ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌ ಸಂತ್ರಸ್ತರ ನೆರವಿಗೆ ಸಂಗೀತ ದಿಗ್ಗಜರಿಂದ ಕಚೇರಿ

By Staff
|
Google Oneindia Kannada News

ಲಂಡನ್‌ : ಸರೋದ್‌ ವಾದಕ ಉಸ್ತಾದ್‌ ಅಮ್ಜದ್‌ ಅಲಿ ಖಾನ್‌ ಹಾಗೂ ಕೊಳಲಿಂದ ಸುಶ್ರಾವ್ಯ ನಾದ ಹೊಮ್ಮಿಸುವ ಹರಿಪ್ರಸಾದ್‌ ಚೌರಾಸಿಯಾ ಬ್ರಿಟಿಷ್‌ ಸಂಗೀತ ದಿಗ್ಗಜರೊಂದಿಗೆ ಸೇರಿ ಒಂದು ಕಚೇರಿ ನಡೆಸಲಿದ್ದಾರೆ. ಫೆಬ್ರವರಿ 18ರಂದು ನಡೆಯಲಿರುವ ಈ ಕಚೇರಿಯ ವೈಶಿಷ್ಟ್ಯವೆಂದರೆ, ಅದರಿಂದ ಬರುವ ಹಣವನ್ನು ಗುಜರಾತ್‌ ಸಂತ್ರಸ್ತರಿಗೆ ಕೊಡಲಾಗುವುದು.

ಅಮ್ಜದ್‌ ಅಲಿ ಖಾನ್‌ ಪುತ್ರರಾದ ಅಮಾನ್‌ ಮತ್ತು ಅಯಾನ್‌, ಚೌರಾಸಿಯಾ ಶಿಷ್ಯ ರೂಪಕ್‌ ಕುಲಕರ್ಣಿ ಸಹ ಈ ಒಳ್ಳೆ ಕೆಲಸದಲ್ಲಿ ಭಾಗಿಯಾಗಲಿದ್ದಾರೆ. ಭಾರತದ ಸಂಗೀತದ ಗಂಧ- ಗಾಳಿ ತುಂಬಿಕೊಂಡಿರುವ ಹಾಗೂ ಭಾರತೀಯ ಸಂಗೀತಗಾರರ ಜೊತೆ ಕೆಲಸ ಮಾಡಿರುವ ಜಾಸ್‌ ಗಿಟಾರ್‌ ದೊರೆ ಜಾನ್‌ ಮೆಕ್‌ ಲಾಗ್ಲಿನ್‌ ಕೂಡ ಕಚೇರಿಯಲ್ಲಿ ಸಂಗೀತದಲೆ ಹೊಮ್ಮಿಸಲಿದ್ದಾರೆ.

‘ಮೈಕೆಲ್‌ ನೈಮ್ಯಾನ್‌ ಬ್ಯಾಂಡ್‌’ ಕಾರ್ಯಕ್ರಮವನ್ನು ಪ್ರಾರಂಭಿಸಲಿದ್ದು, ನಂತರ ಹಂತ ಹಂತವಾಗಿ ಭಾರತೀಯ ಸಂಗೀತ ಹಾಗೂ ಪಾಶ್ಚಾತ್ಯ ಸಂಗೀತದ ರಸಬುತ್ತಿ ಬಿಚ್ಚಿಕೊಳ್ಳಲಿದೆ. ಕಚೇರಿಯ ಮತ್ತೊಂದು ಆಕರ್ಷಣೆ ಗುಜರಾತ್‌ನ ಜಾನಪದ ಗಾಯಕ ಪ್ರಫುಲ್‌ ದವೆ. ಸ್ಥಳ ರಾಯಲ್‌ ಫೆಸ್ಟಿವಲ್‌ ಹಾಲ್‌. ಬಿಡುವು ಮಾಡಿಕೊಂಡು ಸಹೃದಯರೆಲ್ಲಾ ಸಂಗೀತ ಸವಿಯಿರಿ.

(ಪಿಟಿಐ)

ಮುಖಪುಟ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X