ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಗೆಳೆಯರಿಗೆ ಎಷ್ಟು ಮತ್ತು ಹೇಗೆ ಸಹಾಯ ಮಾಡಲಿ ಎಂಬ ಸಣ್ಣ ಗೊಂದಲವನ್ನೇ ಮನಸ್ಸಿನಲ್ಲಿಟ್ಟುಕೊಳ್ಳುತ್ತೀರಿ. ಅವರ ಕಷ್ಟ ಸುಖದಲ್ಲಿ ಭಾಗಿಯಾಗುವುದರಿಂದ ಕಿಸೆ ಖಾಲಿಯಾಗುತ್ತದೆ ಅನ್ನೋ ಬೇಜಾರಿಟ್ಟುಕೊಳ್ಳುವುದು ತರವೇ?ವೃಷಭ : ನಿಮ್ಮ ಬಳಿ ಇರುವ ರಹಸ್ಯಗಳನ್ನು ಕಾಪಾಡಿಕೊಳ್ಳಬೇಕೆಂದು ಇವತ್ತೆಲ್ಲಾ ಹೆಣಗಾಡುತ್ತೀರಿ. ಇದರಿಂದ ನೀವು ಹೇಳುವ ಪ್ಲಾನ್‌ಗಳು, ಯೋಜನೆಗಳು ನಿಮ್ಮ ಸಹೋದ್ಯೋಗಿಗಳಿಗೆ ಅರ್ಥವಾಗುವುದು ಕಷ್ಟ.
ಮಿಥುನ : ಸುಮ್ಮನೇ ಬಿಂದಾಸ್ ಆಗಿರಬೇಕು ಅಂತ ಇಣುಕುವ ಯೋಚನೆಯನ್ನು ಯಾಕೆ ಹಿಂದೆ ತಳ್ಳುತ್ತೀರಿ. ಕೆಲಸದಲ್ಲಿ ನಿರಾಸಕ್ತಿ ಇದ್ದರೆ ಸುಮ್ಮನೇ ಕಿರಿಕಿರಿಗಳನ್ನು ಸೃಷ್ಠಿಸಿಕೊಳ್ಳಬೇಕಾದೀತು.
ಕಟಕ : ನೀವು ಮತ್ತೆ ನಿಮ್ಮ ಸ್ನೇಹಿತರ ನಡುವೆ ಸಣ್ಣದೊಂದು ಅಂತರವಿದೆ ಅಂತ ಸಂಶಯ ಪಟ್ಟುಕೊಂಡು ಮನಸ್ಸಿಗೆ ಕಿರಿಕಿರಿ ಮಾಡಿಕೊಳ್ಳುತ್ತೀರಿ. ನಿಮ್ಮ ತತ್ವಗಳು, ಯೋಚನೆಗಳನ್ನು ಇತರರಿಗೆ ವಿವರಿಸುವಲ್ಲಿ ಸೋಲುತ್ತೀರಿ. ಧನಲಾಭವಿದೆ.
ಸಿಂಹ : ಅವಕಾಶಗಳಿದ್ದಾಗ ಸಹನೆಯಿಂದ ಅವುಗಳನ್ನು ಎದುರುಗೊಳ್ಳಿ. ನುಗ್ಗಿದರೆ ಕೆಲಸವಾಗದು. ನಿಮ್ಮಿಂದ ನಿರ್ವಹಿಸಲಾಗದ ಕೆಲಸಗಳ ಬಗ್ಗೆ ಬೇಜಾರು ಬೇಡ.
ಕನ್ಯಾ : ಇವತ್ತು ರಾಜಯೋಗ, ಬಿಡಿ. ಕೈತುಂಬಾ ಕೆಲಸವಿದ್ದರೂ ಎಲ್ಲ ಫಟಾ ಫಟ್ ಅಂತ ನಡೆದು ಹೋಗುತ್ತದೆ. ಮಿತ್ರರ ಸಹಾಯವಿದೆ. ಸಂಜೆ ಪಾರ್ಟಿ ಕರೆಯಲು ಅಡ್ಡಿಯಿಲ್ಲ.
ತುಲಾ : ಮದುವೆ ಪ್ರಸ್ತಾಪಗಳನ್ನು ಮಾಡಲು ಇವತ್ತು ಒಳ್ಳೆ ದಿನ. ಬದುಕಿನ ತಿರುವು ಇದಾದ್ದರಿಂದ ಸ್ವಾರ್ಥವನ್ನೆಲ್ಲಾ ಪಕ್ಕಕ್ಕೆ ತಳ್ಳಿದರೆ ಮುಂದೆ ಸುಂದರ ದಿನಗಳು ನಿಮ್ಮನ್ನು ಎದುರುಗೊಳ್ಳುತ್ತವೆ.
ವೃಶ್ಚಿಕ : ನಿಮ್ಮ ಸ್ನೇಹಿತರು ನಿಮ್ಮನ್ನು ಎಷ್ಟು ಹಚ್ಚಿಕೊಂಡಿದ್ದಾರೆ ಅನ್ನುವ ಕಲ್ಪನೆಯಿಲ್ಲದೆ ಸುಮ್ಮನೇ ತಗಾದೆ ತೆಗೆಯುತ್ತೀರಿ. ಮನೆಯಲ್ಲಿ ಇರುವ ಆತಂಕಕ್ಕೆ ಆಫೀಸಿನ ಕಿರಿಕಿರಿಯನ್ನು ಸೇರಿಸಿ ದಿನವನ್ನು ಹಾಳು ಮಾಡಿಕೊಳ್ಳಬೇಡಿ. ಹಣ ಕೈಬಿಡುವ ಸಂಭವವಿದೆ.
ಧನಸ್ಸು : ನಿಮ್ಮ ಅಭಿಪ್ರಾಯವನ್ನು ನೇರವಾಗಿ ಹೇಳಿದರೆ ಯಾರೂ ನೊಂದುಕೊಳ್ಳುವುದಿಲ್ಲ. ಆರ್ಥಿಕ ಕ್ಷೇತ್ರದಲ್ಲಿನ ಮುಗ್ಗಟ್ಟು ಇವತ್ತು ಕಡಿಮೆಯಾಗುವ ನಿರೀಕ್ಷೆ ಇದೆ. ಹಾಗಂತ ಕೈ ಸಡಿಲ ಬಿಟ್ಟೀರಾ ಕೆಟ್ಟಿರಿ. ದಾಕ್ಷಿಣ್ಯ ಕಡಿಮೆ ಮಾಡಬಾರದೇ?
ಮಕರ : ನಿಮ್ಮ ಮೇಲಿರುವ ಜವಾಬ್ದಾರಿಗಳನ್ನು ಮರೆತು ಬಿಡಬೇಡಿ. ಕ್ಷಣಿಕ ನೋವಿಗೆ ಹೆದರಿ ನಿಮಗೆ ಬೇಡದ ಹೊರೆಯನ್ನು ತಲೆ ಮೇಲೆ ತಂದುಕೊಳ್ಳುವುದೇಕೆ ? ನೀವು ಒಂದಿಷ್ಟು ಮನಸ್ಸು ಮಾಡಿದರೆ ಎಲ್ಲವೂ ಸರಿಯಾಗುತ್ತದೆ. ಯಾಕೆ ಲೇಟು?
ಕುಂಭ : ವೈಯಕ್ತಿಕ ಸೋಲುಗಳನ್ನು ವ್ಯವಹಾರ ಕ್ಷೇತ್ರಕ್ಕೆ ಅನ್ವಯಿಸಿದರೆ ಕೆಲಸ ಸಾಗುತ್ತದೆಯೇ ? ನೀವು ಹಾಕಿಕೊಂಡ ಹೊಸ ಯೋಜನೆಯನ್ನು ಕಾರ್ಯಗತಗೊಳಿಸುವುದಕ್ಕೆ ಮುಂಚೆ ವೈಯಕ್ತಿಕವಾಗಿ ಸುಧಾರಿಸಿಕೊಳ್ಳಿ.
ಮೀನ : ಸೆಂಟಿಮೆಂಟಲ್ ಅಟ್ಯಾಚ್‌ಮೆಂಟ್ ಎಲ್ಲ ನಿಮಗೆ ಸರಿಹೋಗುವುದಿಲ್ಲ. ನಿಮ್ಮ ಗೊಂದಲ ಅಚ್ಚಾ ವ್ಯವಹಾರ ಕ್ಷೇತ್ರದ್ದಾಗಿರುವುದರಿಂದ ಇವತ್ತು ಅಂತಹ ಸೋಲೇನೂ ಇರುವುದಿಲ್ಲ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications