ಇದು ಗುಜರಾತ್ ದುರಂತ ! ಬಯಲಿಗೆ ಬಂದ ಭಗವಂತ ! !
ಕೆ.ಜೆ. ಅಲೆಗ್ಸಾಂಡರ್
ಅಹಮದಾಬಾದ್ : ಮನೆ - ಮಂದಿಯನ್ನು ಹೊತ್ತು ಹೋದ ಹಿಂದೆಂದೂ ಕಾಣದಷ್ಟು ಭೀಕರವಾದ ಭೂಕಂಪ- ಉಳಿದ ನತದೃಷ್ಟರಿಗೆ ಉಳಿಸಿಹೋಗಿರುವುದು ಹಿಡಿ ತುಂಬ ನೆನಪು, ಬದುಕು ಪೂರ್ತಿ ಉಂಡರೂ ತೀರದಷ್ಟು ನೋವು. ಧರೆ ಉರಿದರೆ.. ಸಂತ್ರಸ್ತರು ಮೊರೆ ಹೋಗುವುದಾದರೂ ಎಲ್ಲಿಗೆ ? ಪ್ರಾರ್ಥಿಸಿ ಇಷ್ಟು ನೆಮ್ಮದಿಯನ್ನಾದರೂ ದಕ್ಕಿಸಿಕೊಳ್ಳುವ ಎಂದರೆ, ಮಂದಿರಗಳೂ ಮಣ್ಣಾಗಿವೆ. ಅಲ್ಲಿಗೆ, ವಸುಂಧರೆಗೆ ಮಾನವ- ದೇವ ಅನ್ನುವ ಯಾವ ಭೇದವೂ ಇಲ್ಲವೆನ್ನವುದು ಸ್ಪಷ್ಟವಾಯಿತು.
ಅಹಮದಾಬಾದ್, ಕಛ್, ರಾಜ್‌ಕೋಟ್ ಜಿಲ್ಲೆಗಳಲ್ಲಿನ ಬಹುತೇಕ ಮಂದಿರ- ಮಸೀದಿ- ಇಗರ್ಜಿಗಳು ಮಟ್ಟಸವಾಗಿ ಮಣ್ಣಾಗಿವೆ. 575 ವರ್ಷಗಳ ಇತಿಹಾಸ ಒಡಲಲ್ಲಿಟ್ಟುಕೊಂಡ ಜಾಮಾ ಮಸೀದಿ ಸೇರಿದಂತೆ ಅಹಮದಾಬಾದ್, ಕಛ್ ಹಾಗೂ ರಾಜ್‌ಕೋಟ್ ಪ್ರಾಂತ್ಯಗಳಲ್ಲಿ ನ 450 ಮಸೀದಿಗಳು ಬಹುತೇಕ ನಾಶಗೊಂಡಿವೆ. ಅದೇರೀತಿ, ದ್ವಾರಕದಲ್ಲಿನ ಕೃಷ್ಣ ದೇವಾಲಯ ಸೇರಿದಂತೆ ಮೂರು ಪ್ರಮುಖ ದೇವಾಲಯಗಳು ಹೆಚ್ಚಿನ ಹಾನಿಗೊಳಗಾಗಿದ್ದರೆ, 7 ಇಗರ್ಜಿಗಳು ಕುಸಿದು ಬಿದ್ದಿವೆ.
ಜಾಮಾ ಮಸೀದಿ ನಿರ್ಮಾಣವಾದದ್ದು 1475 ರಲ್ಲಿ . ಕಿಂಗ್ ಅಹಮದ್ ಷಾ ಇದರ ನಿರ್ಮಾತೃ . ಅವನ ಹೆಸರೇ ಪಟ್ಟಣಕ್ಕೂ (ಅಹಮದಾಬಾದ್) ಅಂಟಿಕೊಂಡಿದ್ದು ಇತಿಹಾಸ. ನಗರದ ಸುನ್ನಿ ಮುಸ್ಲಿಂ ವಕ್ಫ್ ಸಮಿತಿಯ ಕಾರ್ಯದರ್ಶಿಗಳ ಪ್ರಕಾರ, ಮಸೀದಿಯ ಪುನರ್ ನಿರ್ಮಾಣ ಸಾಧ್ಯವೇ ಇಲ್ಲ . ಆತ ಹೇಳುವಂತೆ 500 ವರ್ಷಗಳಷ್ಟು ಹಳೆಯದಾದ ಮತ್ತೊಂದು ಮಸೀದಿ- ಬಿಬಿಜೀಸ್ ಕೂಡ ತೀವ್ರವಾಗಿ ಘಾಸಿಗೊಂಡಿದೆ.
ವಿಶ್ವಹಿಂದೂ ಪರಿಷತ್ ಸೆಕ್ರೆಟರಿ ಜನರಲ್ ಪ್ರವೀಣ್ ತೊಗಾಡಿಯ ಪ್ರಕಾರ - ಭುಜ್‌ನಲ್ಲಿನ ಪ್ರಾಚೀನ ಸ್ವಾಮಿ ನಾರಾಯಣ ದೇಗುಲ ಸಂಪೂರ್ಣ ನಾಶವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಬಹುತೇಕ ದೇವಸ್ಥಾನಗಳು ಭೂಕಂಪಕ್ಕೆ ಬಲಿಯಾಗಿವೆ. ದ್ವಾರಕದಲ್ಲಿನ ಕೃಷ್ಣ ದೇಗುಲ ಹಾಗೂ ಆತನ ಮೂವರು ರಾಣಿಯರ ಸ್ಥಳಗಳು ಹೆಚ್ಚಿನ ಹಾನಿಗೆ ತುತ್ತಾಗಿವೆ.
ಅಖಿಲ ಭಾರತ ಕ್ರಿಶ್ಚಿಯನ್ ಸಂಘಟನೆಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಸ್ಯಾಂಸನ್ ಪ್ರಕಾರ - ಮೊರ್ಬಿ, ಬಚಾಹು, ಭುಜ್, ಡೀಸಾ, ಸುರೇಂದ್ರ ನಗರ್, ಜಾಮ್‌ನಗರ್ ಹಾಗೂ ಅಹಮದಾಬಾದ್‌ಗಳಲ್ಲಿನ ಇಗರ್ಜಿಗಳು ಕುಸಿದಿವೆ.
ಧರ್ಮ ಹೊರತಾದ ಬದುಕನ್ನು ಕಲ್ಪಿಸಿಕೊಳ್ಳುವುದು ಭಾರತೀಯರಿಗೆ ಅಸಾಧ್ಯವಾದ್ದರಿಂದ, ಗುಜರಾತ್‌ನಲ್ಲೀಗ ಭೂಕಂಪ ಸಂತ್ರಸ್ತರ ಪರಿಹಾರ ಕಾಮಗಾರಿಗಳ ಜೊತೆಯಲ್ಲಿ ನಾಶಗೊಂಡ ಪ್ರಾರ್ಥನಾ ಮಂದಿರಗಳ ಪುನರುದ್ಧಾರವೂ ನಡೆಯಬೇಕಾಗಿದೆ. ಭಗವಂತನನ್ನು ಭಕ್ತ ಕಾಪಾಡಲಿ !
(ಯುಎನ್‌ಐ)
| ಮುಖಪುಟ |
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications