ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುರತ್ಕಲ್‌ನಲ್ಲಿ 5 ಕೋಟಿ ರೂಪಾಯಿ ಹೆರಾಯಿನ್‌ ವಶ

By Staff
|
Google Oneindia Kannada News

ಸುರತ್ಕಲ್‌ : ಬೃಹತ್‌ ಹೆರಾಯಿನ್‌ ಮಾರಾಟ ಜಾಲವೊಂದನ್ನು ಮಂಗಳೂರಿನ ರೆವೆನ್ಯೂ ಇಂಟಲ್‌ಜೆನ್ಸಿ ವಿಭಾಗದ ಅಧಿಕಾರಿಗಳ ತಂಡ ಪತ್ತೆ ಹಚ್ಚಿ 5 ಕೋಟಿ ರೂಪಾಯಿ ಮೊತ್ತದ ಹರಾಯಿನ್‌ ವಶಪಡಿಸಿಕೊಂಡಿದೆ.

ಸುರತ್ಕಲ್‌ ಸಮೀಪ ಹೆರಾಯಿನ್‌ ಅನ್ನು ವಶಪಡಿಸಿಕೊಳ್ಳಲಾಗಿದ್ದು ಮಾರಾಟ ಜಾಲದಲ್ಲಿ ತೊಡಗಿದ್ದ ಆರೋಪಿ ಬಾಷಾ ಎಂಬಾತನನ್ನು ಬಂಧಿಸಲಾಗಿದೆ. ಉತ್ತರ ಕನ್ನಡ ಮೂಲದ ತಂಡವೊಂದು ಈ ಜಾಲದಲ್ಲಿ ಭಾಗಿಯಾಗಿರುವ ಸಂಶಯವಿದ್ದು, ಇನ್ನೂ ಇಬ್ಬರ ಬಂಧನಕ್ಕಾಗಿ ವ್ಯಾಪಕ ಶೋಧ ನಡೆಯುತ್ತಿದೆ ಎಂದು ಇಂಟ್‌ಜೆನ್ಸಿ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ.

ರೆವೆನ್ಯೂ ಇಲಾಖೆಯ ಉಪನಿರ್ದೇಶಕ ಕೆ.ಎ. ಥೋಮಸ್‌ ಮತ್ತು ಅಧೀಕ್ಷಕ ಪಿ. ರಾಮಕೃಷ್ಣ ಅವರ ನೇತೃತ್ವದಲ್ಲಿ ಹೆರಾಯಿನ್‌ ಮಾರಾಟ ಜಾಲ ಪತ್ತೆಗಾಗಿ ಕಳೆದ ಕೆಲ ಸಮಯದಿಂದ ಶೋಧ ಆರಂಭಿಸಲಾಗಿತ್ತು. ಹೆರಾಯಿನ್‌ ಖರೀದಿ ನೆಪದಲ್ಲಿ ಈ ಬೃಹತ್‌ ಜಾಲವನ್ನು ಪತ್ತೆ ಹಚ್ಚುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ವಶಪಡಿಸಿಕೊಂಡ ಹೆರಾಯಿನ್‌ ಅನ್ನು ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X