಸುತ್ತಾ ಅವರು ಈ ಬಗ್ಗೆ ಕರ್ನಾಟಕ ಸರಕಾರದ ಗಮನ ಸೆಳೆಯಲಾಗಿದೆ. ಅಲ್ಲಿನ ವೈಭವಯುತ ಕಟ್ಟಡದ ಛಾವಣಿ ಸೋರುತ್ತಿದ್ದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮುಖ್ಯ ಮಂತ್ರಿ ಎಸ್‌.ಎಂ. ಕೃಷ್ಣ ಅವರು ತಮಗೆ ಭರವಸೆ ನೀಡಿರುವುದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಅವರು ‘ನಿಕೋಲಾಸ್‌ ರೋರಿಚ್‌ ಇನ್‌ ಇಂಡಿಯನ್‌ ಜರ್ನಲ್ಸ್‌ ’ ಎಂಬ ಪುಸ್ತಕ ಬಿಡುಗಡೆ ಮಾಡಿದರು.

(ಇನ್ಫೋ ವಾರ್ತೆ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+